Headlines

CCB drug raid Bengaluru: ಅಕ್ರಮ ಡ್ರಗ್ಸ್‌ ವಾಸನೆ ತಡೆಗೆ ನಾಯಿಗಳ ಮಲಮೂತ್ರ, ಸಿಸಿಬಿ ತನಿಖೆ ವೇಳೆ ರಹಸ್ಯ ಬಯಲು! | Bengaluru Using Dog Feces To Mask Drug Odor Shocking Revelation In Ccb Narcotics Probe

CCB drug raid Bengaluru: ಅಕ್ರಮ ಡ್ರಗ್ಸ್‌ ವಾಸನೆ ತಡೆಗೆ ನಾಯಿಗಳ ಮಲಮೂತ್ರ, ಸಿಸಿಬಿ ತನಿಖೆ ವೇಳೆ ರಹಸ್ಯ ಬಯಲು! | Bengaluru Using Dog Feces To Mask Drug Odor Shocking Revelation In Ccb Narcotics Probe



CCB drug raid Bengaluru: ಅಕ್ರಮ ಡ್ರಗ್ಸ್‌ ವಾಸನೆ ತಡೆಗೆ ನಾಯಿಗಳ ಮಲಮೂತ್ರ, ಸಿಸಿಬಿ ತನಿಖೆ ವೇಳೆ ರಹಸ್ಯ ಬಯಲು! | Bengaluru Using Dog Feces To Mask Drug Odor Shocking Revelation In Ccb Narcotics Probe

ಬೆಂಗಳೂರಿನಲ್ಲಿ ಸಿಸಿಬಿಯಿಂದ ಬಂಧಿತರಾದ ಪ್ರೇಮಿಗಳು, ತಮ್ಮ ಫ್ಲ್ಯಾಟ್‌ನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಾಸನೆಯನ್ನು ಮರೆಮಾಚಲು ತಮ್ಮ ಸಾಕು ನಾಯಿಗಳ ಮಲ-ಮೂತ್ರವನ್ನು ಬಳಸುತ್ತಿದ್ದರು. ಈ ಆಘಾತಕಾರಿ ವಿಧಾನ ಸಿಸಿಬಿ ತನಿಖೆ ವೇಳೆ ಬಯಲು

ಬೆಂಗಳೂರು (ಮಾ.6) ತಮ್ಮ ಫ್ಲ್ಯಾಟ್‌ನಲ್ಲಿ ದಾಸ್ತಾನು ಮಾಡಿದ್ದ ಡ್ರಗ್ಸ್ ವಾಸನೆ ಹೊರಗೆ ಬಾರದಂತೆ ಸಾಕು ನಾಯಿಗಳ ಮಲ-ಮೂತ್ರ ಬಳಸಿ ಚಾಲಾಕಿ ಪ್ರೇಮಿಗಳು ತಡೆಗಟ್ಟಿದ್ದರು ಎಂಬ ಕುತೂಹಲಕಾರಿ ಸಂಗತಿ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ವಿದೇಶದಿಂದ ಅಕ್ರಮವಾಗಿ ಡ್ರಗ್ಸ್ ತಂದು ನಗರದಲ್ಲಿ ಮಾರುತ್ತಿದ್ದ ಕೇರಳ ಮೂಲದ ಅಶ್ವಿನಿ ಹಾಗೂ ಮುಬೀನಾಳನ್ನು ಸಿಸಿಬಿ ಬಂಧಿಸಿತ್ತು. ಬಳಿಕ ಬಾಗಲೂರು ಸಮೀಪ ಈ ಪ್ರೇಮಿಗಳು ವಾಸವಾಗಿದ್ದ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿದ್ದ ಫ್ಲ್ಯಾಟ್‌ ಮೇಲೆ ದಾಳಿ ನಡೆಸಿ ಸಿಸಿಬಿ ಪರಿಶೀಲಿಸಿದಾಗ ಡ್ರಗ್ಸ್ ವಾಸನೆ ಹರಡುವಿಕೆ ನಿಯಂತ್ರಣದ ಯೋಜನೆ ಬಯಲಾಗಿದೆ.

ಆರೋಪಿಗಳ ಬಳಿ 8,335 ಎಲ್‌ಎಸ್‌ಡಿ ಸ್ಟ್ರಿಪ್‌ಗಳು, 5 ಕೆಜಿ ಹೈಡ್ರೋ ಗಾಂಜಾ, 534 ಗ್ರಾಂ ಚರಸ್‌ ಸೇರಿದಂತೆ 18 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿಯಾಗಿತ್ತು. ಈ ಡ್ರಗ್ಸ್ ಪೈಕಿ ಎಲ್ಎಸ್‌ಡಿ ಸ್ಟ್ರಿಪ್‌ಗಳು ವಾಸನೆ ಬರುವುದಿಲ್ಲ. ಆದರೆ ಹೈಡ್ರೋ ಗಾಂಜಾ ಹಾಗೂ ಚರಸ್ ವಾಸನೆ ಬರುತ್ತದೆ. ಈ ವಾಸನೆ ತಡೆಗೆ ಸಾಕು ನಾಯಿಗಳನ್ನು ಪ್ರೇಮಿಗಳು ಬಳಸಿದ್ದರು.

ಥೈಲ್ಯಾಂಡ್‌ ದೇಶದಿಂದ ಕಾನೂನುಬಾಹಿರವಾಗಿ ಕೆಜಿಗಟ್ಟಲೇ ಹೈಡ್ರೋ ಗಾಂಜಾವನ್ನು ಅಶ್ವಿನಿ ಹಾಗೂ ಮುಬೀನಾ ಸಾಗಾಣಿಕೆ ಮಾಡಿದ್ದರು. ಬಳಿಕ ಈ ಗಾಂಜಾವನ್ನು ತಮ್ಮ ಫ್ಲ್ಯಾಟ್‌ನಲ್ಲಿ ಆರೋಪಿಗಳು ದಾಸ್ತಾನು ಮಾಡಿದ್ದರು. ಇದರ ವಾಸನೆ ನೆರೆಹೊರೆಯವರಿಗೆ ಗೊತ್ತಾಗದಂತೆ ಆರೋಪಿಗಳು ಮುಂಜಾಗ್ರತೆ ವಹಿಸಿದ್ದರು.

5 ನಾಯಿಗಳನ್ನು ಸಾಕಿದ್ದರು!

ಫ್ಲ್ಯಾಟ್‌ನಲ್ಲಿ ನಾಲ್ಕು ಮರಿಗಳು ಹಾಗೂ ಒಂದು ತಾಯಿ ಸೇರಿ ಐದು ನಾಯಿಗಳನ್ನು ಅಶ್ವಿನಿ-ಮುಬೀನಾ ಸಾಕಿದ್ದರು. ಇವುಗಳನ್ನು ಮಲ-ಮೂತ್ರ ವಿಸರ್ಜನೆಗೆ ಹೊರಗೆ ಕರೆದೊಯ್ದದೆ ಫ್ಲ್ಯಾಟ್‌ನಲ್ಲಿ ಮಾಡಿಸುತ್ತಿದ್ದರು. ಆಗ ಫ್ಲ್ಯಾಟ್‌ನಲ್ಲಿ ಗಬ್ಬು ನಾತ ಬರುತ್ತಿತ್ತು. ಅಕ್ಕಪಕ್ಕದ ಮನೆಯವರು ಈ ಪ್ರೇಮಿಗಳು ಸ್ವಚ್ಛವಾಗಿಲ್ಲ ಎಂದು ಶಪಿಸುತ್ತಿದ್ದರು. ತಮ್ಮ ನಾಯಿಗಳನ್ನು ಹೊರಗೆ ಕರೆದೊಯ್ದು ಮಲ-ಮೂತ್ರ ಮಾಡಿಸುವಂತೆ ಆರೋಪಿಗಳಿಗೆ ನೆರೆಹೊರೆಯವರು ಹೇಳುತ್ತಿದ್ದರು. ನಾಯಿಗಳ ಮಲ-ಮೂತ್ರ ವಾಸನೆಯಲ್ಲಿ ಗಾಂಜಾ ವಾಸನೆ ಲೀನವಾಗಿತ್ತು. ಅದರ ಘಾಟು ಯಾರ ಅರಿವಿಗೂ ಬಂದಿಲ್ಲ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಪಾಸಣೆಗೆ ಹೋದಾಗ ದುರ್ನಾತ!

ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ ಬಳಿಕ ಆರೋಪಿಗಳ ಫ್ಲ್ಯಾಟ್‌ ಮೇಲೆ ದಾಳಿ ನಡೆಸಿದೆವು. ಆಗ ಫ್ಲ್ಯಾಟ್‌ ಬಾಗಿಲು ತೆರೆಯುತ್ತಿದ್ದಂತೆ ಮುಖಕ್ಕೆ ಗಬ್ಬು ನಾತ ರಾಚಿತು. ಹೊಟ್ಟೆ ತೊಳಿಸದಂತೆ ಗೊಬ್ಬರದ ಗುಂಡಿಯಂತೆ ಅವರ ಫ್ಲ್ಯಾಟ್‌ ಚಿತ್ರಣ ಇತ್ತು. ಆದರೆ ವಿಚಾರಣೆ ಬಳಿಕ ಗಬ್ಬು ವಾಸನೆ ಹಿಂದಿರುವ ರಹಸ್ಯ ಗೊತ್ತಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *