ಸದ್ದಿಲ್ಲದೇ ಮದ್ವೆ ಮಾಡಿಕೊಂಡ Shrirasthu Shubhamasthu ಸಮರ್ಥ್​? ನಟ ದರ್ಶಿತ್​ ಗೌಡ ಫೋಟೋ ಇಲ್ಲಿವೆ

ಸದ್ದಿಲ್ಲದೇ ಮದ್ವೆ ಮಾಡಿಕೊಂಡ Shrirasthu Shubhamasthu ಸಮರ್ಥ್​? ನಟ ದರ್ಶಿತ್​ ಗೌಡ ಫೋಟೋ ಇಲ್ಲಿವೆ

ಸದ್ದಿಲ್ಲದೇ ಮದ್ವೆ ಮಾಡಿಕೊಂಡ Shrirasthu Shubhamasthu ಸಮರ್ಥ್​? ನಟ ದರ್ಶಿತ್​ ಗೌಡ ಫೋಟೋ ಇಲ್ಲಿವೆ

’ಶ್ರೀರಸ್ತು ಶುಭಮಸ್ತು’ ಧಾರಾವಾಹಿಯ ಸಮರ್ಥ್ ಪಾತ್ರಧಾರಿ ನಟ ದರ್ಶಿತ್ ಗೌಡ ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ, ಇದು ನಿಜವಾದ ಮದುವೆಯೇ ಅಥವಾ ಕೇವಲ ಶೂಟಿಂಗಿನ ಭಾಗವೇ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.

ಶ್ರೀರಸ್ತು ಶುಭಮಸ್ತು (Srirastu Shubhamastu) ಧಾರಾವಾಹಿಯಲ್ಲಿ ಎಲ್ಲರ ಮನಸ್ಸನ್ನು ಗೆದ್ದು ಕದ್ದವರಲ್ಲಿ ಒಬ್ಬರು ನಟ ದರ್ಶಿತ್​ ಗೌಡ. ದರ್ಶಿತ್​ ಎಂದರೆ ಸೀರಿಯಲ್​ ಪ್ರಿಯರಿಗೂ ತಿಳಿಯಲಿಕ್ಕಿಲ್ಲ. ಅವರೇ ತುಳಸಿಯ ಪುತ್ರನಾದ ಸಮರ್ಥ್​. ದರ್ಶಿತ್​ ಗೌಡ ಅವರ ಅಮೋಘ ಅಭಿನಯಕ್ಕೆ ಇದಾಗಲೇ ಅಭಿಮಾನಿಗಳು ಮನಸೋತಿದ್ದಾರೆ. ಅಮ್ಮ ತುಳಸಿ ದೊಡ್ಡವರ ಮನೆಯ ಸೊಸೆಯಾಗಿ ಹೋದಾಗಿನಿಂದಲೂ ಮಗ ಸಮರ್ಥ್​ನಲ್ಲಿ ಆಗುತ್ತಿರುವ ತಳಮಳ, ಅಮ್ಮನ ಮೇಲಿನ ಪ್ರೀತಿ, ಇನ್ನೊಂದೆಡೆ ದ್ವೇಷ ಎಲ್ಲವನ್ನೂ ಕಾಲಕ್ಕೆ ತಕ್ಕಂತೆ ಅಭಿನಯದ ಮೂಲಕ ಅಮೋಘವಾಗಿ ತೋರಿಸುವ ದರ್ಶಿತ್​ ಅವರ ಅಭಿನಯಕ್ಕೆ ಮನಸೋತವರೇ ಎಲ್ಲ.

ಇಂತಿಪ್ಪ ದರ್ಶಿತ್​ ಗೌಡ (Darshit Gowda) ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದಾಗಿ ಸೋಷಿಯಲ್​ ಮೀಡಿಯಾದಲ್ಲಿ ಫೋಟೋಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಖುದ್ದು ನಟ ಯಾವುದೇ ಮಾಹಿತಿ ನೀಡಲಿಲ್ಲ. ವೈರಲ್ ಆಗಿರೋ ಫೋಟೋಗಳಲ್ಲಿ ಶ್ರೀರಸ್ತು ಶುಭಮಸ್ತುವಿನ ಕೆಲವು ನಟರನ್ನು ಕೂಡ ನೋಡಬಹುದಾಗಿದೆ.

ನೂತನ ವಧು-ವರರನ್ನು ಮದುವೆಯ ಮಂಟಪದಲ್ಲಿ ನೋಡಬಹುದಾಗಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಇವರು ನಿಜವಾಗಿಯೂ ಮದುವೆಯಾಗಿದ್ದಾರಾ ಅಥವಾ ಯಾವುದಾದರೂ ಸೀರಿಯಲ್​, ಸಿನಿಮಾ ಶೂಟಿಂಗಾ ಎನ್ನುವ ಅನುಮಾನ ಕೂಡ ಇದೇ ವೇಳೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.

ಇನ್ನು ನಟನ ನಟನೆಯ ಕುರಿತು ಹೇಳುವುದಾದರೆ, ಕಣ್ಣಲ್ಲೇ ಮಾತನಾಡೋ, ಯಾರಿಗೂ ಗೊತ್ತಾಗದಂತೆ ಪ್ರೀತಿ ತೋರೋ, ಎದುರಲ್ಲಿ ಎಷ್ಟು ಕಿತ್ತಾಡಿಕೊಂಡರೂ, ತಮ್ಮ ಅಭಿ ಕಷ್ಟದಲ್ಲಿದ್ದಾಗ ಆತನಿಗೆ ನೆರವಾಗುವ ಸಮರ್ಥ್ ಪಾತ್ರ ಜನರಿಗೆ ಎಷ್ಟೊಂದು ಇಷ್ಟ ಆಗಿದೆ ಅಂದ್ರೆ, ಸೀರಿಯಲ್ ನಿಜವಾದ ಹೀರೋ ಸಮರ್ಥ್ ಅಂತಾನೆ ಹೇಳ್ತಿದ್ದಾರೆ ಜನ. ಅಷ್ಟರಮಟ್ಟಿಗೆ ಸಮರ್ಥ್ ಪಾತ್ರವನ್ನ ಜನ ಮೆಚ್ಚಿಕೊಂಡಿದ್ದಾರೆ.

ಸಮರ್ಥ್ ಪಾತ್ರಧಾರಿ ದರ್ಶಿತ್ ಗೌಡ, ಈಗಾಗಲೆ ಕನ್ನಡ ತೆಲುಗಿನ ಅಮ್ಮ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ದೊರೆಸಾನಿ ಧಾರಾವಾಹಿಯಲ್ಲಿ ನಾಯಕಿ ದೀಪಿಕಾ ಸಹೋದರನಾಗಿ ದರ್ಶಿತ್ ನಟಿಸಿದ್ದರು. ಅಷ್ಟೇ ಅಲ್ಲ ಗುಳಿ ಕೆನ್ನೆ ಚೆಲುವ ದರ್ಶಿತ್ ಗೌಡ, ಕಣ್ಸೆಳೆವ ಮಾಯಾವಿ ಎನ್ನುವ ಆಲ್ಬಂ ಹಾಡಿನಲ್ಲಿ ಕೂಡ ನಟಿಸಿದ್ದರು. ದರ್ಶಿತ್ ನಗು, ನಟನೆಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ.

ಸೀರಿಯಲ್ ನಲ್ಲಿ ಸಾಫ್ಟ್ ಆಗಿರೋ ದರ್ಶಿತ್ ಮನೆಯಲ್ಲಿ ತುಂಬಾನೆ ರಗಡ್ ಅಂತೆ, ಆದ್ರೆ ಹೊರಗಡೆ ಸೈಲೆಂಟ್ ಆಗಿರೋ ಹುಡುಗ. ದೊರೆಸಾನಿ ಧಾರಾವಾಹಿಗೆ ಆಡಿಶನ್ ಕೊಟ್ಟು ಸೀರಿಯಲ್ ಆಯ್ಕೆಯಾಗಿದ್ದರು, ಕೊರೋನಾ ಟೈಮಲ್ಲಿ ತೆಲುಗಿನ ಅಮ್ಮ ಸೀರಿಯಲ್ (telugu serial) ಮಾಡ್ತಿದ್ರಿಂದ ಕಷ್ಟದ ಸಮಯದಲ್ಲೂ ಕಷ್ಟ ಅಂತ ಅನ್ಸಿಲ್ವಂತೆ ಈ ನಟನಿಗೆ.

Source link

Leave a Reply

Your email address will not be published. Required fields are marked *