ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದವರು ಕೆಲವೊಂದು ತಪ್ಪುಗಳನ್ನು ಮಾಡಬಾರದಂತೆ. ತಿಳಿಯದೇ ಮಾಡುವ ಈ ತಪ್ಪುಗಳಿಂದ ಅದೃಷ್ಟ ಕೈತಪ್ಪಿ ಹೋಗಬಹುದು ಎನ್ನಲಾಗಿದೆ.
ಸಂಖ್ಯಾಶಾಸ್ತ್ರದ ಪ್ರಕಾರ, 3, 12, 21 ಮತ್ತು 30ನೇ ತಾರೀಖಿನಂದು ಜನಿಸಿದವರು ಸಂಖ್ಯೆ 3ರ ಅಡಿಯಲ್ಲಿ ಬರುತ್ತಾರೆ.

ಈ ದಿನಾಂಕಗಳಲ್ಲಿ ಹುಟ್ಟಿದವರ ಮೇಲೆ ಗುರು ಗ್ರಹದ ಪ್ರಭಾವ ಹೆಚ್ಚಾಗಿರುತ್ತದೆ. ಜ್ಯೋತಿಷ್ಯದಲ್ಲಿ ಗುರುವನ್ನು ಶುಭ ಮತ್ತು ಅದೃಷ್ಟವನ್ನು ತರುವ ಗ್ರಹವೆಂದು ಪರಿಗಣಿಸಲಾಗಿದೆ.

ಈ ದಿನಾಂಕಗಳಲ್ಲಿ ಜನಿಸಿದವರಿಗೆ ಸಹಜವಾಗಿಯೇ ಒಂದು ರೀತಿಯ ದೈವಿಕ ಶಕ್ತಿ ಹಾಗೂ ಪಾಸಿಟಿವ್ ಎನರ್ಜಿ ಇರುತ್ತದೆ. ಇವರ ಕೈಯನ್ನು ‘ಅಮೃತ ಹಸ್ತ’ ಅಥವಾ ‘ಚಿನ್ನದ ಹಸ್ತ’ ಎನ್ನುತ್ತಾರೆ.

ಅಂದರೆ, ಇವರು ಯಾವುದೇ ಕೆಲಸ ಆರಂಭಿಸಿದರೂ ಅದು ಯಶಸ್ವಿಯಾಗುತ್ತದೆ. ಇವರು ಸುಲಭವಾಗಿ ಯಾರಿಗೂ ಶೇಕ್‌ಹ್ಯಾಂಡ್ ನೀಡಬಾರದು. ಶೇಕ್‌ಹ್ಯಾಂಡ್ ಕೊಟ್ಟಾಗ, ದೇಹದಲ್ಲಿನ ಶಕ್ತಿಯು ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆಯಾಗುತ್ತದೆ.

ಇದರಿಂದ ನಿಮ್ಮ ಅದೃಷ್ಟ ಅಥವಾ ಪಾಸಿಟಿವ್ ವೈಬ್ಸ್ ಎದುರಿಗಿದ್ದವರಿಗೆ ಹೋಗಿ, ನಿಮ್ಮ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಬಹುದು ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ.

ಹಾಗಾಗಿ, ಇವರು ಶೇಕ್‌ಹ್ಯಾಂಡ್ ಬದಲು ‘ನಮಸ್ಕಾರ’ ಮಾಡುವುದು ಉತ್ತಮ. ಒಂದು ವೇಳೆ ಅನಿವಾರ್ಯ ಸಂದರ್ಭದಲ್ಲಿ ಶೇಕ್‌ಹ್ಯಾಂಡ್ ಕೊಡಲೇಬೇಕಾಗಿ ಬಂದರೆ, ಮನಸ್ಸಿನಲ್ಲಿ ‘ಓಂ’ ಅಥವಾ ನಿಮ್ಮ ಇಷ್ಟ ದೇವರನ್ನು ಸ್ಮರಿಸಿಕೊಳ್ಳಿ. ಅಲ್ಲದೆ, ಈ ದಿನಾಂಕಗಳಲ್ಲಿ ಜನಿಸಿದವರು ಹಳದಿ ಬಣ್ಣದ ಕರವಸ್ತ್ರವನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

Source link
Numerology Tips: ಈ ದಿನಾಂಕಗಳಲ್ಲಿ ಹುಟ್ಟಿದವರು ಶೇಕ್ ಹ್ಯಾಂಡ್ ಕೊಡಬಾರದಂತೆ, ಯಾಕೆ ಗೊತ್ತಾ?