Headlines

ಇದು ಅಪ್ಪು ಹೇಳಿಕೊಟ್ಟ very very special ಚಿತ್ರಾನ್ನ: ಆದ್ರೆ ಕ್ಲೈಮ್ಯಾಕ್ಸ್​ ಮಾತ್ರ ಸಕತ್​ ಇಂಟರೆಸ್ಟಿಂಗ್​!

ಇದು ಅಪ್ಪು ಹೇಳಿಕೊಟ್ಟ very very special ಚಿತ್ರಾನ್ನ: ಆದ್ರೆ ಕ್ಲೈಮ್ಯಾಕ್ಸ್​ ಮಾತ್ರ ಸಕತ್​ ಇಂಟರೆಸ್ಟಿಂಗ್​!

ಇದು ಅಪ್ಪು ಹೇಳಿಕೊಟ್ಟ very very special ಚಿತ್ರಾನ್ನ: ಆದ್ರೆ ಕ್ಲೈಮ್ಯಾಕ್ಸ್​ ಮಾತ್ರ ಸಕತ್​ ಇಂಟರೆಸ್ಟಿಂಗ್​!

ನಟ ಪುನೀತ್ ರಾಜ್‌ಕುಮಾರ್ ಅವರು ಸೃಜನ್ ಲೋಕೇಶ್ ಅವರೊಂದಿಗಿನ ಸಂದರ್ಶನದಲ್ಲಿ ಚಿತ್ರಾನ್ನ ಮಾಡುವ ವಿಧಾನವನ್ನು ತಮಾಷೆಯಾಗಿ ವಿವರಿಸಿದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಪ್ಪು, ಅಡುಗೆಗೆ ಬೇಕಾದ ಪ್ರಮುಖ ಸಾಮಗ್ರಿ ಮರೆತು ಹೇಳಿದ್ದು,  ತಮಾಷೆಯ ಕ್ಷಣವನ್ನು ನೆನಪಿಸುತ್ತದೆ.

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ನಾಲ್ಕು ವರ್ಷಗಳೇ ಕಳೆದರೂ ಅವರ ನೆನಪು ಅವರ ಅಭಿಮಾನಿಗಳ ಹೃದಯದಲ್ಲಿ ಹಚ್ಚ ಹಸಿರಾಗಿಯೇ ಇರುತ್ತದೆ. ಅವರು ತೋರಿದ ಹಾದಿಯಲ್ಲಿಯೇ ಹಲವರು ನಡೆಯುತ್ತಿದ್ದರೆ, ಮತ್ತೆ ಕೆಲವರು ವಿವಿಧ ರೀತಿಯ ವಿಡಿಯೋ ಮೂಲಕ ಅಪ್ಪು ಅವರನ್ನು ಸದಾ ನೆನಪಾಗಿಸಿಯೇ ಇರುತ್ತಾರೆ.

ಇದೀಗ divyak_vishwanath ಎನ್ನುವವರು ಒಂದು ವಿಡಿಯೋ ಶೇರ್​ ಮಾಡಿದ್ದಾರೆ. ಅದರಲ್ಲಿ ಅವರು ಅಪ್ಪು ಸ್ಟೆಷಲ್​ ಚಿತ್ರಾನ್ನ ಮಾಡಿದ್ದಾರೆ. ಆದರೆ ಆ್ಯಂಕರ್​ ಸೃಜನ್​ ಲೋಕೇಶ್​ ಅವರು ಮಾಡಿರುವ ಸಂದರ್ಶನದ ತುಣುಕಾಗಿದೆ. ಇದನ್ನು ಇಟ್ಟುಕೊಂಡು ಈ ಚಿತ್ರಾನ್ನ ಮಾಡಲಾಗಿದೆ.

ಆದರೆ ಈ ಚಿತ್ರಾನ್ನ ಭಾರಿ ಸ್ಪೆಷಲ್​ ಆಗಲು ಕಾರಣವೂ ಒಂದಿದೆ. ಅದೇನೆಂದರೆ, ಚಿತ್ರಾನ್ನ ಮಾಡುವ ಬಗೆಯನ್ನು ಪುನೀತ್​ ರಾಜ್​ ಅವರು ಹೇಳಿದ ಸ್ಟೈಲ್​. ಅಷ್ಟಕ್ಕೂ ಅವರಿಗೆ ಸರಿಯಾಗಿ ಹೇಳಲು ಬರಲಿಲ್ಲ. ಎಲ್ಲೋ ಕಲಿತಿದ್ದನ್ನು ಹೇಳಿದ್ದರು. ಇದರ ಸಕತ್​ ತಮಾಷೆಯಾಗಿದೆ.

ಇದರಲ್ಲಿ ಅಪ್ಪು ಅವರು ಹೇಳಿದ್ದೇನೆಂದರೆ, ಮೊದಲಿಗೆ ರಾತ್ರಿ ಮಿಕ್ಕಿದ ಅನ್ನ ತೆಗೆದುಕೊಳ್ಳಿ, ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿಬಿಟ್ಟು, ಅದಕ್ಕೆ ಕತ್ತರಿಸಿದ ಈರುಳ್ಳಿ, ಸ್ವಲ್ಪ ಟೊಮೆಟೊ, ಸ್ವಲ್ಪ ಮಸಾಲೆ ಪುಡಿ ಹಾಕಬೇಕು ಎಂದಿದ್ದಾರೆ.

ಮಸಾಲಾ ಪುಡಿನಾ ಎಂದು ಸೃಜನ್​ ಅವರು ಕೇಳಿದಾಗ, ಅಲ್ಲಲ್ಲಾ, ಚೂರು ಅರಿಶಿಣದ ಪುಡಿ ಹಾಕಬೇಕು ಎಂದಿದ್ದಾರೆ. ಒಂದು ಚಿಕ್ಕ ಪಾತ್ರೆಯಲ್ಲಿ ಬೇಕಿದ್ದರೆ ಒಗ್ಗರಣೆ ಮಾಡಿಕೊಳ್ಳಬೇಕು ಎಂದಾಗ ಸೃಜನ್​ ಅವರು ಅದನ್ನೆಲ್ಲಾ ಮೊದಲೇ ಹಾಕೋಬೇಕು ಎಂದಾಗ, ಅಪ್ಪು, ಅಯ್ಯೋ ಹೌದಾ ಸಾರಿ ಎಂದಿದ್ದಾರೆ.

ಅದೇನೋ ಹಾಕಿ ಮಿಕ್ಕದ ಅನ್ನ ಹಾಕಿ ನಿಂಬೆ ಹಣ್ಣು ಹಾಕಿಬಿಟ್ರೆ ಎಲ್ಲವೂ ಫಿನಿಷ್​ ಎಂದಿದ್ದಾರೆ. ಆಗ ಸೃಜನ್​ ಅವ್ರು ಹಾಗಿದ್ರೆ ಉಪ್ಪು? ಎಂದು ಪ್ರಶ್ನಿಸಿದ್ರು. Appu where is Uppu ಎಂದು ಕೇಳಿದಾಗ ಪುನೀತ್​, ಅಯ್ಯಯ್ಯೋ ಹೌದಲ್ವಾ? ಬೇಕು ಅಂದಾಗ ಹಾಕ್ಕೊಂಡ್ರೆ ಆಯ್ತಪ್ಪಾ ಎಂದಿದ್ದಾರೆ.

Source link

Leave a Reply

Your email address will not be published. Required fields are marked *