ಒಂದೇ ಸಿನಿಮಾದಲ್ಲಿ ಶಾರುಖ್ ಖಾನ್, ಶಿವರಾಜ್ ಕುಮಾರ್ ನಟನೆ; ರಜನಿಕಾಂತ್ ಜೈಲರ್-2ಗೆ ಶುರುವಾಯ್ತು ಹೊಸ ಅಲೆ! | Jailer 2 Buzz Explodes As Ai Image Shows Rajinikanth With Shah Rukh Khan And Shiva Rajkumar Sat

ಒಂದೇ ಸಿನಿಮಾದಲ್ಲಿ ಶಾರುಖ್ ಖಾನ್, ಶಿವರಾಜ್ ಕುಮಾರ್ ನಟನೆ; ರಜನಿಕಾಂತ್ ಜೈಲರ್-2ಗೆ ಶುರುವಾಯ್ತು ಹೊಸ ಅಲೆ! | Jailer 2 Buzz Explodes As Ai Image Shows Rajinikanth With Shah Rukh Khan And Shiva Rajkumar Sat


‘ಜೈಲರ್’ ಮೊದಲ ಭಾಗದ ಭರ್ಜರಿ ಯಶಸ್ಸಿನ ನಂತರ, ರಜನಿಕಾಂತ್ ‘ಜೈಲರ್ 2’ ನಲ್ಲಿ ಮುತ್ತುವೇಲ್ ಪಾಂಡಿಯನ್ ಆಗಿ ಮರಳುತ್ತಿದ್ದಾರೆ. ಚಿತ್ರದಲ್ಲಿ ಮೋಹನ್‌ಲಾಲ್, ಶಾರುಖ್ ಖಾನ್ ಮತ್ತು ಶಿವರಾಜ್‌ಕುಮಾರ್ ನಟಿಸಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಇದು ಸಿನಿಪ್ರಿಯರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ.

ಸ್ಯಾಂಡಲ್‌ವುಡ್ ನಟ ಸುದೀಪ್, ವಿಷ್ಣುವರ್ಧನ್, ಯಶ್, ದಿಗಂತ್, ಸುನಿಲ್ ರಾವ್ ಸೇರಿದಂತೆ ಅನೇಕ ನಟರು ಬಾಲಿವುಡ್ ನಟರೊಂದಿಗೆ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಇದೀಗ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ಶಾರುಖ್ ಖಾನ್ ಜೊತೆಗೆ ನಟಿಸುತ್ತಿದ್ದಾರೆ. ಇಬ್ಬರೂ ಒಂದೇ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಳ್ಳಿದ್ದಾರೆ.

ದಕ್ಷಿಣ ಭಾರತದ ಸಿನಿಪ್ರಿಯರು ಕಾತುರದಿಂದ ಕಾಯುತ್ತಿರುವ ಸಿನಿಮಾ ಅಂದ್ರೆ ಅದು ರಜನಿಕಾಂತ್-ನೆಲ್ಸನ್ ಕಾಂಬಿನೇಷನ್‌ನ ‘ಜೈಲರ್ 2’. ಮೊದಲ ಭಾಗದ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ, ಮುತ್ತುವೇಲ್ ಪಾಂಡಿಯನ್ ಆಗಿ ರಜನಿಕಾಂತ್ ಮತ್ತೆ ತೆರೆ ಮೇಲೆ ಬರಲಿದ್ದಾರೆ. ಹೀಗಾಗಿ ಪ್ರೇಕ್ಷಕರಲ್ಲಿ ನಿರೀಕ್ಷೆ ಮುಗಿಲುಮುಟ್ಟಿದೆ. ‘ಜೈಲರ್ 2’ ನಲ್ಲಿ ರಜನಿ ಜೊತೆ ಭಾರತೀಯ ಚಿತ್ರರಂಗದ ಘಟಾನುಘಟಿ ನಟರು ಸೇರಲಿದ್ದಾರೆ ಎಂಬ ಸುದ್ದಿ ಮೊದಲಿನಿಂದಲೂ ಇತ್ತು. ಇದೀಗ, ‘ಜೈಲರ್’ ಮೊದಲ ಭಾಗದಲ್ಲಿ ಮೋಹನ್‌ಲಾಲ್‌ಗೆ ಕಾಸ್ಟ್ಯೂಮ್ ಡಿಸೈನರ್ ಆಗಿದ್ದ ಜಿಶಾದ್ ಶಂಸುದ್ದೀನ್ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್ ಒಂದು ಹೊಸ ಚರ್ಚೆಗೆ ಕಾರಣವಾಗಿದೆ.

ಇದು ಎಐ ಜನರೇಟೆಡ್ ಫೋಟೋ

ಜಿಶಾದ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮೋಹನ್‌ಲಾಲ್, ರಜನಿಕಾಂತ್, ಶಾರುಖ್ ಖಾನ್ ಮತ್ತು ನಮ್ಮ ಶಿವಣ್ಣ, ಶಿವರಾಜ್‌ಕುಮಾರ್ ಇರುವ ಒಂದು AI-ಜನರೇಟೆಡ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದಾಗಿನಿಂದ, ‘ಜೈಲರ್ 2’ ನಲ್ಲಿ ಮುತ್ತುವೇಲ್ ಪಾಂಡಿಯನ್ ಜೊತೆ ಮೋಹನ್‌ಲಾಲ್ ಮತ್ತು ಶಾರುಖ್ ಖಾನ್ ಖಂಡಿತ ಇರುತ್ತಾರೆ ಅಂತಾನೇ ಫ್ಯಾನ್ಸ್ ನಿರೀಕ್ಷಿಸುತ್ತಿದ್ದಾರೆ. ಮೊದಲ ಭಾಗದಲ್ಲಿ ವಿಲನ್ ಆಗಿ ಮಿಂಚಿದ್ದ ವಿನಾಯಕನ್, ಎರಡನೇ ಭಾಗದಲ್ಲೂ ಇರುವುದಾಗಿ ಈ ಹಿಂದೆಯೇ ಖಚಿತಪಡಿಸಿದ್ದರು. ಹಾಗೆಯೇ, ವಿಜಯ್ ಸೇತುಪತಿ ಕೂಡ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಜೈಲರ್ -2 ಅತಿದೊಡ್ಡ ಪ್ರಾಜೆಕ್ಟ್

ಮುತ್ತುವೇಲ್ ಪಾಂಡಿಯನ್ ಆಗಿ ಅದ್ಭುತ ನಟನೆ ತೋರಿದ್ದ ರಜನಿಕಾಂತ್ ಅವರ ವೃತ್ತಿಜೀವನದ ಅತ್ಯಂತ ಸ್ಟೈಲಿಶ್ ಪಾತ್ರಗಳಲ್ಲಿ ಇದೂ ಒಂದಾಗಿತ್ತು. ಸದ್ಯ ‘ಜೈಲರ್ 2’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ತಮಿಳು ಚಿತ್ರರಂಗದಲ್ಲಿ ಅತಿ ದೊಡ್ಡ ಓಪನಿಂಗ್ ಪಡೆಯುವ ಸಾಧ್ಯತೆ ಇರುವ ಮುಂಬರುವ ಪ್ರಾಜೆಕ್ಟ್‌ಗಳಲ್ಲಿ ಇದೂ ಒಂದು. ಮೊದಲ ಭಾಗದಂತೆಯೇ ಎರಡನೇ ಭಾಗಕ್ಕೂ ಅನಿರುದ್ಧ್ ರವಿಚಂದರ್ ಅವರೇ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಮೊದಲ ಭಾಗದಂತೆ, ಎರಡನೇ ಭಾಗವೂ ಆಕ್ಷನ್ ದೃಶ್ಯಗಳಿಂದ ತುಂಬಿರಲಿದೆ. ಅಂದಹಾಗೆ, ಎರಡನೇ ಭಾಗದಲ್ಲಿ ಮೋಹನ್‌ಲಾಲ್ ಅವರ ‘ಮ್ಯಾಥ್ಯೂ’ ಎಂಬ ಡಾನ್ ಪಾತ್ರ ಇರುತ್ತದೆಯೇ ಎಂದು ತಿಳಿಯಲು ಅಭಿಮಾನಿಗಳು, ಅದರಲ್ಲೂ ವಿಶೇಷವಾಗಿ ಮಲಯಾಳಿ ಪ್ರೇಕ್ಷಕರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ‘ಜೈಲರ್’ ಮೊದಲ ಭಾಗವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು.



Source link

Leave a Reply

Your email address will not be published. Required fields are marked *