ಮಾರ್ಚ್ 19 ರಂದು ಭಾರತದ ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ 2’ ಮತ್ತು ‘ಟಾಕ್ಸಿಕ್’ (ವಿಷಕಾರಿ) ಸಿನಿಮಾಗಳ ನಡುವೆ ದೊಡ್ಡ ಕ್ಲ್ಯಾಶ್ ಆಗುವ ಸಾಧ್ಯತೆ ಇತ್ತು. ಆದರೆ ‘ಟಾಕ್ಸಿಕ್’ ಸಿನಿಮಾ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿತು. ಮಾರ್ಚ್ 19 ರಂದು ಜೂನ್ 4 ರಂದು ರಿಲೀಸ್ ಮಾಡುವುದಾಗಿದೆ ಚಿತ್ರತಂಡ. ಹಾಗಂತ ‘ಧುರಂಧರ 2’ (ಧುರಂಧರ 2) ಸಿನಿಮಾಗೆ ಪೈಪೋಟಿ ಕಡಿಮೆ ಆಗಿಲ್ಲ. ಮಾರ್ಚ್ 19 ರಂದು ಬೇರೆ ಬೇರೆ ಸಿನಿಮಾಗಳು ರಿಲೀಸ್ ಆಗಲಿವೆ. ಕನ್ನಡದಲ್ಲಿ ‘ಲವ್ ಮಾಕ್ಟೇಲ್ 3’ ಅದೇ ದಿನ ಬಿಡುಗಡೆ ಆಗಲಿದೆ. ಪವನ್ ಕಲ್ಯಾಣ್ ನಟನೆಯ ತೆಲುಗಿನ ‘ಉಸ್ತಾದ್ ಭಗತ್ ಸಿಂಗ್’ (ಉಸ್ತಾದ್ ಭಗತ್ ಸಿಂಗ್) ಕೂಡ ಮಾರ್ಚ್ 19 ರಂದು ಬಿಡುಗಡೆ ಆಗುವುದು ಖಚಿತವಾಗಿದೆ.
ಪವನ್ ಅವರು ಈಗ ಸಿನಿಮಾಕ್ಕಿಂತ ಹೆಚ್ಚಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆಂಧ್ರದ ಉಪ ಮುಖ್ಯಮಂತ್ರಿ ಆಗಿರುವ ಅವರು ಇನ್ಮುಂದೆ ಹೊಸ ಸಿನಿಮಾ ಒಪ್ಪಿಕೊಳ್ಳುವುದು ಅನುಮಾನ. ಆದ್ದರಿಂದ ‘ಉಸ್ತಾದ್ ಭಗತ್ ಸಿಂಗ್’ ಅವರ ಕೊನೆ ಸಿನಿಮಾ ಎಂದು ಪರಿಗಣಿಸಲಾಗುತ್ತಿದೆ. ಹಾಗೆ ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ.
ಹರೀಶ್ ಶಂಕರ್ ಅವರು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಶ್ರೀಲೀಲಾ, ರಾಶಿ ಖನ್ನಾ, ಅಶುತೋಶ್ ರಾಣವರು ಮುಂತಾದವರು ಪವನ್ ಕಲ್ಯಾಣ್ ಜೊತೆ ನಟಿಸಿದ್ದಾರೆ. ಈ ಸಿನಿಮಾವನ್ನು ಮಾರ್ಚ್ 26 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ. ಆದರೆ ‘ಟಾಕ್ಸಿಕ್’ ಮುಂದಕ್ಕೆ ಹೋಗುವಾಗ ಮಾರ್ಚ್ 19 ರ ದಿನಾಂಕವನ್ನು ‘ಉಸ್ತಾದ್ ಭಗತ್ ಸಿಂಗ್’ ಚಿತ್ರ ಆಕ್ರಮಿಸಿಕೊಂಡಿದೆ.
ಈ ಉಗಾದಿಕಿ ಉಸ್ತಾದ್ ಊಚಕೋತ 🔥🔥
ನಮ್ಮ USTAAD ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಸಂಭ್ರಮಾಚರಣೆಗಳನ್ನು ಹುಟ್ಟುಹಾಕಲು ಒಂದು ವಾರ ಮುಂಚಿತವಾಗಿ ಆಗಮಿಸುತ್ತದೆ 💥#ಉಸ್ತಾದ್ ಭಗತ್ ಸಿಂಗ್ 19ನೇ ಮಾರ್ಚ್, 2026 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ಬಿಡುಗಡೆ.#UBSOನ್ ಮಾರ್ಚ್ 19
ಪವರ್ ಸ್ಟಾರ್ @PawanKalyan @ಹರೀಶ್2ನೀವು @sreeleela14 #ರಾಶಿ ಖನ್ನಾ @ ThisIsDSP… pic.twitter.com/G6AoBLqxVq
— Mythri Movie Makers (@MythriOfficial) ಮಾರ್ಚ್ 5, 2026
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಉಸ್ತಾದ್ ಭಗತ್ ಸಿಂಗ್’ ಚಿತ್ರ ಈ ಮೊದಲೇ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾ ಬಿಡುಗಡೆ ತಡವಾಗಿತ್ತು. ಈಗ ಒಂದು ವಾರ ಮುಂಚಿತವಾಗಿ ಬಿಡುಗಡೆ ಆಗಲಿದೆ ಎಂಬ ಸುದ್ದಿ ತಿಳಿದು ಪವನ್ ಕಲ್ಯಾಣ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಚಿತ್ರಕ್ಕೆ ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ಬಂಡವಾಳ ಹೂಡಿದೆ.
ಇದನ್ನೂ ಓದಿ: ‘ಧುರಂಧರ 2’ ಸಿನಿಮಾದ ಅವಧಿ ಬರೋಬ್ಬರಿ 4 ಗಂಟೆ? ರಿಸ್ಕ್ ತೆಗೆದುಕೊಂಡ ಚಿತ್ರತಂಡ
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ನಿರ್ಮಾಣ ಸಂಸ್ಥೆಯಿಂದ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಾಗಿದೆ. ‘ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸೆಲೆಬ್ರೇಷನ್ ಮಾಡಲು ನಮ್ಮ ಉಸ್ತಾದ ಒಂದು ವಾರ ಮುಂಚೆಯೇ ಬರುತ್ತಿದೆ. ಮಾರ್ಚ್ 19 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ’ ಎಂದು ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ಪೋಸ್ಟ್ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.