Headlines

ಮದುವೆ ಬಳಿಕ ರಶ್ಮಿಕಾಗೆ ಕನ್ನಡ ಹಾಡಿನ ಮೇಲೆ ಪ್ರೀತಿ

ಮದುವೆ ಬಳಿಕ ರಶ್ಮಿಕಾಗೆ ಕನ್ನಡ ಹಾಡಿನ ಮೇಲೆ ಪ್ರೀತಿ


ರಶ್ಮಿಕಾ ಮಂದಣ್ಣ (ರಶ್ಮಿಕಾ ಮಂದಣ್ಣ) ಮತ್ತು ವಿಜಯ್ ದೇವರಕೊಂಡ ಮದುವೆ ಫೆಬ್ರವರಿ 26 ರಂದು ಬಲು ಅದ್ಧೂರಿಯಾಗಿ ರಾಜಸ್ಥಾನದಲ್ಲಿ ನೆರವೇರಿದೆ. ಅವರ ಮದುವೆಯ ಚಿತ್ರಗಳೂ ವೈರಲ್ ಪಟ್ಟಿಯಲ್ಲಿ ಟಾಪ್ ನಲ್ಲಿವೆ. ಮದುವೆಗೆ ರಶ್ಮಿಕಾ ಮತ್ತು ವಿಜಯ್ ಅವರು ಧರಿಸಿದ್ದ ಉಡುಪು, ಆಭರಣಗಳು ಸಖತ್ ಟ್ರೆಂಡ್ ಆಗುತ್ತಿವೆ. ಅದಾದ ಬಳಿಕ ಮಾರ್ಚ್ 04ರಂದು ಈ ಇಬ್ಬರೂ ಅದ್ಧೂರಿಯಾಗಿ ಆರತಕ್ಷತೆ ಸಹ ಮಾಡಿಕೊಂಡರು. ಆದರೆ ಈ ವೇಳೆ ರಶ್ಮಿಕಾರ ಉಡುಪಿನ ಆಯ್ಕೆ ಸಖತ್ ಗಮನ ಸೆಳೆಯಿತು.

ರಶ್ಮಿಕಾ, ತೆಲಂಗಾಣಕ್ಕೆ ಸೊಸೆಯಾಗಿ ಹೋಗಿದ್ದು, ಆದರೆ ಮದುವೆ ಸಂದರ್ಭದಲ್ಲಿ ತಮ್ಮ ಕನ್ನಡತನವನ್ನು ಬಿಟ್ಟುಕೊಡಲಿಲ್ಲ. ಆರತಕ್ಷತೆಗೆ ರಶ್ಮಿಕಾ, ಮೈಸೂರು ರೇಷ್ಮೆ ಧರಿಸಿದ್ದರು, ಕರ್ನಾಟಕದ ಲಾಂಛನವಾದ ಗಂಡಭೇರುಂಡ ಎಂಬ್ರಾಯ್ಡಿರಿ ಸೀರೆಯ ಮೇಲಿತ್ತು. ಇದೆ ರಶ್ಮಿಕಾ ಧರಿಸಿದ್ದ ರವಿಕೆಯ ಹಿಂಬಧಿಯಲ್ಲಿ ಕೊಡವರ ಕತ್ತಿ, ಬಂದೂಕಿನ ಲಾಂಛನವೂ ಇತ್ತು. ಇದೀಗ ಆರತಕ್ಷತೆಯ ಬಳಿಕ ವಿಡಿಯೋ ಒಂದಕ್ಕೆ ರಶ್ಮಿಕಾ ಹಂಚಿಕೊಂಡಿದ್ದು, ವಿಡಿಯೋದ ಜೊತೆಗೆ ಕನ್ನಡದ ಹಾಡನ್ನೇ ಬಳಸಿದ್ದಾರೆ.

ಇದನ್ನೂ ಓದಿ:ರಶ್ಮಿಕಾ-ವಿಜಯ್ ದೇವರಕೊಂಡ ವಿವಾಹಕ್ಕೆ ಅಂತಿಮವಾಗಿ ಖರ್ಚಾಗಿದ್ದೆಷ್ಟು?

ಮದುವೆ ಆರತಕ್ಷತೆಯ ಕ್ಯೂಟ್ ವಿಡಿಯೋವನ್ನು ರಶ್ಮಿಕಾ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ವಿಡಿಯೋದ ಹಿನ್ನೆಲೆ ಹಾಡ ಕನ್ನಡದ ‘ಏಳಮ್ಮ ತುಳಸಿ’ ಹಾಡನ್ನು ಬಳಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಈ ಹಾಡು ಸಖತ್ ವೈರಲ್ ಆಗಿದೆ. ಯುವ ಸಂಗೀತ ನಿರ್ದೇಶಕ ಸುಮೇಧ್ ಸಂಗೀತ ನಿರ್ದೇಶಿಸಿರುವ ‘ಏಳಮ್ಮ ತುಳಸಿ’ ಹಾಡು ಯೂಟ್ಯೂಬ್‌ನಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ, ಅದೇ ಹಾಡನ್ನು ಇದೀಗ ರಶ್ಮಿಕಾ ಅವರ ಮದುವೆ ಆರತಕ್ಷತೆಯ ಹಿನ್ನೆಲೆಯ ವಿಡಿಯೋಗೆ ಬಳಸಲಾಗಿದೆ. ರಶ್ಮಿಕಾರನನ್ನು ಕಳೆದ ಕೆಲ ವರ್ಷಗಳಿಂದ ಕನ್ನಡ ವಿರೋಧಿ ಎಂಬಂತೆ ಚಿತ್ರಿಸಲಾಯಿತು, ಆದರೆ ಮದುವೆಯಂಥ ಮಹತ್ವದ ಸನ್ನಿವೇಶದಲ್ಲಿ ರಶ್ಮಿಕಾ ತಮ್ಮ ಕನ್ನಡತನವನ್ನು ಪ್ರದರ್ಶಿಸಿದ್ದಾರೆ. ತಮ್ಮ ಸಮುದಾಯದ ಪ್ರತಿನಿಧಿತ್ವವನ್ನು ಸಹ ಪ್ರದರ್ಶಿಸಿದ್ದಾರೆ.

ರಶ್ಮಿಕಾ ಬಳಸಿರುವ ‘ಏಳಮ್ಮ ತುಳಸಿ’ ಪುರಂದರ ದಾಸರ ರಚನೆಯಾಗಿದೆ. ಹಾಡಿಗೆ ಅದ್ಭುತವಾಗಿ ರಾಗ ಸಂಯೋಜನೆ ಮಾಡಿದ್ದಾರೆ ಸಂಗೀತ ನಿರ್ದೇಶಕ ಕೆ ಸುಮೇಧ್. ಅದ್ಭುತ ಹಾಡಿಗೆ ಅಷ್ಟೇ ಅದ್ಭುತವಾದ ದೃಶ್ಯಗಳನ್ನು ಸಹ ಸಂಯೋಜಿಸಲಾಗಿದೆ. ಒಂದು ತಿಂಗಳಿನಲ್ಲಿ ಈ ಹಾಡು 70 ಲಕ್ಷಕ್ಕೂ ಹೆಚ್ಚು ವೀವ್ಸ್ ಆಗಿದೆ. ಸಿನಿಮಾದ ಹಾಡು ರಾಜ್ಯದಲ್ಲಿದೆ, ಹೊರ ರಾಜ್ಯಗಳಲ್ಲಿಯೂ ಸಖತ್ ವೈರಲ್ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *