ಇಂಧನಕ್ಕೆ ಯಾವ ತೊಂದರೆ ಇಲ್ಲ, ಸಾಕಷ್ಟು ದಾಸ್ತಾನು ಇದೆ; ದಿನವೂ ಭರಿಸುತ್ತಿದ್ದೇವೆ: ಸರ್ಕಾರದ ಮೂಲಗಳು

ಇಂಧನಕ್ಕೆ ಯಾವ ತೊಂದರೆ ಇಲ್ಲ, ಸಾಕಷ್ಟು ದಾಸ್ತಾನು ಇದೆ; ದಿನವೂ ಭರಿಸುತ್ತಿದ್ದೇವೆ: ಸರ್ಕಾರದ ಮೂಲಗಳು


ನವದೆಹಲಿ, ಮಾರ್ಚ್ 5: ಇಂಧನ ಭದ್ರತೆ (ಇಂಧನ ಭದ್ರತೆ) ಉತ್ತಮವಾಗಿದೆ. ಇಂಧನ ದಾಸ್ತಾನು ಸಾಕಷ್ಟು ಇದೆ ಎಂದು ಸರ್ಕಾರದ ಮೂಲಗಳು ಹೇಳಿದ್ದಾಗಿ ಎಎನ್ಐ ವರದಿ ಮಾಡಿದೆ. ಕಚ್ಚಾ ತೈಲವನ್ನು (ಕ್ರೂಡ್ ಆಯಿಲ್) ದಿನವೂ ಭರಿಸಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಭಾರತಕ್ಕೆ ಎಲ್ಪಿಜಿ ಮತ್ತು ಎಲ್ಎನ್ ಜಿ ಗ್ಯಾಸ್ ಬಿಕ್ಕಟ್ಟು ಸರ್ಕಾರದ ಮೂಲವಾದಂತಹ ವರದಿಗಳು ತಳ್ಳಿಹಾಕಿವೆ.

‘ವಿಶ್ವದಲ್ಲಿ ಕಚ್ಚಾ ತೈಲಕ್ಕೆ ಯಾವ ಕೊರತೆ ಇಲ್ಲ. ಎಲ್‌ಪಿಜಿ ಅಥವಾ ಎಲ್‌ಎನ್‌ಜಿಗೂ ಕೊರತೆ ಇಲ್ಲ. ಇತರ ಪೂರೈಕೆದಾರರೊಂದಿಗೂ ಭಾರತ ಸಂಪರ್ಕದಲ್ಲಿದೆ. ಆಸ್ಟ್ರೇಲಿಯಾ ಮತ್ತು ಕೆನಡಾ ದೇಶಗಳು ಭಾರತಕ್ಕೆ ಗ್ಯಾಸ್ ಮಾರಲು ಮುಂದೆ ಬಂದಿವೆ. ಭಾರತ ಪರ್ಯಾಯ ಮೂಲಗಳನ್ನು ಹುಡುಕುತ್ತಿದೆ. ಇತ್ತೀಚೆಗಷ್ಟೇ ಯುಇ ಮತ್ತು ಅಮೆರಿಕ ಜೊತೆ ಭಾರತ ಹೊಸ ಗುತ್ತಿಗೆಗೆ ಸಹಿ ಹಾಕಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತ 195 ಎಂಎಂಎಸ್ ಸಿಎಂಡಿಯಷ್ಟು ಅನಿಲವನ್ನು ಆಮದು ಮಾಡಿಕೊಳ್ಳುತ್ತದೆ. ಇದರಲ್ಲಿ ಕತಾರ್ 60 ಎಂಎಂಎಸ್ ಸಿಎಂಡಿ ಗ್ಯಾಸ್ ಪೂರೈಸುತ್ತದೆ. ಅನಿಲಕ್ಕಾಗಿ ಭಾರತ ಇತರ ಮಾರುಕಟ್ಟೆಗಳನ್ನೂ ಅವಲೋಕಿಸುತ್ತಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಎಂಎಂಎಸ್ ಸಿಎಂಡಿ ಎಂದರೆ ಮಿಲಿಯನ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ಸ್ ಪರ್ ಡೇ. ಅಂದರೆ ದಿನಕ್ಕೆ ಮಿಲಿಯನ್ ಸ್ಟ್ಯಾಂಡರ್ ಕ್ಯೂಬಿಕ್ ಮೀಟರ್ಸ್ ನಷ್ಟು ಗ್ಯಾಸ್ ಪೂರೈಕೆ. ಕಿಲೋಗೆ ಪರಿವರ್ತಿಸುವುದಾದರೆ ದಿನಕ್ಕೆ 8.5 ಲಕ್ಷ ಕಿಲೋ ಗ್ಯಾಸ್ ಆಗುತ್ತದೆ.

ಇದನ್ನೂ ಓದಿ: ಬೇರೆಡೆಗೆ ಹೋಗುತ್ತಿದ್ದ ದೇಶೀಯ ತೈಲ ಟ್ಯಾಂಕರ್ಗಳು ಭಾರತದ ಕಡೆಗೆ; ಆಪತ್ಕಾಲದಲ್ಲಿ ಭಾರತಕ್ಕೆ ದಕ್ಕಿದ ನೆರವು

ಕಚ್ಚಾ ತೈಲ ಮತ್ತು ಅನಿಲಗಳನ್ನು ಖರೀದಿಸಲು ಭಾರತ ವಿಶ್ವದ ವಿವಿಧ ಏಜೆನ್ಸಿಗಳೊಂದಿಗೆ ಸಂಪರ್ಕ ಹೊಂದಿದೆ. ಅಂತರರಾಷ್ಟ್ರೀಯ ಇಂಧನ ಸಂಸ್ಥೆಯಾದ ಐಐಎ ಮತ್ತು ಒಕೆಪ್ (ಒಪಿಐಸಿ) ಜೊತೆ ಮಾತುಕತೆ ನಡೆಸುತ್ತಿದೆ. ತೈಲ ಸಾಗಿಸುವ ಹಡಗುಗಳಿಗೆ ಇನ್ಷೂರೆನ್ಸ್ ಪಡೆಯಲು ಅಮೆರಿಕದೊಳಗೆ ಭಾರತ ಮಾತುಕತೆ ನಡೆಸುತ್ತಿದೆ. ದಿನಕ್ಕೆ ಎರಡು ಬಾರಿ ಇಂಧನ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *