Headlines

ಪ್ರಾಣಿ ಸತ್ತಂತೆ ವಾಸನೆ ಬರ್ತಿದೆ ಎಂದು ಹುಡುಕಿದಾಗ ಪೀಸ್ ಪೀಸ್ ಆಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಯ್ತು ಮನೆ ಮಗನ ಶವ | Missing Youth Found In As Pieces In Bag In Huvinahadagali Beerabbi

ವಿಜಯನಗರ ಜಿಲ್ಲೆಯ ಬೀರಬ್ಬಿಯಲ್ಲಿ 15 ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಶವ ಗೋಣಿ ಚೀಲದಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಾಣಿ ಸತ್ತಂತೆ ವಾಸನೆ ಬರುತ್ತಿದೆ ಎಂದು ನೋಡಿದಾಗ ಮನೆಯವರಿಗೆ ತಮ್ಮದೇ ಮನೆ ಹಿಂದೆ ಮಗನ ಶವ ಸಿಕ್ಕಿದೆ.

ಬಳ್ಳಾರಿಯಲ್ಲಿ ಯುವಕನ ಭೀಕರ ಕೊಲೆ

ಬಳ್ಳಾರಿ: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಬೀರಬ್ಬಿಯಲ್ಲಿ ಯುವಕನ ಭೀಕರ ಕೊಲೆ ನಡೆದಿದೆ. ಕೊಲೆ ಮಾಡಿದ ಆರೋಪಿಗಳು ಯುವಕನ ದೇಹ ಭಾಗವನ್ನು ಹಲವು ಭಾಗಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲಕ್ಕೆ ತುಂಬಿ ದೂರ ಎಸೆದು ಪರಾರಿಯಾಗಿದ್ದಾರೆ. 25 ವರ್ಷದ ಬೀರೇಶ್ ಕೊಲೆಯಾದ ಯುವಕ. ಬೀರೇಶ್ ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದ. ಕಾಣೆಯಾಗಿದ್ದ ಬೀರೇಶ್‌ಗಾಗಿ ಆತನ ಕುಟುಂಬದವರು ಹುಡುಕಾಟ ನಡೆಸಿದ್ದರು. ಆದರೆ ನಿನ್ನೆ ಸಂಜೆ ಆತನ ಶವ ಮನೆಯ ಹಿಂಭಾಗದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ತುಂಡು ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಪ್ರಾಣಿ ಸತ್ತಂತೆ ವಾಸನೆ ಬರುತ್ತಿದೆ ಎಂದು ಕುಟುಂಬದವರು ಮನೆಯ ಹಿಂಭಾಗದಲ್ಲಿ ಪರಿಶೀಲಿಸಿದಾಗ ಬೀರೇಶ್‌ನ ಮೃತದೇಹ ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿದೆ. ಶವ ಸಂಪೂರ್ಣವಾಗಿ ಕೊಳೆತು ಹೋಗಿದ್ದು, ಪ್ರಾಣಿ ಸತ್ತಂತೆ ವಾಸನೆ ಬರುತ್ತಿತ್ತು. ಮಾಹಿತಿ ತಿಳಿದು ಸ್ಥಳಕ್ಕೆವಿಜಯನಗರ ಎಸ್ಪಿ ಜಾಹ್ನವಿ ದೌಡಾಯಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಇಷ್ಟೊಂದು ಕ್ರೂರವಾಗಿ ಹತ್ಯೆ ಮಾಡಿದ ಹಿಂದಿನ ಕಾರಣವೂ ಸೇರಿದಂತೆ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:

Source link

Leave a Reply

Your email address will not be published. Required fields are marked *