ಯಶ್ (ಯಶ್) ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಹಠಾತ್ತನೆ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಮಧ್ಯ ಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಚಿತ್ರತಂಡ ಹೇಳಿಕೆ ಬಿಡುಗಡೆಯಾಗಿದೆ. ಆದರೆ ಉತ್ತರ ಭಾರತದ ಕೆಲವು ಇನ್ ಸ್ಟಾಗ್ರಾಂ ಸಿನಿಮಾ ವಿಮರ್ಶಕರು, ಕೆಲ ಮಾಧ್ಯಮಗಳು, ‘ಧುರಂಧರ 2’ ಸಿನಿಮಾಕ್ಕೆ ಹೆದರಿ ಸಿನಿಮಾ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ಸಹ ಹೇಳುತ್ತಿದ್ದಾರೆ. ಆದರೆ ಕೆಲ ಮೂಲಗಳ ಪ್ರಕಾರ, ಸಿನಿಮಾ ಬಿಡುಗಡೆಗೆ ಮುಂದಕ್ಕೆ ಹಾಕಬೇಕೆಂಬ ಒತ್ತಡ ಯಶ್ ಹಾಗೂ ಸಿನಿಮಾದ ನಿರ್ಮಾಪಕರ ಮೇಲಿತ್ತು.
‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗುವಂತೆ ಯಶ್ ಹಾಗೂ ನಿರ್ಮಾಪಕ ವೆಂಕಟ್ ಮೇಲೆ ಒತ್ತಡವಿದೆ. ಈ ಒತ್ತಡ ‘ಧುರಂಧರ್ 2’ ಕಡೆಯಿಂದ ಅಲ್ಲ ಬದಲಾಗಿ ‘ಟಾಕ್ಸಿಕ್’ ಸಿನಿಮಾದ ವಿತರಣೆ ಹಕ್ಕು ಪಡೆದಿದ್ದ ವಿತರಕರು. ಅದರಲ್ಲೂ ವಿಶೇಷವಾಗಿ ‘ಟಾಕ್ಸಿಕ್’ ಸಿನಿಮಾದ ಉತ್ತರ ಭಾರತ ವಿತರಣೆ ಹಕ್ಕು ಪಡೆದವರು ಹಾಗೂ ವಿದೇಶ ಹಕ್ಕು ಪಡೆದವರು ಸತತ ಒತ್ತಡದಿಂದಾಗಿ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಒಲ್ಲದ ಮನಸ್ಸಿನಿಂದ ವಿಳಂಬವಾಗುತ್ತಿದೆ.
ಉತ್ತರ ಭಾರತದಲ್ಲಿ ಹಿಂದಿ ಸಿನಿಮಾ ಆದ ‘ಧುರಂಧರ 2’ ಗೆ ಸಹಜವಾಗಿಯೇ ಹೆಚ್ಚು ಶೋಗಳು ಸಿಗುತ್ತಿದ್ದವು. ‘ಧುರಂಧರ 2’ ಜೊತೆಗೆ ‘ಟಾಕ್ಸಿಕ್’ ಬಿಡುಗಡೆ ಆಗಿದ್ದರೆ ‘ಟಾಕ್ಸಿಕ್’ ಉತ್ತರ ಭಾರತದಲ್ಲಿ 30% ಪರದೆಗಳು ಮಾತ್ರವೇ ಸಿಗುತ್ತಿದ್ದವು. ಇದು ವಿತರಕರಿಗೆ ಭಾರಿ ನಷ್ಟ ಉಂಟು ಮಾಡಿದೆ. ಜೊತೆಗೆ ಸೌದಿ ರಾಷ್ಟ್ರಗಳಲ್ಲಿ ಹಾಗೂ ಇತರ ಕೆಲವು ದೇಶಗಳಲ್ಲಿ ಸಿನಿಮಾ ಬಿಡುಗಡೆಯೇ ಅಸಾಧ್ಯವಾಗಿದೆ. ವಿದೇಶಿ ಬಿಡುಗಡೆ ಹಕ್ಕು ಪಡೆದವರು ಸಹ ‘ಟಾಕ್ಸಿಕ್’ ಬಿಡುಗಡೆಗೆ ಒತ್ತಡ ಹೇರಿದ್ದರು. ವಿತರಕರ ಒತ್ತಡ ಮತ್ತು ಅವರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ.
ಇದನ್ನೂ ಓದಿ:ಕೊನೇ ಕ್ಷಣದಲ್ಲಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಯಶ್; ಟಾಕ್ಸಿಕ್ ಸಿನಿಮಾ ರಿಲೀಸ್ ಮುಂದಕ್ಕೆ
‘ಧುರಂಧರ 2’ ಸಿನಿಮಾವನ್ನು ದಕ್ಷಿಣದಲ್ಲಿ ಎದುರಿಸುವುದು ‘ಟಾಕ್ಸಿಕ್’ಗೆ ಕಷ್ಟವೇನೂ ಆಗಿರಬಹುದು, ಆದರೆ ಉತ್ತರ ಭಾರತದ ಹಾಗೂ ವಿದೇಶದಲ್ಲಿ ‘ಧುರಂಧರ 2’ ಜೊತೆಗೆ ಸ್ಪಷ್ಟ ಸ್ಪರ್ಧೆ ಇತ್ತು. ಈ ಸ್ಪರ್ಧೆಯಿಂದ ಎರಡೂ ಸಿನಿಮಾಗಳಿಗೆ ಸಮಾನ ನಷ್ಟ ಆಗುತ್ತಿದೆ. ಆದರೆ ‘ಧುರಂಧರ’ ಸಿನಿಮಾ 1300 ಕೋಟಿಗೂ ಹೆಚ್ಚು ಬಾಚಿಕೊಂಡಿದ್ದು, ‘ಧುರಂಧರ 2’ ಫ್ಲಾಪ್ ಆದರೂ ಅವರಿಗೆ ನಷ್ಟವಿಲ್ಲ. ಆದರೆ ‘ಟಾಕ್ಸಿಕ್’ಗೆ ಹಾಗಾಗದು. ಯಾವುದಾದರೂ ಅನವಶ್ಯಕ ಸ್ಪರ್ಧೆಗೆ ಹೋಗಿ ಲಾಭ ಕಡಿಮೆ ಮಾಡಿಕೊಳ್ಳಲು ಕೂಡ ತುಸು ಪಕ್ಕಕ್ಕೆ ಸರಿದು ಆ ಬಳಿಕ ಒಳ್ಳೆಯ ಲಾಭ ಮಾಡಿಕೊಳ್ಳುವುದು ಜಾಣತನ ಎಂದು ‘ಟಾಕ್ಸಿಕ್’ ತಂಡ ನಿರ್ಧರಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 3:46 pm, ಗುರು, 5 ಮಾರ್ಚ್ 26