Headlines

Karnataka Budget: ಶಿಕ್ಷಣಕ್ಕೆ ಸಿಂಹಪಾಲು, ಮಹಿಳಾ ಕಲ್ಯಾಣಕ್ಕೆ ಭರ್ಜರಿ ಕೊಡುಗೆ; ಯಾವ ಇಲಾಖೆಗೆ ಎಷ್ಟು? | Karnataka Budget 2026 Department Wise Allocation Education Women Welfare San

Karnataka Budget: ಶಿಕ್ಷಣಕ್ಕೆ ಸಿಂಹಪಾಲು, ಮಹಿಳಾ ಕಲ್ಯಾಣಕ್ಕೆ ಭರ್ಜರಿ ಕೊಡುಗೆ; ಯಾವ ಇಲಾಖೆಗೆ ಎಷ್ಟು? | Karnataka Budget 2026 Department Wise Allocation Education Women Welfare San



Karnataka Budget: ಶಿಕ್ಷಣಕ್ಕೆ ಸಿಂಹಪಾಲು, ಮಹಿಳಾ ಕಲ್ಯಾಣಕ್ಕೆ ಭರ್ಜರಿ ಕೊಡುಗೆ; ಯಾವ ಇಲಾಖೆಗೆ ಎಷ್ಟು? | Karnataka Budget 2026 Department Wise Allocation Education Women Welfare San

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್ ಮಂಡಿಸಿದ್ದು, ಇದು ಜನಕಲ್ಯಾಣ ಮತ್ತು ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಿದೆ. ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೆ, ಶಿಕ್ಷಣ, ಮಹಿಳಾ ಕಲ್ಯಾಣ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೆ ಬೃಹತ್ ಅನುದಾನವನ್ನು ಘೋಷಿಸಲಾಗಿದೆ.

ಬೆಂಗಳೂರು (ಮಾ.6): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 2026-27ನೇ ಸಾಲಿನ ಬಜೆಟ್‌ನಲ್ಲಿ ಜನಕಲ್ಯಾಣ ಮತ್ತು ಅಭಿವೃದ್ಧಿ ಎರಡಕ್ಕೂ ಸಮಾನ ಆದ್ಯತೆ ನೀಡಿದ್ದಾರೆ. ಸುಮಾರು 4.5 ಲಕ್ಷ ಕೋಟಿ ರೂಪಾಯಿಗಳಿಗೂ ಮೀರಿದ ಬೃಹತ್ ಗಾತ್ರದ ಈ ಆಯವ್ಯಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಜೊತೆಗೇ ಶಿಕ್ಷಣ, ಮಹಿಳಾ ಕಲ್ಯಾಣ ಮತ್ತು ಮೂಲಸೌಕರ್ಯಕ್ಕೆ ಭರ್ಜರಿ ಕೊಡುಗೆ ನೀಡಲಾಗಿದೆ.

ಯಾವ ಇಲಾಖೆಗೆ ಸಿಂಹಪಾಲು

ನಿರೀಕ್ಷೆಯಂತೆಯೇ ಈ ಬಾರಿಯೂ ಶಿಕ್ಷಣ ಇಲಾಖೆಗೆ ಅತಿ ಹೆಚ್ಚು ಅಂದರೆ 47,224 ಕೋಟಿ ರೂ. ಅನುದಾನ ನೀಡುವ ಮೂಲಕ ಜ್ಞಾನದಾಸೋಹಕ್ಕೆ ಸರ್ಕಾರ ಒತ್ತು ನೀಡಿದೆ. ಇನ್ನು ಗೃಹಲಕ್ಷ್ಮಿಯಂತಹ ಯೋಜನೆಗಳನ್ನು ಒಳಗೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,929 ಕೋಟಿ ರೂ. ಹಂಚಿಕೆ ಮಾಡಲಾಗಿದೆ.

ಇಲಾಖೆಯ ಹೆಸರು ಮಂಜೂರಾದ ಅನುದಾನ (ಕೋಟಿ ರೂ.)
ಶಿಕ್ಷಣ 47,224
ಮಹಿಳಾ ಮತ್ತು ಮಕ್ಕಳ ಕಲ್ಯಾಣ 34,929
ಇಂಧನ 29,947
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR), 26,559
ಒಳಾಡಳಿತ ಮತ್ತು ಸಾರಿಗೆ 23,100
ನೀರಾವರಿ 22,436
ನಗರಾಭಿವೃದ್ಧಿ ಮತ್ತು ವಸತಿ 22,203
ಕಂದಾಯ 19,843
ಸಮಾಜ ಕಲ್ಯಾಣ 18,612
ಆರೋಗ್ಯ 17,817
ಲೋಕೋಪಯೋಗಿ (PWD) 11,424
ಕೃಷಿ 8,373
ಆಹಾರ ಮತ್ತು ನಾಗರಿಕ ಸರಬರಾಜು 7,942
ಪಶುಸಂಗೋಪನೆ ಮತ್ತು ಮೀನುಗಾರಿಕೆ 4,084
ಇತರೆ (ಸಾಲ ಮರುಪಾವತಿ ಇತ್ಯಾದಿ) 1,72,757

ಬಜೆಟ್ ಪ್ರಮುಖ ಅಂಶಗಳು

ಇಂಧನ ವಲಯ: ಗೃಹಜ್ಯೋತಿ ಯೋಜನೆಯ ಅಡಿ ಉಚಿತ ವಿದ್ಯುತ್ ನೀಡುವ ಹಿನ್ನೆಲೆಯಲ್ಲಿ ಇಂಧನ ಇಲಾಖೆಗೆ 29,947 ಕೋಟಿ ರೂ. ನೀಡಲಾಗಿದ್ದು, ಸೌರಶಕ್ತಿ ಯೋಜನೆಗಳಿಗೂ ಒತ್ತು ನೀಡಲಾಗಿದೆ.

ನೀರಾವರಿ ಮತ್ತು ಕೃಷಿ: ರೈತರ ಜೀವನಾಡಿಯಾದ ನೀರಾವರಿ ಯೋಜನೆಗಳಿಗೆ 22,436 ಕೋಟಿ ರೂ. ಮೀಸಲಿಟ್ಟಿದ್ದು, ಕೃಷಿ ವಲಯಕ್ಕೆ 8,373 ಕೋಟಿ ರೂ. ನೀಡಲಾಗಿದೆ.

ಆರೋಗ್ಯ ಕ್ಷೇತ್ರ: ರಾಜ್ಯದಾದ್ಯಂತ ನಮ್ಮ ಕ್ಲಿನಿಕ್ ಮತ್ತು ಆಸ್ಪತ್ರೆಗಳ ಮೇಲ್ದರ್ಜೆಗೆ ಏರಿಸಲು 17,817 ಕೋಟಿ ರೂ. ವ್ಯಯಿಸಲಾಗುತ್ತಿದೆ.

ಗ್ಯಾರಂಟಿ ಯೋಜನೆಗಳ ಭಾರದ ನಡುವೆಯೂ ಸಿದ್ದರಾಮಯ್ಯ ಅವರು ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಮೀಸಲಿಡುವ ಮೂಲಕ ಆರ್ಥಿಕ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *