ಬೆಂಗಳೂರು, ಮಾರ್ಚ್ 05): ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಒಳ ಮೀಸಲಾತಿ (ಆಂತರಿಕ ಮೀಸಲಾತಿ) ಗೊಂದಲ ಜೋರಾಗಿದ್ದರೆ, ಕಾಂಗ್ರೆಸ್ ನಾಯಕರ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಈ ಸಂಬಂಧ ಇಂದು (ಮಾರ್ಚ್ 05) ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪೂಟ ಸಭೆಯಲ್ಲೂ ಸಹ ಒಳ ಮೀಸಲಾತಿ ವಿಚಾರವಾಗಿ ಭಾರೀ ಚರ್ಚೆಯಾಗಿದೆ. ಅಥವಾ, ಸಂಪುಟದಲ್ಲಿ ಸಹಮತ ಮೂಡದ ಕಾರಣ ಚರ್ಚೆ ಅಪೂರ್ಣಗೊಂಡಿದ್ದು, ಮತ್ತೆ ಸಂಪುಟ ಸಭೆ ಸೇರಿ ತೀರ್ಮಾನಿಸಲು ನಿರ್ಧರಿಸಲಾಗಿದೆ.