ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ
ಮೆದುಳಿಗೆ ಕೆಲಸ ನೀಡುವ ಪಝಲ್ ಗೇಮ್ಗಳು, ಆಪ್ಟಿಕಲ್ ಇಲ್ಯೂಷನ್ (ಆಪ್ಟಿಕಲ್ ಇಲ್ಯೂಷನ್), ಬ್ರೈನ್ ಟೀಸರ್ ಸೇರಿದಂತೆ ಇನ್ನಿತ್ತರ ಒಗಟಿನ ನೀವು ನೋಡುತ್ತೀರಿ. ಬುದ್ಧಿವಂತಿಕೆಗೆ ಸವಾಲೊಡ್ಡುವ ಹಾಗೂ ಮೆದುಳಿಗೆ ವ್ಯಾಯಾಮ ನೀಡುವ ಮನೋರಂಜನಾತ್ಮಕ ಒಗಟುಗಳನ್ನು ಬಿಡಿಸುವುದರಲ್ಲಿರುವ ಮಜಾನೇ ಬೇರೆ. ಇದೀಗ ಅಂತಹದ್ದೇ ಇಲ್ಯೂಷನ್ ಚಿತ್ರ ವೈರಲ್ ಆಗಿದ್ದು, ಹೂವುಗಳ ಮೇಲಿರುವ ಚಿಟ್ಟೆಯನ್ನು ಕಂಡು ಹಿಡಿಯುವ ಸವಾಲು ನಿಮ್ಮ ಮುಂದಿದೆ. ನೀವು 5 ಸೆಕೆಂಡುಗಳಲ್ಲಿ ಒಗಟು ಬಿಡಿಸಲು ಪ್ರಯತ್ನಿಸಿ.
ಈ ಚಿತ್ರ ಏನು ಹೇಳುತ್ತದೆ?
ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಬಹುದಾದ ಈ ಒಗಟಿನ ಆಟ ನಿಮಗೆ ಸವಾಲೇ ಸರಿ. ಈ ಇಲ್ಯೂಷನ್ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಕಾಣುವುದೇ ಗುಲಾಬಿ ಹೂವುಗಳು. ಈ ಹೂವುಗಳ ನಡುವೆ ಬಣ್ಣದ ಚಿಟ್ಟೆಯೊಂದು ಇದೆ. ನೀವು ನಿರ್ದಿಷ್ಟ ಸಮಯದೊಳಗೆ ಬಣ್ಣದ ಚಿಟ್ಟೆ ಕಂಡು ಹಿಡಿದರೆ ನಿಮ್ಮ ವೀಕ್ಷಣಾ ಸಾಮರ್ಥ್ಯವು ಅದ್ಭುತವಾಗಿದೆ.
ಇದನ್ನೂ ಓದಿ: ಈ ಉದ್ಯಾನವನದಲ್ಲಿ ಅಡಗಿರುವ ಜೇನು ನೋವನ್ನು ಗುರುತಿಸಿ
ಬಣ್ಣದ ಚಿಟ್ಟೆ ನಿಮ್ಮ ಕಣ್ಣಿಗೆ ಕಾಣಿಸಿತೇ?
ಈ ಟ್ರಿಕ್ಕಿ ಬಿಡಿಸುವುದು ಹೇಳಿದ್ದಷ್ಟು ಸುಲಭವಲ್ಲ. ನಿಮಗೂ ಕೂಡ ಅನಿಸಿದ್ದೀರಬಹುದು. ಈ ಗುಲಾಬಿಗಳ ನಡುವೆ ಅಡಗಿರುವ ಬಣ್ಣದ ಚಿಟ್ಟೆಯನ್ನು ಹುಡುಕಲು ಕಷ್ಟ ಪಟ್ಟಿರಬಹುದು. ನೀವು ಸೂಕ್ಷವಾಗಿ ಗಮನಿಸಿದರೆ ಮಾತ್ರ ನಿಮ್ಮ ಕಣ್ಣಿಗೆ ಚಿಟ್ಟೆ ಕಾಣಿಸುತ್ತದೆ. ಒಂದು ವೇಳೆ ಈ ಜೀವಿಯನ್ನು ಹುಡುಕಲು ಸಾಧ್ಯವಾಗಿಲ್ಲ ಎಂದಾದರೆ ನಾವೇ ನಿಮಗೆ ಉತ್ತರ ಹೇಳುತ್ತೇವೆ. ಈ ಕೆಳಗಿನ ಚಿತ್ರ ನೋಡಿ ಬಣ್ಣದ ಚಿಟ್ಟೆ ಎಲ್ಲಿದೆ ಎಂದು ನಿಮಗೆ ತಿಳಿಯುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ