Gastrointestinal Cancer ಈ ಲಕ್ಷಣವಿದ್ದರೆ ಕಡೆಗಣಿಸಬೇಡಿ ಅದು ಗ್ಯಾಸ್ಟ್ರೋ ಕ್ಯಾನ್ಸರ್ ಆಗಿರಬಹುದು

Gastrointestinal Cancer ಈ ಲಕ್ಷಣವಿದ್ದರೆ ಕಡೆಗಣಿಸಬೇಡಿ ಅದು ಗ್ಯಾಸ್ಟ್ರೋ ಕ್ಯಾನ್ಸರ್ ಆಗಿರಬಹುದು

Gastrointestinal Cancer ಈ ಲಕ್ಷಣವಿದ್ದರೆ ಕಡೆಗಣಿಸಬೇಡಿ ಅದು ಗ್ಯಾಸ್ಟ್ರೋ ಕ್ಯಾನ್ಸರ್ ಆಗಿರಬಹುದು

Gastrointestinal Cancer ಈ ಲಕ್ಷಣವಿದ್ದರೆ ಕಡೆಗಣಿಸಬೇಡಿ ಅದು ಗ್ಯಾಸ್ಟ್ರೋ ಕ್ಯಾನ್ಸರ್ ಆಗಿರಬಹುದು, ಹೊಟ್ಟೆ, ಸಣ್ಣ ಕರುಳು, ದೊಡ್ಡ ಕರುಳು, ಲಿವರ್, ಮತ್ತು ಪ್ಯಾಂಕ್ರಿಯಾಸ್‌ನಂತಹ ಜೀರ್ಣಾಂಗ ವ್ಯವಸ್ಥೆಯ ಭಾಗಗಳಿಗೆ ಬರುವ ಕ್ಯಾನ್ಸರ್‌
ಗ್ಯಾಸ್ಟ್ರೋಇಂಟೆಸ್ಟೈನಲ್ (GI) ಕ್ಯಾನ್ಸರ್ ಅಂದರೆ ಹೊಟ್ಟೆ, ಸಣ್ಣ ಕರುಳು, ದೊಡ್ಡ ಕರುಳು, ಲಿವರ್ ಮತ್ತು ಪ್ಯಾಂಕ್ರಿಯಾಸ್‌ನಂತಹ ಜೀರ್ಣಾಂಗ ವ್ಯವಸ್ಥೆಯ ಭಾಗಗಳಿಗೆ ಬರುವ ಕ್ಯಾನ್ಸರ್‌ಗಳ ಒಂದು ಗುಂಪು. ಇದನ್ನು ಜಠರಗರುಳಿನ ಕ್ಯಾನ್ಸರ್ ಎಂದೂ ಕರೆಯುತ್ತಾರೆ.
ಗ್ಯಾಸ್ಟ್ರೋಇಂಟೆಸ್ಟೈನಲ್ ಕ್ಯಾನ್ಸರ್‌ನ ಕೆಲವು ಪ್ರಮುಖ ಲಕ್ಷಣಗಳು ಇಲ್ಲಿವೆ. ಇವುಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಹೊಟ್ಟೆಯ ಮೇಲ್ಭಾಗದಲ್ಲಿ ನಿರಂತರವಾಗಿ ನೋವು ಕಾಣಿಸಿಕೊಂಡರೆ, ಅದು ಗ್ಯಾಸ್ಟ್ರೋಇಂಟೆಸ್ಟೈನಲ್ ಕ್ಯಾನ್ಸರ್‌ನ ಒಂದು ಲಕ್ಷಣವಾಗಿರಬಹುದು. ಇದನ್ನು ನಿರ್ಲಕ್ಷಿಸಬೇಡಿ.

ವಾಂತಿಯಲ್ಲಿ ರಕ್ತ ಕಾಣಿಸಿಕೊಳ್ಳುವುದು, ಮಲದಲ್ಲಿ ರಕ್ತ ಹೋಗುವುದು ಅಥವಾ ಮಲ ಕಪ್ಪು ಬಣ್ಣದಲ್ಲಿರುವುದು ಕೂಡ ಈ ಕಾಯಿಲೆಯ ಗಂಭೀರ ಲಕ್ಷಣವಾಗಿರಬಹುದು. ತಕ್ಷಣವೇ ಸೂಕ್ತ ವೈದ್ಯರ ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಿ

ಊಟ ಮಾಡಿದ ನಂತರ ಅಸ್ವಸ್ಥತೆ ಉಂಟಾಗುವುದು ಅಥವಾ ಸ್ವಲ್ಪ ತಿಂದರೂ ಹೊಟ್ಟೆ ತುಂಬಿದಂತೆ ಅನಿಸುವುದನ್ನು ಸಹ ನೀವು ಕಡೆಗಣಿಸಬಾರದು. ಇವೆಲ್ಲಾ ಗ್ಯಾಸ್ಟ್ರೋ ಸಮಸ್ಯೆಗಳ ಪ್ರಮುಖ ಲಕ್ಷಣ. ಇದರ ಹಿಂದೆ ಮಾರಕ ಖಾಯಿಲಿ ಇರುವ ಸಾಧ್ಯತೆ ಇದೆ.
ದೀರ್ಘಕಾಲದ ಎದೆ ಉರಿ, ಅಜೀರ್ಣ ಸಮಸ್ಯೆಗಳು, ಅತಿಸಾರ ಅಥವಾ ಮಲಬದ್ಧತೆಯಂತಹ ಲಕ್ಷಣಗಳು ಕೂಡ ಇದರ ಸೂಚನೆಯಾಗಿರಬಹುದು.
ಯಾವುದೇ ಸ್ಪಷ್ಟ ಕಾರಣವಿಲ್ಲದೆ ದೇಹದ ತೂಕ ಇದ್ದಕ್ಕಿದ್ದಂತೆ ಕಡಿಮೆಯಾಗುವುದು ಮತ್ತು ಅತಿಯಾದ ಸುಸ್ತು ಕೂಡ ಇದರ ಪ್ರಮುಖ ಲಕ್ಷಣವಾಗಿರುವ ಸಾಧ್ಯತೆ ಇದೆ..
ಮೇಲೆ ತಿಳಿಸಿದ ಯಾವುದೇ ಲಕ್ಷಣಗಳು ಕಂಡುಬಂದರೆ, ನೀವೇ ಸ್ವಯಂ-ರೋಗನಿರ್ಣಯ ಮಾಡಿಕೊಳ್ಳಬೇಡಿ. ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಬಹಳ ಮುಖ್ಯ. ಅವರ ಪರೀಕ್ಷೆಯ ನಂತರವೇ ರೋಗವನ್ನು ಖಚಿತಪಡಿಸಿಕೊಳ್ಳಿ.

Source link

Leave a Reply

Your email address will not be published. Required fields are marked *