ನವದೆಹಲಿ, ಮಾರ್ಚ್ 5: ಡಾಲರ್ ಎದುರು 92ರ ಮಟ್ಟಕ್ಕಿಂತ ಮೇಲೆ ಹೋಗಿದ್ದ ರುಪಾಯಿ (ಡಾಲರ್ ವಿರುದ್ಧ ರೂಪಾಯಿ) ಇವತ್ತಿನ ವಹಿವಾಟಿನಲ್ಲಿ 45 ಪೈಸೆ ಚೇತರಿಸಿಕೊಂಡಿದೆ. ಇಂಟರ್ಬ್ಯಾಂಕ್ ಫಾರೀನ್ ಎಕ್ಸ್ಚೇಂಜ್ ಟ್ರೇಡಿಂಗ್ನಲ್ಲಿ ಬುಧವಾರ ಡಾಲರ್ ಎದುರು 92.05ರಲ್ಲಿ ಅಂತ್ಯಗೊಂಡ ರುಪಾಯಿ, ಗುರುವಾರ ಬೆಳಗ್ಗೆ 92.16ರಲ್ಲಿ ಆರಂಭವಾಯಿತು. ರುಪಾಯಿ ಮೌಲ್ಯ ಒಂದು ಹಂತದಲ್ಲಿ 92.30ಕ್ಕೆ ಹೋಗಿತ್ತು. ಬಳಿಕ 91.60ರಲ್ಲಿ ಅಂತ್ಯಗೊಂಡಿತು. ಬುಧವಾರದ ಕೊನೆಯಲ್ಲಿ ಮೌಲ್ಯಕ್ಕೆ ರುಪಾಯಿ 45 ಪೈಸೆಯಷ್ಟು ಪ್ರಗತಿ ಕಂಡಿದೆ.
ಫಾರೆಕ್ಸ್ ಮಂಗಳವಾರ ಹೋಳಿ ಪ್ರಯುಕ್ತ ಮಾರುಕಟ್ಟೆಯಲ್ಲಿ ಇರಲಿಲ್ಲ. ಸೋಮವಾರ ಡಾಲರ್ ಎದುರು ರುಪಾಯಿ 41 ಪೈಸೆ ಕುಸಿದರೆ, ಬುಧವಾರ ಬರೋಬ್ಬರಿ 56 ಪೈಸೆ ಕುಸಿದಿತ್ತು. ಗುರುವಾರವೂ ರುಪಾಯಿ ಕುಸಿಯಬಹುದು ಎಂದೆಂದಿಗೂ ಹೆಚ್ಚಿನವರ ಎಣಿಕೆಯಾಗಿತ್ತು. ಆದರೆ, ಕೆಲವು ವರದಿಗಳ ಪ್ರಕಾರ ಆರ್ ಬಿಐ ಒಂದಷ್ಟು ಡಾಲರ್ಗಳನ್ನು ಮಾರುವುದು ಇತ್ಯಾದಿ ಕ್ರಮಗಳ ಮೂಲಕ ರುಪಾಯಿ ಕುಸಿತವನ್ನು ತಡೆಯಿತು.
ಆದಾಗ್ಯೂ, ರುಪಾಯಿ ಪರಿಹಾರಕ್ಕೆ ಮತ್ತೊಂದು ಸಂಭಾವ್ಯ ಕಾರಣವೆಂದರೆ, ಈಕ್ವಿಟಿ ಮಾರುಕಟ್ಟೆಗಳಲ್ಲಿ ಷೇರುಗಳನ್ನು ಖರೀದಿಸುವ ಟ್ರೆಂಡ್ ನಡೆದಿದೆ. ಗುರುವಾರ ಸಾಂಸ್ಥಿಕ ಹೂಡಿಕೆದಾರರಿಂದ ಸಾಕಷ್ಟು ಷೇರುಗಳ ಖರೀದಿ ಆಗಿದೆ. ಇವತ್ತು ಷೇರು ಮಾರುಕಟ್ಟೆ ಹಸಿರು ಬಣ್ಣಕ್ಕೆ ತಿರುಗಲು ಇದೂ ಒಂದು ಕಾರಣ ಅಗತ್ಯ.
ಇದನ್ನೂ ಓದಿ: ಬೇರೆಡೆಗೆ ಹೋಗುತ್ತಿದ್ದ ದೇಶೀಯ ತೈಲ ಟ್ಯಾಂಕರ್ಗಳು ಭಾರತದ ಕಡೆಗೆ; ಆಪತ್ಕಾಲದಲ್ಲಿ ಭಾರತಕ್ಕೆ ದಕ್ಕಿದ ನೆರವು
ಡಾಲರ್ ಬಲ, ಕಚ್ಚಾ ತೈಲ ಬೆಲೆ, ವಿದೇಶೀ ಹೂಡಿಕೆಗಳ ಹೊರಹರಿವು ಈ ಅಂಶಗಳು ರುಪಾಯಿಯನ್ನು ದುರ್ಬಲ ಸ್ಥಿತಿಗೆ ತಳ್ಳಿವೆ. ಆರ್ಬಿಐ ಹೆಚ್ಚು ದಿನ ರುಪಾಯಿ ಕುಸಿತವನ್ನು ತಡೆಯಲು ಕ್ರಮ ತೆಗೆದುಕೊಳ್ಳುವುದಿಲ್ಲ. ಹೀಗಾಗಿ, ಶುಕ್ರವಾರ ಡಾಕ್ಟರ್ ಎದುರು ರೂಪಾಯಿ ಹೇಗಿರುತ್ತೆ ಎಂದು ನಿಶ್ಚಿತವಾಗಿ ಹೇಳಲು ಆಗುವುದಿಲ್ಲ. ಶುಕ್ರವಾರದ ಪ್ರಕಾರ ಶುಕ್ರವಾರ ರುಪಾಯಿ 91.30 ರಿಂದ 92.1 ಶ್ರೇಣಿಯಲ್ಲಿ ಟ್ರೇಡಿಂಗ್ ಕಂಡುಬರುತ್ತದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ