ಸಿದ್ದರಾಮಯ್ಯ ಬಜೆಟ್‌ನಲ್ಲಿ ಮತ್ತೆ ಮದ್ಯದ ದರ ಏರಿಕೆ ಫಿಕ್ಸ್; ಬಾಟಲಿ ತಗೊಳೋರಿಗೆ ಬೀಳುತ್ತೆ ಹೆಚ್ಚುವರಿ ಟ್ಯಾಕ್ಸ್! | Karnataka Budget 2026 Liquor Price Hike Siddaramaiah Govt Guarantee Funds Sat

ಸಿದ್ದರಾಮಯ್ಯ ಬಜೆಟ್‌ನಲ್ಲಿ ಮತ್ತೆ ಮದ್ಯದ ದರ ಏರಿಕೆ ಫಿಕ್ಸ್; ಬಾಟಲಿ ತಗೊಳೋರಿಗೆ ಬೀಳುತ್ತೆ ಹೆಚ್ಚುವರಿ ಟ್ಯಾಕ್ಸ್! | Karnataka Budget 2026 Liquor Price Hike Siddaramaiah Govt Guarantee Funds Sat



ಸಿದ್ದರಾಮಯ್ಯ ಬಜೆಟ್‌ನಲ್ಲಿ ಮತ್ತೆ ಮದ್ಯದ ದರ ಏರಿಕೆ ಫಿಕ್ಸ್; ಬಾಟಲಿ ತಗೊಳೋರಿಗೆ ಬೀಳುತ್ತೆ ಹೆಚ್ಚುವರಿ ಟ್ಯಾಕ್ಸ್! | Karnataka Budget 2026 Liquor Price Hike Siddaramaiah Govt Guarantee Funds Sat

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಿದ್ದರಾಮಯ್ಯ ಸರ್ಕಾರವು ಮುಂಬರುವ ಬಜೆಟ್‌ನಲ್ಲಿ ಮದ್ಯದ ದರವನ್ನು ಶೇ. 10-12ರಷ್ಟು ಹೆಚ್ಚಿಸಲು ಸಜ್ಜಾಗಿದೆ. ಅಬಕಾರಿ ಇಲಾಖೆಯ ₹40,000 ಕೋಟಿ ರಾಜಸ್ವ ಗುರಿ ತಲುಪಲು ಈ ಕ್ರಮ ಅನಿವಾರ್ಯವಾಗಿದ್ದು, ಇದು ಮದ್ಯಪ್ರಿಯರ ಜೇಬಿಗೆ ಮತ್ತಷ್ಟು ಹೊರೆಯಾಗುವುದು ಖಚಿತವಾಗಿದೆ.

ಬೆಂಗಳೂರು (ಮಾ.05): ರಾಜ್ಯದ ಮದ್ಯಪ್ರಿಯರಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಭರ್ಜರಿ ಶಾಕ್‌ ನೀಡಲು ಸಜ್ಜಾಗಿದೆ. ಬರುವ ಮಾರ್ಚ್‌ 6ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲಿ ಮದ್ಯದ ದರವನ್ನು ಮತ್ತೆ ಏರಿಕೆ ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿರುವ ಸರ್ಕಾರಕ್ಕೆ ಈಗ ಅಬಕಾರಿ ಸುಂಕವೇ ಪ್ರಮುಖ ಆಸರೆಯಾಗಿದ್ದು, ಮದ್ಯದ ಬೆಲೆಯಲ್ಲಿ ಶೇ. 10 ರಿಂದ 12 ರಷ್ಟು ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ.

ಬಾಟಲ್‌ ಓಪನ್‌ ಮಾಡೋದು ಇನ್ಮುಂದೆ ಅಷ್ಟು ಸುಲಭವಲ್ಲ!

ಈಗಾಗಲೇ ಪೆಟ್ರೋಲ್‌, ಡೀಸೆಲ್‌ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಈಗ ಮದ್ಯದ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಅಬಕಾರಿ ಇಲಾಖೆಯ ಮೂಲಗಳ ಪ್ರಕಾರ, ಐಎಂಎಲ್‌ (IML) ಮತ್ತು ಬಿಯರ್‌ ಎರಡೂ ಮಾದರಿಯ ಮದ್ಯದ ಬೆಲೆಗಳಲ್ಲಿ ಗಣನೀಯ ಏರಿಕೆಯಾಗಲಿದೆ. ಇದರಿಂದಾಗಿ ಸಾಮಾನ್ಯ ಬ್ರ್ಯಾಂಡ್‌ಗಳ ಬೆಲೆಯೂ ಕೂಡ ಜನಸಾಮಾನ್ಯರ ಕೈಗೆಟುಕದ ಸ್ಥಿತಿಗೆ ತಲುಪುವ ಸಾಧ್ಯತೆಯಿದೆ.

₹40 ಸಾವಿರ ಕೋಟಿ ಗುರಿ ತಲುಪಲು ಮಾಸ್ಟರ್‌ ಪ್ಲಾನ್:

ಪ್ರಸಕ್ತ ಹಣಕಾಸು ವರ್ಷದಲ್ಲಿ ಅಬಕಾರಿ ಇಲಾಖೆಗೆ ಸರ್ಕಾರ ಬರೋಬ್ಬರಿ 40,000 ಕೋಟಿ ರೂಪಾಯಿ ರಾಜಸ್ವ ಸಂಗ್ರಹದ ಗುರಿ ನೀಡಿದೆ. ಆದರೆ, ಈವರೆಗೆ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹವಾಗದ ಕಾರಣ, ಬಜೆಟ್‌ನಲ್ಲಿ ದರ ಪರಿಷ್ಕರಣೆ ಮಾಡುವ ಮೂಲಕ ಈ ಗುರಿಯನ್ನು ಮುಟ್ಟಲು ಸರ್ಕಾರ ನಿರ್ಧರಿಸಿದೆ. ಗ್ಯಾರಂಟಿ ಯೋಜನೆಗಳಿಗಾಗಿ ವಾರ್ಷಿಕ ಸುಮಾರು 52,000 ರಿಂದ 60,000 ಕೋಟಿ ರೂಪಾಯಿಗಳ ಅಗತ್ಯವಿದ್ದು, ಈ ಹಣವನ್ನು ಭರಿಸಲು ಮದ್ಯದ ಮೇಲಿನ ಸುಂಕ ಹೆಚ್ಚಳವೇ ಅಂತಿಮ ದಾರಿಯಾಗಿದೆ.

ಅಬಕಾರಿ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಕೆ:

ಸರ್ಕಾರ ನೀಡಿರುವ ಕಠಿಣ ಟಾರ್ಗೆಟ್‌ ರೀಚ್‌ ಆಗಲು ಅಬಕಾರಿ ಇಲಾಖೆಯು ಮದ್ಯ ದರ ಪರಿಷ್ಕರಣೆಗೆ ಈಗಾಗಲೇ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿದೆ. ಕಳೆದ ಬಜೆಟ್‌ನಲ್ಲಿಯೂ ಬೆಲೆ ಏರಿಕೆ ಮಾಡಲಾಗಿತ್ತು, ಆದರೂ ಆದಾಯದ ಕೊರತೆ ನೀಗಿಸಲು ಈಗ ಮತ್ತೆ ಎರಡನೇ ಬಾರಿ ಬರೆ ಹಾಕಲು ಸರ್ಕಾರ ಮುಂದಾಗಿದೆ. ಮಾರ್ಚ್‌ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‌ನಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.

ಮದ್ಯದ ದರ ಏರಿಕೆಯ ಸಂಭವನೀಯ ಪರಿಣಾಮ:

ಕೈಗೆಟುಕದ ಎಣ್ಣೆ: ಕಡಿಮೆ ಬೆಲೆಯ ಮದ್ಯದ ಬಾಟಲಿಗಳ ದರದಲ್ಲಿ ₹10 ರಿಂದ ₹20 ಹಾಗೂ ಪ್ರೀಮಿಯಂ ಮದ್ಯದ ಮೇಲೆ ₹50 ರಿಂದ ₹100 ರವರೆಗೆ ಏರಿಕೆಯಾಗಬಹುದು.

ಹೋಟೆಲ್‌ ಉದ್ಯಮಕ್ಕೆ ಬಿಸಿ: ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸರ್ವಿಸ್‌ ಚಾರ್ಜ್‌ಗಳೂ ಕೂಡ ಹೆಚ್ಚಾಗುವ ಸಾಧ್ಯತೆಯಿದೆ.

ಒಟ್ಟಾರೆಯಾಗಿ, ಗ್ಯಾರಂಟಿ ಭಾಗ್ಯಗಳ ಹಣವನ್ನು ಹೊಂದಿಸಲು ಸರ್ಕಾರ ಮದ್ಯಪ್ರಿಯರ ಜೇಬಿಗೆ ಕನ್ನ ಹಾಕುತ್ತಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಸದ್ಯಕ್ಕೆ ಮದ್ಯಪ್ರಿಯರು ಬಜೆಟ್‌ ದಿನದತ್ತ ಕೌತುಕದಿಂದ ಮತ್ತು ಅಷ್ಟೇ ಆತಂಕದಿಂದ ಕಾಯುತ್ತಿದ್ದಾರೆ.



Source link

Leave a Reply

Your email address will not be published. Required fields are marked *