ಕೊಲ್ಲಿ ಸಂಘರ್ಷ : ಡ್ರೈಫ್ರೂಟ್ಸ್ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ, ಯುದ್ಧ ಮುಂದುವರೆದರೆ ಆಮದು ಸ್ಥಗಿತ ಆತಂಕ! | Middle East Conflict Could Raise Dry Fruits Prices In India Traders Warn Gdp

ಕೊಲ್ಲಿ ಸಂಘರ್ಷ : ಡ್ರೈಫ್ರೂಟ್ಸ್ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ, ಯುದ್ಧ ಮುಂದುವರೆದರೆ ಆಮದು ಸ್ಥಗಿತ ಆತಂಕ! | Middle East Conflict Could Raise Dry Fruits Prices In India Traders Warn Gdp



ಕೊಲ್ಲಿ ಸಂಘರ್ಷ : ಡ್ರೈಫ್ರೂಟ್ಸ್ ಬೆಲೆ ಕೂಡ ಹೆಚ್ಚಾಗುವ ಸಾಧ್ಯತೆ, ಯುದ್ಧ ಮುಂದುವರೆದರೆ ಆಮದು ಸ್ಥಗಿತ ಆತಂಕ! | Middle East Conflict Could Raise Dry Fruits Prices In India Traders Warn Gdp

 ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಭಾರತದಲ್ಲಿ ಡ್ರೈಫ್ರೂಟ್ಸ್ ಬೆಲೆ ಏರಿಕೆಯಾಗುವ ಭೀತಿ ಎದುರಾಗಿದೆ.  ರಂಜಾನ್   ಹಿನ್ನೆಲೆಯಲ್ಲಿ ಸಾಕಷ್ಟು ದಾಸ್ತಾನು ಇರುವುದರಿಂದ ದರ ಸ್ಥಿರವಾಗಿದ್ದರೂ, ಯುದ್ಧ ಮುಂದುವರಿದರೆ ಮುಂದಿನ ದಿನಗಳಲ್ಲಿ ಆಮದು ಸ್ಥಗಿತಗೊಂಡು ಬೆಲೆಗಳು ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ.

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ವ್ಯಾಪಾರ ಕ್ಷೇತ್ರದಲ್ಲಿ ಅನಿಶ್ಚಿತತೆ ಉಂಟಾಗಿದೆ. ಈ ಪರಿಸ್ಥಿತಿ ಮುಂದುವರೆದರೆ ಅದರ ಪರಿಣಾಮ ಭಾರತದಲ್ಲಿಯೂ ಕೆಲವು ಆಮದು ವಸ್ತುಗಳ ಬೆಲೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ವಿಶೇಷವಾಗಿ ಮಧ್ಯಪ್ರಾಚ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಆಗುವ ಡ್ರೈಫ್ರೂಟ್ಸ್ ಬೆಲೆ ಏರಿಕೆಯಾಗುವ ಭೀತಿ ವ್ಯಕ್ತವಾಗುತ್ತಿದೆ.

ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಮುಂದಿನ ದಿನಗಳಲ್ಲಿ ಡ್ರೈಫ್ರೂಟ್ಸ್ ದುಬಾರಿಯಾಗುವ ಆತಂಕ ಹೆಚ್ಚಾಗಿದೆ. ಆದರೆ ವ್ಯಾಪಾರಿಗಳ ಮಾಹಿತಿಯ ಪ್ರಕಾರ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಯಾವುದೇ ದರ ಏರಿಕೆ ಕಂಡುಬಂದಿಲ್ಲ. ಯುದ್ಧದ ಪರಿಸ್ಥಿತಿ ಮುಂದುವರಿದರೆ ಮಾತ್ರ ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ.

ರಂಜಾನ್ ಹಿನ್ನೆಲೆ , ಸಾಕಷ್ಟು ಸ್ಟಾಕ್

ಪ್ರಸ್ತುತ ರಂಜಾನ್ ಹಬ್ಬದ ಹಿನ್ನೆಲೆ ವ್ಯಾಪಾರಿಗಳು ಈಗಾಗಲೇ ಎರಡು ತಿಂಗಳ ಹಿಂದೆಯೇ ದೊಡ್ಡ ಪ್ರಮಾಣದಲ್ಲಿ ಡ್ರೈಫ್ರೂಟ್ಸ್ ಆಮದು ಮಾಡಿಕೊಂಡಿದ್ದಾರೆ. ಇರಾನ್ ಸೇರಿದಂತೆ ಮಧ್ಯಪ್ರಾಚ್ಯ ದೇಶಗಳಿಂದ ಅಂಜೂರ, ಪಿಸ್ತಾ, ಖರ್ಜೂರ, ಬಾದಾಮ್ ಹಾಗೂ ವಿವಿಧ ಮಸಾಲ ಪದಾರ್ಥಗಳು ಭಾರತಕ್ಕೆ ತರಲಾಗಿದೆ. ಈ ಕಾರಣದಿಂದಾಗಿ ಬೆಂಗಳೂರಿನ ಮಾರುಕಟ್ಟೆಯಲ್ಲಿ ಈಗಾಗಲೇ ಸಾಕಷ್ಟು ಸ್ಟಾಕ್ ಲಭ್ಯವಿದೆ. ವ್ಯಾಪಾರಿಗಳ ಪ್ರಕಾರ, ಯುದ್ಧದ ಕಾರಣದಿಂದ ಇತ್ತೀಚೆಗೆ ಕೆಲವು ದೇಶಗಳಿಂದ ಡ್ರೈಫ್ರೂಟ್ಸ್ ರಫ್ತು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ವರದಿಗಳು ಬಂದಿದ್ದರೂ, ಈಗಾಗಲೇ ಭಾರತದಲ್ಲಿ ಸಾಕಷ್ಟು ಸಂಗ್ರಹವಿರುವುದರಿಂದ ತಕ್ಷಣದ ದರ ಏರಿಕೆಯ ಆತಂಕ ಇಲ್ಲ ಎಂದು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ದರ ಏರಿಕೆ ಸಾಧ್ಯತೆ

ಆದರೆ ಯುದ್ಧದ ಪರಿಸ್ಥಿತಿ ದೀರ್ಘಕಾಲ ಮುಂದುವರಿದರೆ ಅಥವಾ ಮಧ್ಯಪ್ರಾಚ್ಯದಿಂದ ಆಮದು ಸಂಪೂರ್ಣವಾಗಿ ಕಡಿಮೆಯಾದರೆ, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿ ಡ್ರೈಫ್ರೂಟ್ಸ್ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಕೆಲ ವ್ಯಾಪಾರಿಗಳ ಅಭಿಪ್ರಾಯದಂತೆ, ಪರಿಸ್ಥಿತಿ ತೀವ್ರವಾದರೆ ದರಗಳು ನಾಲ್ಕು ಅಥವಾ ಐದು ಪಟ್ಟು ಏರಿದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.

ಹೋಟೆಲ್ ಮತ್ತು ಐಸ್ ಕ್ರೀಂ ಉದ್ಯಮಕ್ಕೂ ಪರಿಣಾಮ

ಡ್ರೈಫ್ರೂಟ್ಸ್ ಬೆಲೆ ಏರಿಕೆ ನಡೆದರೆ ಅದರ ಪರಿಣಾಮ ಕೇವಲ ಗ್ರಾಹಕರಿಗಷ್ಟೇ ಅಲ್ಲ, ಐಸ್ ಕ್ರೀಂ ಪಾರ್ಲರ್‌ಗಳು, ಬೇಕರಿಗಳು, ಹೋಟೆಲ್‌ಗಳು ಮತ್ತು ಸಿಹಿತಿಂಡಿ ಉದ್ಯಮಗಳಿಗೂ ತಟ್ಟಲಿದೆ. ಏಕೆಂದರೆ ಈ ಉದ್ಯಮಗಳಲ್ಲಿ ಡ್ರೈಫ್ರೂಟ್ಸ್ ಪ್ರಮುಖ ಪದಾರ್ಥಗಳಾಗಿ ಬಳಸಲಾಗುತ್ತದೆ.

ಸದ್ಯದ ಮಾರುಕಟ್ಟೆ ದರಗಳು

ಇರಾನ್ ಸೇರಿದಂತೆ ಮಧ್ಯಪ್ರಾಚ್ಯದಿಂದ ಆಮದು ಆಗುವ ಕೆಲವು ಡ್ರೈಫ್ರೂಟ್ಸ್‌ಗಳ ಪ್ರಸ್ತುತ ಬೆಲೆಗಳು ಹೀಗಿವೆ:

ಖರ್ಜೂರ – ಸುಮಾರು ₹300 ಪ್ರತಿ ಕೆಜಿ

ಬಾದಾಮ್ – ₹920 ಪ್ರತಿ ಕೆಜಿ

ಕೇಸರಿ – 1 ಗ್ರಾಂ ₹450

ಅಂಜೂರ – ₹1200 ರಿಂದ ₹1800 ಪ್ರತಿ ಕೆಜಿ

ಪಿಸ್ತಾ – ₹1800 ಪ್ರತಿ ಕೆಜಿ

ಪ್ಲೇನ್ ಪಿಸ್ತಾ – ₹2400 ಪ್ರತಿ ಕೆಜಿ

ಒಣ ದ್ರಾಕ್ಷಿ – ₹880 ಪ್ರತಿ ಕೆಜಿ

ವಾಲ್‌ನಟ್ – ₹2000 ಪ್ರತಿ ಕೆಜಿ

ವ್ಯಾಪಾರಿಗಳ ಅಭಿಪ್ರಾಯ

ವ್ಯಾಪಾರಿಗಳ ಪ್ರಕಾರ, ರಂಜಾನ್ ಹಬ್ಬದ ಹಿನ್ನೆಲೆ ಈಗಾಗಲೇ ಸಾಕಷ್ಟು ಸ್ಟಾಕ್ ಇರುವುದರಿಂದ ಪ್ರಸ್ತುತ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿದೆ. ಆದರೆ ಯುದ್ಧದ ಪರಿಸ್ಥಿತಿ ಮುಂದುವರಿದು ಆಮದು ಕಡಿಮೆಯಾದರೆ ಮತ್ತು ಬೇಡಿಕೆ ಹೆಚ್ಚಾದರೆ, ಮುಂದಿನ ತಿಂಗಳುಗಳಲ್ಲಿ ಡ್ರೈಫ್ರೂಟ್ಸ್ ಬೆಲೆ ಏರಿಕೆ ಅನಿವಾರ್ಯವಾಗಬಹುದು. ಒಟ್ಟಾರೆ, ಸದ್ಯಕ್ಕೆ ಗ್ರಾಹಕರಿಗೆ ದೊಡ್ಡ ಮಟ್ಟದ ಬೆಲೆ ಏರಿಕೆಯ ಆತಂಕ ಇಲ್ಲದಿದ್ದರೂ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಮಾರುಕಟ್ಟೆಯ ದರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *