ಪುಟ್ಟ ಮಕ್ಕಳೇ (ಚಿಕ್ಕ ಮಕ್ಕಳು) ಹಾಗೆ, ತುಂಟಾಟ ಮಾಡುವುದರಲ್ಲಿ ಎತ್ತಿದ ಕೈ. ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಳ್ಳುವುದೇ ಹೆಚ್ಚು. ಈ ಪುಟ್ಟ ಹುಡುಗಿಯದ್ದು (ಚಿಕ್ಕ ಹುಡುಗಿ) ಅದೇ ಕಥೆ. ಹುಂಜದ ಮುಂದೆ ಕುಣಿದಾಡಿದ್ದರಿಂದ ಪುಟ್ಟ ಹುಡುಗಿಯನ್ನು ಅಟ್ಟಾಡಿಸಿಕೊಂಡು ಹೋದ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ನೆಟ್ಟಿಗರ ಮೊಗದಲ್ಲಿ ನಗು ತರಿಸಿದೆ.
trollhaiklu_.ka10 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಈ ವಿಡಿಯೋದಲ್ಲಿ ಶಾಲಾ ಸಮವಸ್ತ್ರ ಧರಿಸಿರುವ ಪುಟ್ಟ ಹುಡುಗಿ ಹುಂಜ ಮುಂದೆ ಡ್ಯಾನ್ಸ್ ಮಾಡುತ್ತಿದ್ದಾರೆ. ನೋಡ ನೋಡುತ್ತಿದ್ದಂತೆ ಈ ಪುಟ್ಟ ಹುಡುಗಿಯನ್ನು ಅಟ್ಟಾಡಿಸಿಕೊಂಡು ಹೋಗಿದ್ದು, ಆಕೆ ಒಂದೇ ಸಮನೆ ಓಡುತ್ತಿರುವುದನ್ನು ಕಾಣುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ
ಇದನ್ನೂ ಓದಿ: ಅಂಗನವಾಡಿಗೆ ಬಿಡೋಕೆ ಬಂದ ಅಮ್ಮನ ಬಳಿ ಮುದ್ದಾಗಿ ಮಾತನಾಡಿ ಕಳಿಸಿಕೊಟ್ಟ ಕಂದಮ್ಮ
ಈ ವಿಡಿಯೋ ಅಧಿಕ ವೀಕ್ಷಣೆಗೆ ಹೋಗಿದ್ದು, ಒಬ್ಬ ಬಳಕೆದಾರ ಹೋಗಿ ಗಂಡು ಕೋಳಿ ಕೆಣಕಿದ್ದೀಯಾ ಎಂದು ಹೇಳಿದರೆ, ಮತ್ತೊಬ್ಬರು, ಸ್ಕೂಲ್ ಗೆ ಹೋಗೋದು ಬಿಟ್ಟು ಇದೆಲ್ಲಾ ಬೇಕಿತ್ತಾ ಎಂದು ಕಾಮೆಂಟ್ ನಲ್ಲಿ ಕೇಳಿದ್ದಾರೆ. ಇತರರು, ಸುಮ್ನೆ ಇರಲಾರದೇ ಇರುವೆ ಬಿಟ್ಕೊಳ್ಳೋದು ಅಂದ್ರೆ ಇದೆ ನೋಡಿ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ