Headlines

ಸಿನಿಮಾಗಳಿಗೆ ದೇವತೆಗಳ ಹೆಸರಿಡುವಂತಿಲ್ಲ? ಸೆನ್ಸಾರ್ ಅಘೋಷಿತ ನಿಯಮ?

ಸಿನಿಮಾಗಳಿಗೆ ದೇವತೆಗಳ ಹೆಸರಿಡುವಂತಿಲ್ಲ? ಸೆನ್ಸಾರ್ ಅಘೋಷಿತ ನಿಯಮ?


ಭಾರತದಲ್ಲಿ (ಭಾರತ) ದೇವರುಗಳ ಹೆಸರುಗಳನ್ನು ಮನುಷ್ಯರಿಗೆ, ಉದ್ಯಮಗಳಿಗೆ ಹೀಗೆ ಎಲ್ಲದಕ್ಕೂ ಇಡಲಾಗುತ್ತದೆ. ದೇವರ ಹೆಸರುಗಳನ್ನು ಇರಿಸಿದರೆ ದೇವರ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ. ನಮ್ಮಲ್ಲಿ ಬಾರುಗಳಿಗೆ, ಕಸದ ಗಾಡಿಗಳಿಗೆ ದೇವರ ಹೆಸರುಗಳನ್ನು ಇರಿಸಲಾಗಿದೆ. ಆದರೆ ಇತ್ತೀಚೆಗೆ ಸಿನಿಮಾಗಳಿಗೆ ದೇವರ ಹೆಸರ ಇರಿಸಿದರೆ ಸೆನ್ಸಾರ್ ಮಂಡಳಿಯವರು ತಕರಾರು ತೆಗೆಯಲು ಆರಂಭಿಸಿದ್ದಾರೆ. ಇತ್ತೀಚೆಗಿನ ಕೆಲ ಸಿನಿಮಾಗಳಿಗೆ ಅವು ದೇವರ ಹೆಸರೆಂಬ ಕಾರಣಕ್ಕೆ ಹೆಸರುಗಳನ್ನು ಬದಲಾಯಿಸಲಾಗಿದೆ.

ವರಲಕ್ಷ್ಮಿ ಶರತ್ ಕುಮಾರ್ ನಟನೆಯ ‘ಸರಸ್ವತಿ’ ಹೆಸರಿನ ಚಿತ್ರ ನಾಳೆ ಬಿಡುಗಡೆಯಾಗಲಿದೆ. ಆದರೆ ಈ ಸಿನಿಮಾದ ಹೆಸರನ್ನು ಕಡ್ಡಾಯವಾಗಿ ಬದಲಿಗೆ ಮಾಡಲೇಬೇಕು ಎಂದು ಸೆನ್ಸಾರ್ ಮಂಡಳಿ ಪಟ್ಟು, ‘ಎಸ್ ಸರಸ್ವತಿ’ ಎಂದು ಬದಲಾಯಿಸಲಾಗಿದೆ. ಅಸಲಿಗೆ ಇದು ಸರಸ್ವತಿ ಹೆಸರಿನ ಸಾಮಾನ್ಯ ಮಹಿಳೆಯೊಬ್ಬಳ ಕತೆ. ಆದರೆ ಸೆನ್ಸಾರ್ ಮಂಡಳಿ ಅತಿ ಸೂಕ್ಷ್ಮವಾಗಿ ಪ್ರದರ್ಶಿಸಿ ಸಿನಿಮಾದ ಹೆಸರನ್ನು ಪದಗಳನ್ನು ಮಾಡಿ, ತನ್ನ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದೆ.

ಇದನ್ನೂ ಓದಿ:’ದಿ ಕೇರಳ ಸ್ಟೋರಿ 2′ ಸಿನಿಮಾದ ಶೀರ್ಷಿಕೆಯ ಬಗ್ಗೆ ತಕರಾರು; ರಾಜ್ಯದ ಹೆಸರು ಕೈಬಿಡಲು ಆಗ್ರಹ

ಇದು ಮೊದಲೇನೂ ಅಲ್ಲ ಈ ಹಿಂದೆ ‘ಹೇ ಭಗವಾನ್’ ಹೆಸರಿನ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗುತ್ತಿದೆ. ಆ ಸಿನಿಮಾದ ಹೆಸರಿನಲ್ಲಿ ‘ಭಗವಾನ್’ ಹೆಸರನ್ನು ಸಹ ಸೆನ್ಸಾರ್ ಮಂಡಳಿ ಬದಲಾಯಿಸಿತು. ಸಿನಿಮಾದ ಹೆಸರನ್ನು ‘ಹೇ ಭಗವಂತ’ ಎಂದು ಬದಲಿಸಿ ಬಿಡುಗಡೆ ಮಾಡಲಾಯ್ತು. ಒಂದೊಮ್ಮೆ ಸಿನಿಮಾದ ಕತೆಯು ದೇವರ ಕುರಿತಾಗಿಯೇ ಇದ್ದರೆ, ಅಥವಾ ದೇವರ ಭಕ್ತನ ಕುರಿತಾದ ಕತೆ ಇದ್ದರೆ ದೇವರು ಹೆಸರಿಟ್ಟುಕೊಳ್ಳುವುದು, ಹೆಸರನ್ನು ತಿರುಚಿ ಬಳಸಿದರೂ ಸಹ ಸೆನ್ಸಾರ್ ಮಂಡಳಿ ಆಕ್ಷೇಪ ಎತ್ತುವುದಿಲ್ಲ. ‘ಹನುಮ್ಯಾನ್’ ಸಿನಿಮಾ ಇದಕ್ಕೆ ಉದಾಹರಣೆ.

ಸೆನ್ಸಾರ್ ಇತ್ತೀಚೆಗೆ ಅತಿಯಾದ ಸೂಕ್ಷ್ಮತೆಯನ್ನು ಪ್ರದರ್ಶಿಸುತ್ತದೆ. ಆದರೆ ಧರ್ಮಗಳ ನಡುವೆ ದ್ವೇಷ ಹುಟ್ಟಿಸುವ ಸಿನಿಮಾಗಳಿಗೆ ಸುಲಭವಾಗಿ ಪ್ರಮಾಣ ಪತ್ರಗಳು ಸಿಗುತ್ತಿವೆ. ಆದರೆ ಅಧಿಕಾರವನ್ನು ಪ್ರಶ್ನಿಸುವ, ವ್ಯವಸ್ಥೆ ಟೀಕೆ ಮಾಡುವ ಸಿನಿಮಾಗಳಿಗೆ ಸಮಸ್ಯೆ ಎದುರಾಗುತ್ತಿದೆ. ವಿಜಯ್ ನಟನೆಯ ‘ಜನ ನಾಯಕನ್’ ಸಿನಿಮಾಕ್ಕೂ ಸಮಸ್ಯೆ ಎದುರಾಗಿದ್ದು, ಅದು ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 11:03 am, ಗುರು, 5 ಮಾರ್ಚ್ 26



Source link

Leave a Reply

Your email address will not be published. Required fields are marked *