ಆರತಕ್ಷತೆಯಲ್ಲೂ ವಿಶೇಷ ಉಡುಗೆ ಧರಿಸಿ ಕಂಗೊಳಿಸಿದ ರಶ್ಮಿಕಾ-ವಿಜಯ್: ವಿಶೇಷತೆಯೇನು?

ಆರತಕ್ಷತೆಯಲ್ಲೂ ವಿಶೇಷ ಉಡುಗೆ ಧರಿಸಿ ಕಂಗೊಳಿಸಿದ ರಶ್ಮಿಕಾ-ವಿಜಯ್: ವಿಶೇಷತೆಯೇನು?


ಸ್ಟಾರ್ ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಹಾಗೂ ಟಾಲಿವುಡ್ ಸ್ಟಾರ್ ವಿಜಯ್ ದೇವರ ಕೊಂಡ ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ಇವರ ಮದುವೆ ಚಿತ್ರಗಳು ನ್ಯೂಸ್ ಆಗಿದ್ದವು. ಮದುವೆಯ ದಿನ ಈ ಜೋಡಿ ಶಿವ-ಪಾರ್ವತಿಯ ರೂಪದಲ್ಲಿ ಕಂಗೊಳಿಸಿದ್ದರು. ಇಬ್ಬರೂ ಧರಿಸಿದ್ದ ಚಿನ್ನದ ಆಭರಣಗಳ ಡಿಸೈನ್ ಅಂತೂ ಸಖತ್ ವೈರಲ್ ಆಗಿದ್ದವು. ರಿಸೆಪ್ಷನ್‌ಗೂ ಸಹ ಭಿನ್ನವಾದ ಕಂಗೊಳಿಸುವ ಉಡುಗೆಗಳೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಇತ್ತು. ಸಾಮಾನ್ಯವಾಗಿ ಮದುವೆಗೆ ಶಾಸ್ತ್ರೀಯ ಉಡುಪು ಧರಿಸುವ ಜೋಡಿ, ರಿಸೆಪ್ಷನ್‌ಗೆ ಆಧುನಿಕ ರೀತಿಯ ಉಡುಪುಗಳನ್ನು ಧರಿಸುತ್ತಾರೆ. ಆದರೆ ವಿಜಯ್ ಮತ್ತು ರಶ್ಮಿಕಾ ತಮ್ಮ ರಿಸೆಪ್ಷನ್ ಗೆ ಸಹ ಸರಳವಾದ ಆದರೆ ಸಾಂಪ್ರದಾಯಿಕವಾದ ಉಡುಗೆಗಳನ್ನು ಧರಿಸಿ ಮಿಂಚಿದರು.

ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ನಿನ್ನೆ ರಾತ್ರಿ ಈ ಜೋಡಿಯ ಅದ್ಧೂರಿ ರಿಸೆಪ್ಷನ್ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಗಳನ್ನು ಈ ಜೋಡಿ ಧರಿಸಿದ್ದರು. ವಿಶೇಷ ವ್ಯಕ್ತಿಗಳ ಉಡುಗೆಗಳು ಅವರವರ ರಾಜ್ಯವನ್ನು ಪ್ರತಿನಿಧಿಸುತ್ತಿದ್ದರು. ನಟಿ ರಶ್ಮಿಕಾ, ಮೈಸೂರು ರೇಷ್ಮೆ ಸೀರೆ ಧರಿಸಿದ್ದರೆ ವಿಜಯ್ ದೇವರಕೊಂಡ ತೆಲಂಗಾಣದ ಸಾಂಪ್ರದಾಯಿಕ ಪಂಚೆ, ಶಲ್ಯ ಧರಿಸಿದ್ದರು.

ಆರತಕ್ಷತೆ ಕಾರ್ಯಕ್ರಮದಲ್ಲಿ ಕೆಂಪು ಬಣ್ಣದ (ಡೀಪ್ ರೆಡ್) ಭವ್ಯವಾದ ಮೈಸೂರು ಸಿಲ್ಕ್ ಸೀರೆಯನ್ನು ರಶ್ಮಿಕಾ ಧರಿಸಿದ್ದರು. ಈ ಸೀರೆಯ ಬಾರ್ಡರ್‌ನಲ್ಲಿ ಚಿನ್ನದ ಜರಿ ಕೆಲಸವಿದ್ದು, ವಿಶೇಷವಾಗಿ ಮೈಸೂರು ರಾಜಮನೆತನದ ಲಾಂಛನವಾದ ಗಂಡಭೇರುಂಡ ಪಕ್ಷಿಯ ವಿನ್ಯಾಸವನ್ನು ಬೆಳ್ಳಿ ಮತ್ತು ಬಂಗಾರದ ಎಳೆಗಳಿಂದ ನೆಯ್ಯಲಾಯಿತು. ರಶ್ಮಿಕಾ ತಮ್ಮ ಕರ್ನಾಟಕದ ನಂಟನ್ನು ನೆನಪಿಸುವ ಉಡುಗೆ ಧರಿಸಿ ಕಂಗೊಳಿಸಿದರು.

ಇದನ್ನೂ ಓದಿ:ರಶ್ಮಿಕಾನಾ ವಿಜಯ್ ಎಷ್ಟು ಕೇರ್ ಮಾಡ್ತಾರೆ ನೋಡಿ

ಕೊರಳಿನಲ್ಲಿ ನಕ್ಷಿ ಕೆಲಸದ ನವಿಲು ವಿನ್ಯಾಸದ ಹಾರ, ಕೆಂಪು ಕೆಂಪು ಮಾಣಿಕ್ಯ ಮತ್ತು ಹಸಿರು ಪಚ್ಚೆ ಹರಳುಗಳು ಕೆತ್ತಿದ ಸಾಂಪ್ರದಾಯಿಕ ಆಭರಣಗಳನ್ನು ಧರಿಸಿದ್ದರು. ಹಣೆಯಲ್ಲಿ ಸಣ್ಣ ಬಿಂದಿ, ಮಲ್ಲಿಗೆ ಹೂ ಮುಡಿದ ಜಡೆ ರಶ್ಮಿಕಾ ಅವರ ಸೌಂದರ್ಯಕ್ಕೆ ಮತ್ತಷ್ಟು ಕಳೆ ನೀಡಿತ್ತು.

ಇನ್ನು ವಿಜಯ್ ದೇವರಕೊಂಡ ಅವರು ರಶ್ಮಿಕಾ ಅವರಿಗೆ ಪೂರಕವಾಗಿ ತಿಳಿ ಬಿಳಿ ಬಣ್ಣದ ರೇಷ್ಮೆ ಪಂಚೆ ಹಾಗೂ ವಿ-ನೆಕ್ ಶರ್ಟ್ ಧರಿಸಿದ್ದರು. ಅವರ ಅಂಗವಸ್ತ್ರದ ಮೇಲೆ ಗಜ-ಕೇಸರಿ ವಿನ್ಯಾಸವಿತ್ತು, ಇದು ಅವರ ರಾಯಲ್ ಲುಕ್‌ಗೆ ಸಾಕ್ಷಿಯಾಗಿತ್ತು. ಯಾವುದೇ ಅಬ್ಬರವಿಲ್ಲದ, ಅತ್ಯಂತ ಸರಳ ಮತ್ತು ಸುಂದರ ಬಿಳಿ ಚಿನ್ನದ ಸರಗಳನ್ನು ಧರಿಸುವ ಮೂಲಕ ವಿಜಯ್ ಎಲ್ಲರ ದೃಷ್ಟಿ ಸೆಳೆದರು.

ಮಾರ್ಚ್ 4 ರಂದು ನಡೆದ ಈ ಅದ್ಧೂರಿ ಔತಣಕೂಟದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟ-ನಟಿಯರು, ನಿರ್ದೇಶಕರು ಹಾಗೂ ರಾಜಕೀಯ ಗಣ್ಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು. ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್, ತೆಲುಗು ಚಿತ್ರರಂಗದ ಗಣ್ಯರಾದ ಚಿರಂಜೀವಿ, ರಾಮ್ ಚರಣ್, ಅಲ್ಲು ಅರ್ಜುನ್ ಇನ್ನೂ ಹಲವಾರು ಮಂದಿ ಇವರ ಆರತಕ್ಷತೆಯಲ್ಲಿ ಕಾಣಿಸಿಕೊಂಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *