Headlines

‘ಜೀ ಕನ್ನಡ’ದಲ್ಲಿ ಮಾರ್ಚ್ 9ರಿಂದ ‘ಕೃಷ್ಣ ರುಕ್ಕು’; ಇದು ಪ್ರೀತಿ-ದ್ವೇಷದ ಕಥೆ

‘ಜೀ ಕನ್ನಡ’ದಲ್ಲಿ ಮಾರ್ಚ್ 9ರಿಂದ ‘ಕೃಷ್ಣ ರುಕ್ಕು’; ಇದು ಪ್ರೀತಿ-ದ್ವೇಷದ ಕಥೆ


ಜೀ ಕನ್ನಡ ವಾಹಿನಿ ಹೊಸ ಹೊಸ ಕಥೆಗಳ ಜೊತೆ ಪ್ರದರ್ಶನ ಎದುರು ಬರುತ್ತಿದೆ. ಈಗ ಹೊಸ ಧಾರಾವಾಹಿ ಮೂಲಕ ಪ್ರದರ್ಶನ ಎದುರು ಬರಲು ಜೀ ವಾಹಿನಿ ರೆಡಿ ಆಗಿದೆ. ಅದುವೇ ‘ಕೃಷ್ಣ ರುಕ್ಕು’. ಮಾರ್ಚ್ 9 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಧಾರಾವಾಹಿ ಪ್ರಸಾರ ಕಾಣಲಿದೆ. ಈ ಮೊದಲು ಈ ಸ್ಲಾಟ್‌ನಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಸೀರಿಯಲ್ ಮಾರ್ಚ್ 6 ರಂದು ಕೊನೆಗೊಳ್ಳುತ್ತಿದೆ. ಆ ಜಾಗಕ್ಕೆ ‘ಕೃಷ್ಣ ರುಕ್ಕು’ ಧಾರಾವಾಹಿ ಬಂದಿದೆ.

ಜೀ ಕನ್ನಡದಲ್ಲಿ ಪ್ರಸಾರ ಆಗುವ ಪ್ರತಿ ಧಾರಾವಾಹಿಯಲ್ಲೂ ಸಂಬಂಧಗಳ ಬಗ್ಗೆ, ಕುಟುಂಬದ ಬಗ್ಗೆ ಹೇಳುವುದಿಲ್ಲ. ಈ ಧಾರಾವಾಹಿ ಕೂಡ ಪ್ರೀತಿ, ದ್ವೇಷ ಹಾಗೂ ವಿಧಿಯಾಟದ ನಡುವೆ ಸಾಗುತ್ತದೆ. ಆಟೋ ಓಡಿಸೋ ಅಣ್ಣನ ಅಕಾಲಿಕ ನಿಧನದಿಂದ ಇಡೀ ಕುಟುಂಬದ ಜವಾಬ್ದಾರಿ ರುಕ್ಕು ಮೇಲೆ ಬೀಳುತ್ತದೆ. ಆಗ ಎದುರಾಗುವ ಸವಾಲುಗಳನ್ನು ಅವಳು ಹೇಗೆ ಎದುರಿಸುತ್ತಾಳೆ ಎಂಬುದು ಧಾರಾವಾಹಿಯ ಕಥೆಗಳು. ಮೌನ ಗುಡ್ಡೆಮನೆ ರುಕ್ಕು ಆಗಿ ನಟಿಸಿದರೆ, ಅಕ್ಷಯ್ ನಾಯಕ್ ಕೃಷ್ಣನ ಪಾತ್ರ ಮಾಡುತ್ತಿದ್ದಾರೆ.

ಎಸ್ ನಾರಾಯಣ್ ಅವರು ಸಿನಿಮಾ ನಿರ್ದೇಶನದ ಜೊತೆಗೆ ನಟನೆ ಕೂಡ ಮಾಡಿದರು. ಅವರಿಗೆ ಕಿರುತೆರೆ ಜೊತೆಯೂ ನಂಟಿದೆ. ಅವರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈಗ ಸೂರ್ಯ ಪ್ರಕಾಶ್ ಎಂಬ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಅವರ ಇರುವಿಕೆ ತಂಡಕ್ಕೆ ದೊಡ್ಡ ಬಲ ತುಂಬಿದಂತೆ ಆಗಿದೆ. ಖ್ಯಾತ ನಟಿ ಸುಚಿತ್ರ, ಗಾಯಕ ನವೀನ ಸಜ್ಜು ಮೊದಲಾದವರು ಧಾರಾವಾಹಿಯ ಭಾಗವಾಗಿದ್ದಾರೆ. ಧೃತಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲೀಪ್ ರಾಜ್ ಹಾಗೂ ಶ್ರೀ ವಿದ್ಯಾ ‘ಕೃಷ್ಣ ರುಕ್ಕು’ ಸೀರಿಯಲ್ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಜೀ ಕನ್ನಡದ ‘ಕೃಷ್ಣ ರುಕ್ಕು’ ಧಾರಾವಾಹಿಗೆ ನಾಯಕಿಯಾದ ‘ರಾಮಾಚಾರಿ’ ಮೌನ

ಜೀ ಕನ್ನಡದ ಧಾರಾವಾಹಿಗಳು ಮೇಕಿಂಗ್ ವಿಷಯದಲ್ಲಿ ಸಾಕಷ್ಟು ಕಲರ್ ಫುಲ್ ಆಗಿದ್ದರೆ ಎಂಬ ಅಭಿಪ್ರಾಯ ವೀಕ್ಷಕರದ್ದು. ‘ಕೃಷ್ಣ ರುಕ್ಕು’ ಧಾರಾವಾಹಿ ಕೂಡ ಅದೇ ಮಾದರಿಯಲ್ಲಿ ಎಂಬುದು ಪ್ರೋಮೋ ಮೂಲಕ ಗೊತ್ತಾಗಿದೆ. ಅಣ್ಣನ ಸಾವಿಗೆ ಕಾರಣ ಆದ ಕುಟುಂಬಕ್ಕೆ ಬರೋ ನಾಯಕಿ ಯಾವ ರೀತಿಯಲ್ಲಿ ದ್ವೇಷ ತೀರಿಸಿಕೊಳ್ಳುತ್ತಾಳೆ? ದ್ವೇಷ ಪ್ರೀತಿ ಆಗೋದು ಹೇಗೆ ಎಂಬ ಕುತೂಹಲದೊಂದಿಗೆ ಧಾರಾವಾಹಿ ಮೂಡಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 3:07 pm, ಗುರು, 5 ಮಾರ್ಚ್ 26



Source link

Leave a Reply

Your email address will not be published. Required fields are marked *