ಆರ್ ಆರ್ ಆರ್ ಸಿನಿಮಾದ ಬಳಿಕ ರಾಮ್ ಚರಣ್ (ರಾಮ್ ಚರಣ್) ಎರಡು ಸಿನಿಮಾಗಳಲ್ಲಿ ನಟಿಸಿದ್ದು, ಎರಡೂ ಸಿನಿಮಾ ಅಟ್ಟರ್ ಫ್ಲಾಫ್ ಆಗಿವೆ. ಆರ್ ಆರ್ ಆರ್ ಬಳಿಕ ‘ಆಚಾರ್ಯ’ ಮತ್ತು ‘ಗೇಮ್ ಚೇಂಜರ್’ ಸಿನಿಮಾಗಳಲ್ಲಿ ರಾಮ್ ಚರಣ್ ನಟಿಸಿದ್ದು, ಎರಡೂ ಸಿನಿಮಾಗಳು ಅಟ್ಟರ್ ಫ್ಲಾಫ್ ಆಗಿವೆ. ಇದೀಗ ಹೊಸ ಸಿನಿಮಾದ ಬಿಡುಗಡೆಗೆ ರಾಮ್ ಚರಣ್ ರೆಡಿ ಆಗುತ್ತಿದ್ದು, ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆಗಳಿವೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ, ಆದರೆ ರಾಮ್ ಚರಣ್ ಐಪಿಎಲ್ 2026ಗಾಗಿ ಕಾತರದಿಂದ ಎದುರು ನೋಡುತ್ತಿದ್ದಾರೆ.
ರಾಮ್ ಚರಣ್ ನಟಿಸಿರುವ ‘ಪೆದ್ದಿ’ ಸಿನಿಮಾ ಕ್ರಿಕೆಟ್ ಆಟದ ಕುರಿತಾದ ಕಥೆಯನ್ನು ಹೊಂದಿದ್ದು, ಸಿನಿಮಾದಲ್ಲಿ ನಾಯಕ ರಾಮ್ ಚರಣ್ ಹಳ್ಳಿಯೊಂದರ ಕ್ರಿಕೆಟ್ ಆಟಗಾರನ ಪಾತ್ರದಲ್ಲಿ ನಟಿಸಿದ್ದಾರೆ. ಇಲ್ಲವೇ ಸಿನಿಮಾದ ಪ್ರಚಾರವನ್ನು ಭಾರತದ ಕ್ರಿಕೆಟ್ ಹಬ್ಬವೇ ಆಗಿರುವ ಐಪಿಎಲ್‌ನಲ್ಲಿ ಚಿತ್ರತಂಡ ನಿರ್ಧರಿಸಿದೆ, ಇದೇ ಐಪಿಎಲ್ ಅನ್ನು ಗುರಿಯಾಗಿಸಿಕೊಂಡು ಹಲವು ಪ್ರಚಾರದ ಯೋಜನೆಗಳನ್ನು ಚಿತ್ರತಂಡ ಮಾಡಿಕೊಂಡಿದೆ.
ಮೂಲಗಳ ಪ್ರಕಾರ ಐಪಿಎಲ್ ನ ಮುಖ್ಯ ಇವೆಂಟ್ ನಲ್ಲಿ ‘ಪೆದ್ದಿ’ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡುವ ಯೋಜನೆ ಇದೆಯಂತೆ. ಅದರ ಜೊತೆಗೆ ರಾಮ್ ಚರಣ್ ಸಹ ಹಲವು ಐಪಿಎಲ್ ಪಂದ್ಯಗಳಿಗೆ ತೆರಳಿ ಅಲ್ಲಿಂದಲೇ ಸಿನಿಮಾದ ಪ್ರಚಾರ ಮಾಡಲಿದ್ದಾರೆ. ಹೈದರಾಬಾದ್ ತಂಡದ ಜೊತೆಗೆ ‘ಪೆದ್ದಿ’ ತಂಡ ಪ್ರಚಾರದ ಒಪ್ಪಂದ ಮಾಡಿಕೊಳ್ಳಲಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ. ಒಟ್ಟಾರೆ ಐಪಿಎಲ್ ಅನ್ನು ಸಂಪೂರ್ಣವಾಗಿ ತಮ್ಮ ಸಿನಿಮಾ ಪ್ರಚಾರಕ್ಕೆ ಬಳಸಿಕೊಳ್ಳಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಇದನ್ನೂ ಓದಿ:’ಪೆದ್ದಿ’ ಚಿತ್ರದ ‘ಹೋಯ್ ಹೋಯ್ ವೀರ’ ಹಾಡು ರಿಲೀಸ್; ರಾಮ್ ಚರಣ್ ಸ್ಟೆಪ್ಸ್ ಸೂಪರ್
‘ಪೆದ್ದಿ’ ಸಿನಿಮಾವು ಕ್ರಿಕೆಟಿಗನೊಬ್ಬನ ಕಥೆಯನ್ನು ಒಳಗೊಂಡಿದೆ. ಕ್ರಿಕೆಟ್ ಅನ್ನು ಅತಿಯಾಗಿ ಪ್ರೀತಿಸುವ ಹಳ್ಳಿ ಯುವಕನೊಬ್ಬನ ಕಥೆ ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಾಯಕಿ. ಕನ್ನಡದ ಶಿವಣ್ಣ ಸಹ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಬುಚ್ಚಿಬಾಬು ಸನಾ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಇವರು ‘ಉಪ್ಪೆನ’ ಸಿನಿಮಾ ನಿರ್ದೇಶಿಸಿದ್ದರು. ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ