Headlines

Arjun Tendulkar Wedding: ಸಚಿನ್ ಮಗ ಅರ್ಜುನ್ ತೆಂಡೂಲ್ಕರ್ ಮದುವೆ: ಧೋನಿ, ಯುವರಾಜ್ ಸೇರಿ ಕ್ರಿಕೆಟ್ ತಾರೆಯರ ದಂಡು!

Arjun Tendulkar Wedding: ಸಚಿನ್ ಮಗ ಅರ್ಜುನ್ ತೆಂಡೂಲ್ಕರ್ ಮದುವೆ: ಧೋನಿ, ಯುವರಾಜ್ ಸೇರಿ ಕ್ರಿಕೆಟ್ ತಾರೆಯರ ದಂಡು!



Arjun Tendulkar Wedding: ಸಚಿನ್ ಮಗ ಅರ್ಜುನ್ ತೆಂಡೂಲ್ಕರ್ ಮದುವೆ: ಧೋನಿ, ಯುವರಾಜ್ ಸೇರಿ ಕ್ರಿಕೆಟ್ ತಾರೆಯರ ದಂಡು!
ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಮಾರ್ಚ್ 5ರ ಗುರುವಾರದಂದು ಸಾನಿಯಾ ಚಾಂದೋಕ್ ಅವರೊಂದಿಗೆ ಸಪ್ತಪದಿ ತುಳಿದರು. ಈ ಅದ್ದೂರಿ ವಿವಾಹ ಸಮಾರಂಭದಲ್ಲಿ ಕುಟುಂಬದ ಆಪ್ತರು, ಸ್ನೇಹಿತರು ಹಾಗೂ ಕ್ರೀಡಾ ಕ್ಷೇತ್ರದ ಹಲವಾರು ಗಣ್ಯರು ಭಾಗವಹಿಸಿದ್ದರು.<img>ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್-ಸಾನಿಯಾ ಚಾಂದೋಕ್ ಅವರ ವಿವಾಹದಲ್ಲಿ ಹರ್ಭಜನ್ ಸಿಂಗ್, ಅವರ ಪತ್ನಿ ಗೀತಾ ಬಸ್ರಾ ಹಾಗೂ ಇತರ ಕ್ರಿಕೆಟ್ ಗಣ್ಯರು ಭಾಗವಹಿಸಿದ್ದರು.<img>ಅರ್ಜುನ್-ಸಾನಿಯಾ ಮದುವೆಯಲ್ಲಿ ಕ್ರಿಕೆಟಿಗ ಜಹೀರ್ ಖಾನ್ ಮತ್ತು ಅವರ ಪತ್ನಿ ಸಾಗರಿಕಾ, ಹರ್ಭಜನ್ ಸಿಂಗ್, ಗೀತಾ ಬಸ್ರಾ ಹಾಗೂ ಇತರರು ಪೋಸ್ ನೀಡಿದರು.<img>ಅರ್ಜುನ್-ಸಾನಿಯಾ ಮದುವೆಗೆ ಹಲವು ಕ್ರಿಕೆಟಿಗರು ತಮ್ಮ ಪತ್ನಿಯರೊಂದಿಗೆ ಆಗಮಿಸಿದ್ದರು. ಎಡದಿಂದ ಜಹೀರ್ ಖಾನ್-ಸಾಗರಿಕಾ, ಯುವರಾಜ್ ಸಿಂಗ್-ಹೇಝಲ್ ಕೀಚ್, ಅಜಿತ್ ಅಗರ್ಕರ್ ಮತ್ತು ಅವರ ಪತ್ನಿ, ಹರ್ಭಜನ್ ಸಿಂಗ್-ಗೀತಾ ಬಸ್ರಾ ಹಾಗೂ ಪತ್ನಿ ಸಮೇತ ಆಶಿಶ್ ನೆಹ್ರಾ ಇದ್ದಾರೆ.<img>ಅರ್ಜುನ್-ಸಾನಿಯಾ ಅವರ ವಿವಾಹ ಸಮಾರಂಭಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡ ಆಗಮಿಸಿದ್ದರು.<img>ಅರ್ಜುನ್-ಸಾನಿಯಾ ಮದುವೆಯಲ್ಲಿ ಅಜಿತ್ ಅಗರ್ಕರ್, ಜಹೀರ್ ಖಾನ್ ಹಾಗೂ ಇತರರು ಪೋಸ್ ನೀಡುತ್ತಿರುವುದು.<img>ಆದಿತ್ಯ ಠಾಕ್ರೆ ಮತ್ತು ಅವರ ತಂದೆ ಉದ್ಧವ್ ಠಾಕ್ರೆ ಅವರು ಅರ್ಜುನ್-ಸಾನಿಯಾ ಜೋಡಿಗೆ ಮದುವೆಯ ಶುಭಾಶಯ ಕೋರಿದರು.<img>ಅರ್ಜುನ್-ಸಾನಿಯಾ ಅವರ ಮದುವೆಗೆ ಯುವರಾಜ್ ಸಿಂಗ್ ತಮ್ಮ ಪತ್ನಿ ಹೇಝಲ್ ಕೀಚ್ ಅವರೊಂದಿಗೆ ಆಗಮಿಸಿದ್ದರು.<img>ಅರ್ಜುನ್-ಸಾನಿಯಾ ಅವರ ವಿವಾಹ ಸಮಾರಂಭದಲ್ಲಿ ಮಹೇಂದ್ರ ಸಿಂಗ್ ಧೋನಿ ತಮ್ಮ ಪತ್ನಿ ಸಾಕ್ಷಿ ಅವರೊಂದಿಗೆ ಕಾಣಿಸಿಕೊಂಡರು.<img>ಅರ್ಜುನ್-ಸಾನಿಯಾ ಮದುವೆಗೆ ಇರ್ಫಾನ್ ಪಠಾಣ್ ತಮ್ಮ ಪತ್ನಿಯೊಂದಿಗೆ ಆಗಮಿಸಿದ್ದರು.<img>ಕ್ರಿಕೆಟಿಗ ಪೃಥ್ವಿ ಶಾ ಅವರು ತಮ್ಮ ಗೆಳತಿ ಆಕೃತಿ ಜೊತೆ ಅರ್ಜುನ್ ತೆಂಡೂಲ್ಕರ್ ಮದುವೆಗೆ ಬಂದಿದ್ದರು.



Source link

Leave a Reply

Your email address will not be published. Required fields are marked *