Headlines

ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಮತ್ತೆ ಮಹಾ ಕುಸಿತ! ಇವತ್ತಿನ ಗೋಲ್ಡ್ ರೇಟ್ ಎಷ್ಟು?

ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಮತ್ತೆ ಮಹಾ ಕುಸಿತ! ಇವತ್ತಿನ ಗೋಲ್ಡ್ ರೇಟ್ ಎಷ್ಟು?

ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಮತ್ತೆ ಮಹಾ ಕುಸಿತ! ಇವತ್ತಿನ ಗೋಲ್ಡ್ ರೇಟ್ ಎಷ್ಟು?

ಬೆಂಗಳೂರು: ಇರಾನ್-ಇಸ್ರೇಲ್ ಯುದ್ದ ಆರಂಭವಾಗುತ್ತಿದ್ದಂತೆಯೇ ರಾಕೆಟ್ ವೇಗದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಗಳು ಮೇಲೇರಿತ್ತು. ಆದರೆ ಇದೀಗ ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಾಣುತ್ತಿದೆ. ಮಾರ್ಚ್ 05ರ ಬೆಳಗ್ಗೆ ಚಿನ್ನದ ಹಾಗೂ ಬೆಳ್ಳಿಯಲ್ಲಿ ಮತ್ತೆ ಕುಸಿತ ಕಂಡಿದೆ.

ಮಧ್ಯಪ್ರಾಚ್ಯದಲ್ಲಿ ಅಘೋಷಿತ ಯುದ್ದ ಪ್ರಾರಂಭವಾಗುತ್ತಿದ್ದಂತೆಯೇ ಚಿನ್ನದ ಮಾರುಕಟ್ಟೆಯಲ್ಲಿ ದಾಖಲೆಯ ಏರಿಕೆ ಕಂಡಿತ್ತು. ಚಿನ್ನದ ಬೆಲೆಯ ಏರಿಕೆಯನ್ನು ಕಂಡ ಗ್ರಾಹಕರು ಸದ್ಯದಲ್ಲೇ 10 ಗ್ರಾಮ್‌ಗೆ ಎರಡು ಲಕ್ಷ ರುಪಾಯಿ ಗಡಿ ದಾಟಬಹುದೇನೋ ಎಂದು ಅತಂಕಕ್ಕೆ ಒಳಗಾಗಿದ್ದರು.

ಯಾಕೆಂದರೆ ಮಾರ್ಚ್ 01ರಂದು 24 ಕ್ಯಾರಟ್ ಒಂದು ಗ್ರಾಮ್ ಚಿನ್ನಕ್ಕೆ ಬರೋಬ್ಬರಿ ದಾಖಲೆಯ 17,309 ರುಪಾಯಿ ತಲುಪಿತ್ತು. ಇನ್ನು ಅದೇ ದಿನ 22 ಕ್ಯಾರಟ್ ಒಂದು ಗ್ರಾಮ್ ಚಿನ್ನಕ್ಕೆ ಬರೋಬ್ಬರಿ 15,865 ರುಪಾಯಿಗಳಾಗಿತ್ತು. ಇದು ಚಿನ್ನ ಖರೀದಿಸುವವರ ನಿದ್ದೆಗೆಡಿಸುವಂತೆ ಮಾಡಿತ್ತು.

ಆದರೆ ಮಾರ್ಚ್ 02ರಿಂದ ನಿರಂತರವಾಗಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಬೆಲೆ ಇಳಿಕೆ ಕಾಣುತ್ತಿರುವುದು ಚಿನ್ನ ಗ್ರಾಹಕರ ಮುಖದಲ್ಲಿ ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಇದೀಗ ಮಾರ್ಚ್ 05ರ ಬೆಳಗ್ಗೆಯೂ ವೇಳೆಗೆ ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ಕುಸಿತ ಕಂಡಿದೆ.

ಇಂದು 24 ಕ್ಯಾರಟ್ 10 ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ 980 ರುಪಾಯಿ ಕುಸಿತ ಕಂಡಿದೆ. ಮಾರ್ಚ್ 05ರ ಬೆಳಗ್ಗೆ 24 ಕ್ಯಾರಟ್ ಒಂದು ಗ್ರಾಮ್ ಚಿನ್ನದ ಬೆಲೆ 16,353 ರುಪಾಯಿಗೆ ಬಂದು ನಿಂತಿದೆ.

ಇನ್ನೊಂದೆಡೆ 22 ಕ್ಯಾರಟ್ ಆಭರಣ ಚಿನ್ನದ ಬೆಲೆಯಲ್ಲೂ ಭಾರೀ ಇಳಿಕೆ ಕಂಡಿದೆ. ಇಂದು ಒಂದೇ ದಿನ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 10 ಗ್ರಾಮ್‌ಗೆ 900 ರುಪಾಯಿ ಇಳಿಕೆಯಾಗಿದೆ. ಇಂದು ಒಂದು ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 14,990 ರುಪಾಯಿಗೆ ಬಂದಿಳಿದಿದೆ.

ಚಿನ್ನದ ಬೆಲೆಯಲ್ಲಿ ಸತತ ಇಳಿಕೆ ಕಂಡಿದ್ದರೂ, ಬೆಳ್ಳಿ ಬೆಲೆಯಲ್ಲಿ ಯಾವುದೇ ಇಳಿಕೆ ಕಂಡಿಲ್ಲ. ಅದೇ ರೀತಿ ಬೆಲೆ ಹೆಚ್ಚಳವೂ ಆಗಿಲ್ಲ. ನಿನ್ನೆಯಂತೆ ಇಂದೂ ಒಂದು ಒಂದು ಕೆಜಿ ಬೆಳ್ಳಿಯ ಬೆಲೆ 2,85,000ನಲ್ಲಿಯೇ ಮುಂದುವರೆದಿದೆ.

Source link

Leave a Reply

Your email address will not be published. Required fields are marked *