Headlines

ಭಕ್ತರ ತಲೆ ಮೇಲೆಯೇ ತೆಂಗಿನ ಕಾಯಿ ಒಡೆಯುತ್ತಾರೆ, ಆದ್ರೂ ಗಾಯವಾಗಲ್ಲ ರಕ್ತ ಬರಲ್ಲ!

ಭಕ್ತರ ತಲೆ ಮೇಲೆಯೇ ತೆಂಗಿನ ಕಾಯಿ ಒಡೆಯುತ್ತಾರೆ, ಆದ್ರೂ ಗಾಯವಾಗಲ್ಲ ರಕ್ತ ಬರಲ್ಲ!


ಭಕ್ತರ ತಲೆ ಮೇಲೆಯೇ ತೆಂಗಿನಕಾಯಿ ಒಡೆಯುತ್ತಿದೆಚಿತ್ರದ ಕ್ರೆಡಿಟ್ ಮೂಲ: tv9

ಚಾಮರಾಜನಗರ, ಮಾರ್ಚ್ 6: ದೇವರಿಗೆ ಪೂಜೆ ಸಲ್ಲಿಸುವ ವೇಳೆ ತೆಂಗಿನಕಾಯಿ ಒಡೆಯುವುದು ಸಾಮಾನ್ಯ ಸಂಪ್ರದಾಯ. ಆದರೆ ಚಾಮರಾಜನಗರ (ಚಾಮರಾಜನಗರ) ಜಿಲ್ಲೆಯ ಒಂದು ಗ್ರಾಮದಲ್ಲಿ ನಡೆಯುವ ಹಬ್ಬದಲ್ಲಿ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸುವ ವಿಶಿಷ್ಟ ಪದ್ಧತಿ ಆಚರಣೆಯಲ್ಲಿದೆ. ಈ ಅಪರೂಪದ ಆಚರಣೆ ಗಡಿ ನಾಡು ಚಾಮರಾಜನಗರ ಜಿಲ್ಲೆಯ ಕಮರವಾಡಿ ಗ್ರಾಮದಲ್ಲಿ ನಡೆಯುವ ಗ್ರಾಮದೇವತೆ ಮೂಗುಮಾರಮ್ಮ ಜಾತ್ರೆಯ ವಿಶೇಷವಾಗಿದೆ.

ಚಾಮರಾಜನಗರ ತಾಲೂಕಿನ ಕಮರವಾಡಿ ಗ್ರಾಮದಲ್ಲಿ ಪ್ರತಿ ವರ್ಷ ಮೂಗುಮಾರಮ್ಮ ದೇವಿಯ ಜಾತ್ರೆ ಮೂರು ದಿನಗಳ ಕಾಲ ಭಕ್ತಿಭಾವದಿಂದ ಆಚರಿಸುವುದಿಲ್ಲ. ಈ ಜಾತ್ರೆಯ ಪ್ರಮುಖ ಆಕರ್ಷಣೆ ಎಂದರೆ ಹರಕೆ ಹೊತ್ತ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆದು ದೇವಿಗೆ ಪೂಜೆ ಸಲ್ಲಿಸುವುದು. ಜಾತ್ರೆಯ ಮೊದಲ ದಿನ ದೇವಿಯ ಮೆರವಣಿಗೆ ನಡೆಯುವ ವೇಳೆ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ಮೂಲಕ ವಿಶೇಷ ಪೂಜೆ ನೆರವೇರಿಸಲಾಯಿತು.

ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ವಿಡಿಯೋ

ಜಾತ್ರೆಯ ಎರಡನೇ ದಿನ ದೇವಿಗೆ ವಿವಿಧ ವಿಶೇಷ ಪೂಜೆಗಳು ಮತ್ತು ಧಾರ್ಮಿಕ ವಿಧಿವಿಧಾನಗಳು ನಡೆಯುತ್ತವೆ. ಮೂರನೇ ದಿನ ಗ್ರಾಮಸ್ಥರು ಮನೆ ಮನೆಗೆ ತೆರಳಿ ಅಕ್ಕಿ, ಬೆಲ್ಲ ಸೇರಿದಂತೆ ಪಡಿತರ ಸಂಗ್ರಹಿಸುವ ಸಂಪ್ರದಾಯ ಇದೆ. ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ಪದ್ಧತಿ ಕೂಡ ನಡೆಯುತ್ತಿದೆ. ಗ್ರಾಮದ ಪ್ರತಿ ಮನೆಯ ಮುಂದೆಯೇ ಈ ಪೂಜೆ ನೆರವೇರಿಸಲಾಯಿತು.

ಗಾಯವಾಗಲ್ಲ, ರಕ್ತ ಬರಲ್ಲ!

ಆಶ್ಚರ್ಯಕರ ಸಂಗತಿ ಏನೆಂದರೆ, ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆದರೂ ಅವರಿಗೆ ಯಾವುದೇ ರೀತಿಯ ಗಾಯವಾಗುವುದಿಲ್ಲ, ರಕ್ತವೂ ಹರಿಯುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಇದು ಗ್ರಾಮದೇವತೆ ಮೂಗುಮಾರಮ್ಮನ ಪವಾಡ ಎಂದು ಭಕ್ತರು ನಂಬುತ್ತಾರೆ. ತಲೆಯ ಮೇಲೆ ಹೊಡೆಯುವ ತೆಂಗಿನಕಾಯಿ ಒಂದೇ ಹೊಡೆತದಲ್ಲಿ ಎರಡು ಭಾಗಗಳಾಗಿ ಒಡೆಯುವುದು ಈ ಆಚರಣೆಯ ವಿಶೇಷವಾಗಿದೆ.

ಇದನ್ನೂ ಓದಿ: ಓಡಿಬಂದು ಮುಳ್ಳಿನ ಪೊದೆಗೆ ಹಾರ್ತಾರೆ, ಆದ್ರೂ ಏನಾಗಲ್ಲ! ಚಾಮರಾಜನಗರ ಗೂಳಿಪುರದಲ್ಲಿ ವಿಶೇಷ ಹಬ್ಬ, ವಿಡಿಯೋ ಇಲ್ಲಿದೆ ನೋಡಿ

ತಲೆತಲಾಂತರಗಳಿಂದ ನಡೆದುಬರುತ್ತಿರುವ ಈ ಅಪರೂಪದ ಸಂಪ್ರದಾಯವನ್ನು ಗ್ರಾಮಸ್ಥರು ಭಕ್ತಿಭಾವದಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈ ವಿಶಿಷ್ಟ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದ್ದು, ಜನರ ಗಮನ ಸೆಳೆಯುತ್ತಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *