Headlines

ಗಲಾಟೆ ಬಿಡಿಸಲು ಹೋದವನಿಂದಲೇ ಚಾಕು ಇರಿತ​: ಹೋಳಿ ದಿನವೇ ನಡೀತು ರಕ್ತದೋಕುಳಿ

ಗಲಾಟೆ ಬಿಡಿಸಲು ಹೋದವನಿಂದಲೇ ಚಾಕು ಇರಿತ​: ಹೋಳಿ ದಿನವೇ ನಡೀತು ರಕ್ತದೋಕುಳಿ


ನೆಲಮಂಗಲ, ಮಾರ್ಚ್ 05: ಯುವಕರ ನಡುವೆ ಗಲಾಟೆ ಬಿಡಿಸಲು ಹೋದ ವ್ಯಕ್ತಿಯೇ ಇಬ್ಬರಿಗೆ ಚಾಕುವಿನಿಂದ ಇರಿದ ಪರಿಣಾಮ ಮೃತ ಪಟ್ಟ ಮತ್ತೋರ್ವ ಗಂಭೀರ ಘಟನೆ ನೆಲಮಂಗಲ ತಾಲೂಕಿನ ಗೋವೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿಕ್ಕಿಕುಮಾರ್ ಮೃತ ವ್ಯಕ್ತಿ ಆಸ್ಪತ್ರೆ, ಓಮ್ ಪ್ರಕಾಶ್ ಗಂಭೀರ ರೋಗವು ಸೇರಿದ್ದಾನೆ. ಘಟನೆ ಸಂಬಂಧ ಆರೋಪಿ ಗಿರೀಶ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೋಳಿ ಹಬ್ಬದ ದಿನವೇ ನಡೆದಿರುವ ಈ ಭೀಕರ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ಗೋವೇನಹಳ್ಳಿ ಗ್ರಾಮದ ಸಿಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಒರಿಸ್ಸಾ ಮೂಲದ ಯುವಕರ ನಡುವೆಯೇ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಶುರುವಾಗಿದೆ. ಈ ವೇಳೆ ಸ್ಥಳಕ್ಕೆ ಬಂದ ಆಪರೇಟರ್ ಗೀರೀಶ್ ಎಲ್ಲರಿಗೂ ಬೈದಿದ್ದಾನೆ. ಹೀಗಾಗಿ ಒರಿಸ್ಸಾ ಹುಡುಗರು ಈತನ ಮೇಲೆ ತಿರುಗಿಬಿದ್ದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಗಿರೀಶ್, ನನ್ನ ಜೊತೆಗೇ ಗಲಾಟೆ ಮಾಡುತ್ತೀರಾ ಎಂದು ಇಬ್ಬರಿಗೆ ಚಾಕು ಇದ್ದಿದ್ದಾನೆ. ಒರಿಸ್ಸಾ ಮೂಲದ ಘಟನೆಯಲ್ಲಿ ವಿಕ್ಕಿಕುಮಾರ್ ಇದ್ದಾರೆ, ಓಮ್ ಪ್ರಕಾಶ್ ಸ್ಥಿತಿಂತಾಜನಕವಾಗಿದೆ. ಗಾಯಾಳುವನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.

ಇದನ್ನೂ ಓದಿ: ಬೀಗ ಹಾಕಿದ್ದ ಮನೆಯಿಂದ ಬರ್ತಿತ್ತು ದುರ್ನಾಥ; ಬಾಗಿಲು ತೆರೆದು ನೋಡಿದ್ರೆ ಕಂಡಿದ್ದು ಯುವಕನ ಬೆತ್ತಲೆ ಶವ!

ಇನ್ನು ಈ ಸಿಮೆಂಟ್ ಫ್ಯಾಕ್ಟರಿ ಡಾ. ಮಂಜುನಾಥ್ ಎಂಬುವವರಿಗೆ ಸೇರಿದ್ದು ಎನ್ನುವುದಕ್ಕೆ, ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡ ತ್ಯಾಮಗೊಂಡ್ಲು ಆರೋಪಿ ಗಿರೀಶ್ ಅವರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಯುವಕರ ನಡುವಿನ ಗಲಾಟೆ ಬಿಡಿಸಲು ಹೋದವನೇ ಸಿಟ್ಟಿಗೆದ್ದು ಕೊಲೆ ಮಾಡಿ ಮತ್ತೊಬ್ಬ ಆಸ್ಪತ್ರೆ ಸೇರಲು ಕಾರಣವಾಗಿರೋದು ಸಾರ್ವಜನಿಕರ ಹುಬ್ಬೇರಿಸಿದೆ. ಹೋಳಿ ಹಬ್ಬದ ದಿನ ಬಣ್ಣದೋಕುಳಿ ನಡೆಸುವ ಬದಲು ರಕ್ತದೋಕುಳಿ ನಡೆದಿರೋದು ಭೀತಿಯನ್ನು ಸೃಷ್ಟಿಸಿದೆ.

ವರದಿ: ಮಂಜುನಾಥ್ ಟಿವಿ9 ನೆಲಮಂಗಲ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *