ಇರಾನ್​ ಪತನಕ್ಕೆ ಕಾರಣವಾದಳಾ ಈ ಯುವತಿ? ಖಮೇನಿ ಬದುಕಿಗೆ ಕೊನೆ ಮೊಳೆ ಹೊಡೆದಳಾ ಈಕೆ? ಏನಿದು ಸ್ಟೋರಿ? | Is Ahou Daryaei Cause The Downfall Of Iran Did She Put An End To Khameneis Life Suc

ಇರಾನ್​ ಪತನಕ್ಕೆ ಕಾರಣವಾದಳಾ ಈ ಯುವತಿ? ಖಮೇನಿ ಬದುಕಿಗೆ ಕೊನೆ ಮೊಳೆ ಹೊಡೆದಳಾ ಈಕೆ? ಏನಿದು ಸ್ಟೋರಿ? | Is Ahou Daryaei Cause The Downfall Of Iran Did She Put An End To Khameneis Life Suc



ಇರಾನ್​ ಪತನಕ್ಕೆ ಕಾರಣವಾದಳಾ ಈ ಯುವತಿ? ಖಮೇನಿ ಬದುಕಿಗೆ ಕೊನೆ ಮೊಳೆ ಹೊಡೆದಳಾ ಈಕೆ? ಏನಿದು ಸ್ಟೋರಿ? | Is Ahou Daryaei Cause The Downfall Of Iran Did She Put An End To Khameneis Life Suc

ಇರಾನ್ ಸರ್ವಾಧಿಕಾರಿ ಅಲಿ ಖಮೇನಿಯ ಸಾವಿನ ನಂತರ, 2004ರಲ್ಲಿ ಹಿಜಾಬ್ ಕಾನೂನುಗಳ ವಿರುದ್ಧ ಪ್ರತಿಭಟಿಸಿದ ಅಹೌ ದರಾಯೈ ಎಂಬ ವಿದ್ಯಾರ್ಥಿನಿಯ ಹೆಸರು ಮುನ್ನೆಲೆಗೆ ಬಂದಿದೆ. ಆಕೆಯ ದಿಟ್ಟ ಪ್ರತಿಭಟನೆಯು ಇರಾನ್‌ನ ಮಹಿಳೆಯರಲ್ಲಿ ಪ್ರತಿರೋಧದ ಕಿಡಿಯನ್ನು ಹೊತ್ತಿಸಿತು.

ಸತತ 36 ವರ್ಷ ಆರು ತಿಂಗಳು ಇರಾನ್​ ದೇಶದ ಸರ್ವಾಧಿಕಾರಿಯಾಗಿ ಮೆರೆದಿದ್ದ ಅಲಿ ಖಮೇನಿಯ ಅಂತ್ಯವಾಗಿದೆ. ಮುಸ್ಲಿಮ್​ ರಾಷ್ಟ್ರಗಳೂ ಸೇರಿ ಹಲವೆಡೆ ಕೇಕೇ ಹಾಕಿ ವಿಜ್ರಂಭಿಸುತ್ತಿದ್ದರೆ, ಭಾರತದಲ್ಲಿ ಕೆಲವು ನಾಯಕರು ಸೇರಿ ಕೆಲವರು ಖಮೇನಿಯ ಸಾವಿಗೆ ಕಣ್ಣೀರು ಹರಿಸುತ್ತಿದ್ದಾರೆ. ಖಮೇನಿಯ ಸಾವಿನ ಬಳಿಕ, ಅಲ್ಲಿಯ ಹೆಣ್ಣುಮಕ್ಕಳ ಮೇಲೆ ಆದ ದೌರ್ಜನ್ಯ, ಹಿಜಾಬ್​ ಹೆಸರಿನಲ್ಲಿ ಮಾಡಿದ ಅನಚಾರ, ಆ ರಕ್ತಸಿಕ್ತ ಅಧ್ಯಾಯಗಳು ಒಂದೊಂದಾಗಿ ಬಹಿರಂಗಗೊಳ್ಳುತ್ತಿದೆ. ಅಮೆರಿಕದಲ್ಲಿ ನೆಲೆಸಿರುವ ಇರಾನಿಯನ್ನರು ಕೂಡ ಥ್ಯಾಂಕ್ಯೂ ಟ್ರಂಪ್​ ಎಂದು ಆಗಸದಲ್ಲಿ ಧನ್ಯವಾದ ಸಲ್ಲಿಸುತ್ತಾ ಹಾರಾಟ ನಡೆಸಿದ್ದರು! ಇದೆ ವೇಳೆ ಇರಾನ್​ ದೇಶಕ್ಕೆ ಅಲಿ ಕೊಟ್ಟಿರುವ ಕೊಡುಗೆಗಳ ಬಗ್ಗೆಯೂ ಕೆಲವರು ಮಾತನಾಡುತ್ತಿದ್ದಾರೆ.

ಇರಾನ್​ ಪತನಕ್ಕೆ ಕಾರಣ

ಇವೆಲ್ಲವುಗಳ ನಡುವೆಯೇ, ಇದೀಗ ಓರ್ವ ಹೆಣ್ಣಿನ ಹೆಸರು ಕೇಳಿಬರುತ್ತಿದೆ. ಇರಾನ್​ ಪತನಕ್ಕೆ ಅಂದೇ ನಾಂದಿ ಹಾಡಿದ್ದಳು ಈಕೆ ಎಂದು ಹೇಳಲಾಗುತ್ತಿದೆ. ಅವಳ ಹೆಸರೇ ಅಹೌ ದರಾಯೈ (Ahou Daryaei of Iran). ಈಕೆ 2004ರಲ್ಲಿ ತೆಗೆದುಕೊಂಡ ಒಂದೇ ಒಂದು ನಿರ್ಧಾರ, ಇಂದು ಇರಾನ್​ ಸರ್ವನಾಶಕ್ಕೆ ಕಾರಣವಾಗುತ್ತಿದೆ, ಖಮೇನಿಯ ಸಾವಿಗೂ ಇದೇ ಕಾರಣ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ ಎನ್ನುವ ಗಾದೆ ಮಾತು ಕೂಡ ಸುಳ್ಳಲ್ಲವಲ್ಲ. ಅದೇ ಮಾತು ಇದೀಗ ಇರಾನ್​ ದೇಶವೂ ಸಾಕ್ಷಿಯಾಗಿದೆ ಎನ್ನಲಾಗುತ್ತಿದೆ. 2004ರಲ್ಲಿ ನಡೆದ ಆ ಒಂದು ಘಟನೆ ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿತ್ತು. ಅದಕ್ಕೆ ಕಾರಣವಾಗಿದ್ದು ಇದೇ ಅಹೌ ದರಾಯೈ.

ಯಾರೀ ಅಹೌ ದರಾಯೈ?

ಟೆಹ್ರಾನ್‌ನ ಆಜಾದ್ ವಿಶ್ವವಿದ್ಯಾಲಯದಲ್ಲಿ ಫ್ರೆಂಚ್ ಭಾಷಾ ವಿದ್ಯಾರ್ಥಿನಿಯಾಗಿರುವ 30 ವರ್ಷದ ಅಹೌ ದರಾಯೈ, ಇರಾನ್‌ನ ಕಠಿಣ ಹಿಜಾಬ್ ಕಾನೂನುಗಳ ವಿರುದ್ಧದ ಪ್ರತಿರೋಧದ ಸಂಕೇತವಾದಳು. ನವೆಂಬರ್ 2, 2024 ರಂದು, ತನ್ನ ಹಿಜಾಬ್ ಬಗ್ಗೆ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ವಾಗ್ವಾದ ನಡೆಸಿದಳು. ಆಕೆ ಹಿಜಾಬ್​ ಧರಿಸುವುದು ಕಡ್ಡಾಯ ಎಂದು ಅವಳ ಮೇಲೆ ಪೊಗರು ತೋರಿಸಲು ಪೊಲೀಸರು ಬಂದಾಗ ಕ್ಯಾಂಪಸ್​ನಲ್ಲಿಯೇ ತನ್ನ ಬಟ್ಟೆಗಳನ್ನು ತೆಗೆದು ಬಿಕಿನಿ ಓಡಾಟ ನಡೆಸಿದಳು. ಒಮ್ಮೆ ಊಹಿಸಿಕೊಳ್ಳಿ. ಇರಾನ್​ನಂಥ ದೇಶದಲ್ಲಿ, ಹಿಜಾಬ್​ ಬಗ್ಗೆ ಅಷ್ಟು ಕಟ್ಟುನಿಟ್ಟಿನ ರೂಲ್ಸ್​ ಇರುವ ದೇಶದಲ್ಲಿ, ಹಿಜಾಬ್​ ಸರಿದಿತ್ತು ಎನ್ನುವ ಕಾರಣಕ್ಕೆ 13 ವರ್ಷದ ಬಾಲೆಯ ಮೇಲೆ ವೇ*ಶ್ಯೆಯ ಪಟ್ಟ ಕಟ್ಟಿ ನೇಣುಗಂಬಕ್ಕೆ ಏರಿಸಿದ ಇದೇ ದೇಶದಲ್ಲಿ, ಗಾಳಿಗೆ ಹಿಜಾಬ್​ ಹಾರಿ ಮುಖ ಕಾಣಿಸಿತು ಎನ್ನುವ ಕಾರಣಕ್ಕೆ ಯುವತಿಯೊಬ್ಬಳ ಮೇಲೆ ಆ್ಯಸಿಡ್​ ಎರೆಚಿದ ಇದೇ ದೇಶದಲ್ಲಿ, ಬಿಕಿನಿಯಲ್ಲಿ ಒಬ್ಬ ಯುವತಿ ಓಡಾಡಿದಳು ಎಂದರೆ ಬಹುಶಃ ಯಾವ ಸಿನಿಮಾದಲ್ಲಿಯೂ ಇಂಥ ದೃಶ್ಯ ಕಾಣಲು ಸಾಧ್ಯವೇ ಇಲ್ಲ ಅಲ್ಲವೆ!

ಸಿಡಿದೆದ್ದ ನಾರಿಯರು

ದೌರ್ಜನ್ಯದ ವಿರುದ್ಧ ಒಂದು ದನಿ ಬಂದಾಗ, ಅದಕ್ಕೆ ಸಾವಿರಾರು ದನಿಗಳು ಸೇರುತ್ತವೆ ಎನ್ನುವುದಕ್ಕೆ ಅಹೌ ದರಾಯೈ ಕಾರಣವಾದಳು. ಅಲ್ಲಿಯವರೆಗೆ ಸಂಪ್ರದಾಯದ ಹೆಸರಿನಲ್ಲಿ ಹಿಜಾಬ್​ ಎಂಬ ಹೇರಿಕೆಯಿಂದ ಅದೆಷ್ಟೋ ದಶಕಗಳಿಂದ ನಲುಗಿ ಹೋಗಿದ್ದ ಹೆಣ್ಣುಮಕ್ಕಳು ಅದರ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಅದು ತುಂಬಾ ಹಿಂಸಾತ್ಮಕ ಸ್ವರೂಪ ಪಡೆಯಿತು. ಸಾವು ನೋವನ್ನೂ ಲೆಕ್ಕಸಿದೇ ಹೆಣ್ಣುಮಕ್ಕಳು ಅಪಾರ ಸಂಖ್ಯೆಯಲ್ಲಿ ಹೋರಾಟ ನಡೆಸಿದರು. ಅಂದೇ ಇರಾನ್​ನ ಅಂತ್ಯಕ್ಕೆ, ಖಮೇನಿಯ ದೌರ್ಜನ್ಯಕ್ಕೆ ಯುವತಿಯರು ಕೊನೆಯ ಮೊಳೆ ಹೊಡೆದು ಬಿಟ್ಟಿದ್ದರು. ಅದೊಂದು ಆರಂಭ, ಇಂದು ಇಂಥ ಅವನತಿಗೆ ಕಾರಣವಾಯಿತು ಎನ್ನಲಾಗಿದೆ.

ಜಗ್ಗಲಿಲ್ಲ, ಬಗ್ಗಲಿಲ್ಲ

ಆ ಪ್ರತಿಭಟನೆ, ಹಿಂಸಾಚಾರ, ಗಲಭೆಯಿಂದ ಸಾವು ನೋವಿನ ನಡುವೆಯೂ, ಸರ್ಕಾರದ ತೀವ್ರ ದಮನದ ಹೊರತಾಗಿಯೂ, ಇರಾನಿನ ಮಹಿಳೆಯರು ತಮ್ಮ ದೃಢನಿಶ್ಚಯ ಬಿಟ್ಟಿಲ್ಲ. ಇಂದಿಗೂ ವಿಶೇಷವಾಗಿ ನಗರ ಪ್ರದೇಶಗಳಲ್ಲಿ, ಪ್ರತಿದಿನವೂ ಹಿಜಾಬ್​ ಇಲ್ಲದೇ ಹೋಗುವುದನ್ನು ಕೆಲವರು ಮುಂದುವರೆಸಿದ್ದಾರೆ. ಈ ಬಗ್ಗೆ ಆಗಾಗ್ಗೆ ಪೊಲೀಸರಿಂದ ಎಚ್ಚರಿಕೆ ಬರುತ್ತಿದ್ದರೂ, ಅದಕ್ಕೆ ಈ ಮಹಿಳೆಯರು ಜಗ್ಗುತ್ತಿಲ್ಲ, ಬಗ್ಗುತ್ತಿಲ್ಲ ಎನ್ನಲಾಗಿದೆ. ಅಹೌ ದರಾಯೈಯನ್ನು ಆ ಸಂದರ್ಭದಲ್ಲಿ ಬಂಧಿಸಲಾಗಿತ್ತು. ಇದರ ಬಗ್ಗೆ ಮಹಿಳೆಯರು ತೀವ್ರ ಸ್ವರೂಪದಲ್ಲಿ ಪ್ರತಿಭಟನೆ ನಡೆಸಿದಾಗ, ಕೆಲವು ದಿನಗಳ ಬಳಿಕ ಆಕೆಯನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಕೊನೆಗೆ ಏನಾಯ್ತು ಎನ್ನುವುದು ಇನ್ನೂ ಅಸ್ಪಷ್ಟ.



Source link

Leave a Reply

Your email address will not be published. Required fields are marked *