Headlines

ಫೆಬ್ರುವರಿಯಲ್ಲಿ ವಾಹನಗಳ ಮಾರಾಟದಲ್ಲಿ ಭರ್ಜರಿ ಏರಿಕೆ; ಮಾರ್ಚ್​ನಲ್ಲೂ ಸೇಲ್ಸ್ ಹೆಚ್ಚುವ ನಿರೀಕ್ಷೆ

ಫೆಬ್ರುವರಿಯಲ್ಲಿ ವಾಹನಗಳ ಮಾರಾಟದಲ್ಲಿ ಭರ್ಜರಿ ಏರಿಕೆ; ಮಾರ್ಚ್​ನಲ್ಲೂ ಸೇಲ್ಸ್ ಹೆಚ್ಚುವ ನಿರೀಕ್ಷೆ


ನವದೆಹಲಿ, ಮಾರ್ಚ್ 5: ಫೆಬ್ರುವರಿ ತಿಂಗಳಿನಲ್ಲಿ ದ್ವಿಚಕ್ರ ವಾಹನಗಳು ಮತ್ತು ಪ್ಯಾಸೆಂಜರ್ ವಾಹನಗಳಿಗೆ ಬಹಳ ಬೇಡಿಕೆ ಬಂದಿತ್ತು. ಆಟೊಮೊಬೈಲ್ ಡೀಲರ್ ಅಸೋಷಿಯೇಶನ್‌ಗಳ ಒಕ್ಕೂಟವಾದ ಫಾಡಾ (FADA) ಬಿಡುಗಡೆ ಮಾಡಿರುವ ವರದಿ ಪ್ರಕಾರ, ಫೆಬ್ರವರಿ ತಿಂಗಳಿನಲ್ಲಿ ರೀಟೇಲ್ ಮಾರಾಟದಲ್ಲಿ 24.09 ಲಕ್ಷ ವಾಹನಗಳು ಮಾರಾಟವಾಗಿವೆ. ಕಳೆದ ವರ್ಷಕ್ಕೆ ರೀಟೇಲ್ ಮಾರಾಟ ಶೇ. 25.62ರಷ್ಟು ಹೆಚ್ಚಾಗಿದೆ.

ಫೆಬ್ರುವರಿಯಲ್ಲಿ ಮಾರಾಟವಾದ 24 ಲಕ್ಷ ಒಟ್ಟು ವಾಹನಗಳಲ್ಲಿ 17,00,505 ದ್ವಿಚಕ್ರ ವಾಹನ. ನಗರದಲ್ಲಿ ವಾಹನ ಮಾರಾಟದಲ್ಲಿ ಶೇ 28.96ರಷ್ಟು ಹೆಚ್ಚಿದೆ, ಗ್ರಾಮೀಣ ಭಾಗದಲ್ಲಿ ಶೇ. 22.16ರಷ್ಟಿದೆ. ಒಂದು ಲಕ್ಷಕ್ಕೂ ಅಧಿಕ ಕಮರ್ಷಿಯಲ್ ವಾಹನಗಳು ಕಳೆದ ತಿಂಗಳು ಸೇಲ್ ಆಗಿವೆ.

ಫೆಬ್ರುವರಿಯಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಒಟ್ಟಾರೆ ಶೇ. 25.02ರಷ್ಟು ಆಗಿದೆ. ತ್ರಿಚಕ್ರ ವಾಹನಗಳು ಶೇ. 24.39, ಪ್ರಯಾಣಿಕ ವಾಹನಗಳು ಶೇ. 26.12, ಕಮರ್ಷಿಯಲ್ ವಾಹನಗಳು ಶೇ. 28.89ರಷ್ಟು ಮಾರಾಟ ಕಂಡಿವೆ. ಎಲ್ಲಾ ವರ್ಗದ ವಾಹನಗಳ ಮಾರಾಟದಲ್ಲಿ ಸ್ಥಿರತೆ ಕಂಡುಬಂದಿರುವುದು ಗಮನಾರ್ಹ.

ಇದನ್ನೂ ಓದಿ: ಆಂಥ್ರೋಪಿಕ್ನಿಂದ ಉಚಿತ ಎಐ ಕೋರ್ಸ್ಗಳು; ಕ್ಲಾಡ್ ಟ್ರೈನಿಂಗ್ ಮತ್ತು ಸರ್ಟಿಫಿಕೇಟ್ ಸಿಗುತ್ತೆ; ಪಡೆಯುವುದು ಹೇಗೆ?

ಟ್ರಾಕ್ಟರ್‌ಗಳ ಮಾರಾಟದಲ್ಲಂತೂ ಗಣನೀಯ ಏರಿಕೆಯಾಗಿರುವುದು ಮತ್ತೊಂದು ಗಮನಾರ್ಹ ಅಂಶ. ಫಾಡಾ ರಿಸರ್ಚ್ ಡಾಟಾ ಪ್ರಕಾರ ಟ್ರಾಕ್ಟರ್‌ಗಳ ಮಾರಾಟದಲ್ಲಿ ಶೇ. 36.35ರಷ್ಟು ಆಗಿದೆ.

ಈ ಹಣಕಾಸು ಪದವಿ ಇಲ್ಲಿಯ ಮಾರಾಟ ದಾಖಲೆ

ಒಟ್ಟೂ ವಾಹನಗಳ ಮಾರಾಟ: 2,69,52,913 (ಶೇ. 12.13)

  • ದ್ವಿಚಕ್ರ ವಾಹನಗಳು: 1.95 ಕೋಟಿ (ಶೇ. 12)
  • ತ್ರಿಚಕ್ರ ವಾಹನಗಳು: 12.54 ಲಕ್ಷ (ಶೇ. 11.78 ಸರಾಸರಿ)
  • ಕಮರ್ಷಿಯಲ್ ವಾಹನಗಳು: 9.58 ಲಕ್ಷ (ಶೇ. 11.34)
  • ಕಟ್ಟಡ ನಿರ್ಮಾಣ ವಾಹನಗಳು- ಸಿಐ: 64,176 (ಶೇ. 11 ಇಳಿಕೆ)
  • ಪ್ಯಾಸಂಜರ್ ವಾಹನಗಳು: 52.51 ಲಕ್ಷ (ಶೇ. 11.82 ಸರಾಸರಿ)
  • ಟ್ರ್ಯಾಕ್ಟರ್‌ಗಳು: 9.68 ಲಕ್ಷ (ಶೇ. 19.66)

ಇದನ್ನೂ ಓದಿ: ಶೇ. 60ರ ಗಡಿ ದಾಟಲಿದೆ ಡಿಎ, ಡಿಆರ್; ಜನವರಿಯ ತುಟ್ಟಿಭತ್ಯೆ ಎಷ್ಟು ಏರಬಹುದು?

ಮಾರ್ಚ್ ತಿಂಗಳ ಮಾರಾಟ ಸುಗ್ಗಿ ನಿರೀಕ್ಷೆ

ದೇಶಾದ್ಯಂತ ಇರುವ ವಾಹನಗಳ ಡೀಲರ್‌ಗಳು ಮಾರ್ಚ್ ತಿಂಗಳಿನಲ್ಲಿ ಉತ್ತಮ ಮಾರಾಟದ ನಿರೀಕ್ಷೆಯಲ್ಲಿದ್ದಾರೆ ಎಂದು ಫಾಡಾ ರಿಸರ್ಚ್ ರಿಪೋರ್ಟ್‌ನಲ್ಲಿ ಹೇಳಲಾಗಿದೆ. ಶೇ. 4.59% ಡೀಲರ್ಸ್ ಮಾತ್ರ ಮಾರ್ಚ್‌ನಲ್ಲಿ ಸೇಲ್ಸ್ ಕಡಿಮೆ ಆಗಬಹುದು ಎಂದು ಗ್ರಹಿಸಲಾಗಿದೆ. ಉಳಿದವರು ಪಾಸಿಟಿವ್ ಆಗಿದ್ದಾರೆ ಎಂದು ಫಾಡಾ ಹೇಳಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *