Headlines

ಮನಿ ಪ್ಲಾಂಟ್‌ ದುಡ್ಡು ಕೊಡ್ತಿತ್ತಾ, ಆ ಹೆಸರು ಯಾಕೆ ಬಂತು ಗೊತ್ತಾ?, ಇಲ್ಲಿದೆ ಮಾಹಿತಿ

ಮನಿ ಪ್ಲಾಂಟ್‌ ದುಡ್ಡು ಕೊಡ್ತಿತ್ತಾ, ಆ ಹೆಸರು ಯಾಕೆ ಬಂತು ಗೊತ್ತಾ?, ಇಲ್ಲಿದೆ ಮಾಹಿತಿ

ಮನಿ ಪ್ಲಾಂಟ್‌ ದುಡ್ಡು ಕೊಡ್ತಿತ್ತಾ, ಆ ಹೆಸರು ಯಾಕೆ ಬಂತು ಗೊತ್ತಾ?, ಇಲ್ಲಿದೆ ಮಾಹಿತಿ

Money plant name origin: ‘ಹಣವೇನು ಮರದಲ್ಲಿ ಬೆಳೆಯಲ್ಲ’ ಎಂಬ ಮಾತನ್ನ ಹಿರಿಯರು ಹೇಳುವುದನ್ನ ಕೇಳಿದ್ದೇವೆ. ಆದರೂ ನಮ್ಮ ಸುತ್ತಮುತ್ತಲಿನ ಬಹುತೇಕ ಮನೆಗಳಲ್ಲಿ ‘ಮನಿ ಪ್ಲಾಂಟ್’ ಎಂಬ ಸಸ್ಯ ರಾರಾಜಿಸುತ್ತಿರುತ್ತದೆ. ಹಾಗೆಯೇ ಜಗತ್ತಿನಾದ್ಯಂತ ಇದಕ್ಕೆ ಈ ಹೆಸರು ಬಂದಿದ್ದಾದರೂ ಹೇಗೆ ಎಂಬ ಕುತೂಹಲವಿದೆ.

ಪ್ರತಿಯೊಬ್ಬರ ಮನೆಯಲ್ಲೂ ಮನಿ ಪ್ಲಾಂಟ್ ಸಾಮಾನ್ಯವಾಗಿ ಇರುತ್ತದೆ. ಇಲ್ಲದಿದ್ದರೂ ಇದರ ಬಗ್ಗೆ ತಿಳಿದೇ ಇರುತ್ತದೆ. ಆದರೆ ಈ ಸಸ್ಯವನ್ನು ‘ಮನಿ ಪ್ಲಾಂಟ್’ ಎಂದು ಏಕೆ ಕರೆಯುತ್ತಾರೆ ಎಂಬ ರಹಸ್ಯ ಮಾತ್ರ ಅನೇಕರಿಗೆ ತಿಳಿದಿಲ್ಲ. ಆ ಕುತೂಹಲಕಾರಿ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ.

ಮನೆಗಳಲ್ಲಿ ಗಿಡಗಳನ್ನು ಬೆಳೆಸುವ ಹವ್ಯಾಸ ಹಲವರಿಗಿರುತ್ತದೆ. ಜಾಗವಿದ್ದವರು ತಮ್ಮ ಇಷ್ಟದಂತೆ ತರಹೇವಾರಿ ಸಸ್ಯಗಳನ್ನು ಬೆಳೆಸುತ್ತಾರೆ. ಆದರೆ, ಯಾವ ಸಸ್ಯ ಇರಲಿ ಬಿಡಲಿ, ಬಹುತೇಕ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಕಂಡುಬರುವ ಒಂದು ಸಸ್ಯವೆಂದರೆ ಅದು ‘ಮನಿ ಪ್ಲಾಂಟ್’.

ಈ ಸಸ್ಯಕ್ಕೆ ‘ಮನಿ ಪ್ಲಾಂಟ್’ ಎಂಬ ಹೆಸರು ಬರಲು ಕಾರಣವೇನು?, ನೀವು ಎಂದಾದರೂ ಯೋಚಿಸಿದ್ದೀರಾ? ಈ ಸಸ್ಯದ ಮೇಲೆ ಹಣವೇನೂ ಬೆಳೆಯುವುದಿಲ್ಲ, ಆದರೂ ಇದಕ್ಕೆ ಮನಿ ಪ್ಲಾಂಟ್ ಎಂಬ ಹೆಸರೇಕೆ ಬಂತು?.

ವಾಸ್ತವವಾಗಿ ಈ ಸಸ್ಯಕ್ಕೆ ‘ಮನಿ ಪ್ಲಾಂಟ್’ ಹೆಸರು ಬರಲು ಅದರ ಎಲೆಗಳೇ ಕಾರಣ. ಮನಿ ಪ್ಲಾಂಟ್‌ನ ಎಲೆಗಳು ದುಂಡಾಗಿ, ದಪ್ಪವಾಗಿ ಮತ್ತು ಚಪ್ಪಟೆಯಾಗಿರುತ್ತವೆ. ಕಾಲ್ಪನಿಕವಾಗಿ ಅಥವಾ ದೂರದಿಂದ ನೋಡಿದಾಗ ಈ ಎಲೆಗಳು ಹಳೆಯ ಕಾಲದ ನಾಣ್ಯಗಳನ್ನು (Coins) ಹೋಲುತ್ತವೆ. ಇದೇ ಕಾರಣಕ್ಕೆ ಇದನ್ನು ‘ಮನಿ ಪ್ಲಾಂಟ್’ ಎಂದು ಕರೆಯಲಾಗುತ್ತದೆ. ಅಲ್ಲದೆ, ಮನೆಯಲ್ಲಿ ಈ ಗಿಡವನ್ನು ಇಟ್ಟರೆ ಆರ್ಥಿಕ ಸಮೃದ್ಧಿ ಮತ್ತು ಅದೃಷ್ಟ ಒಲಿಯುತ್ತದೆ ಎಂಬ ಬಲವಾದ ನಂಬಿಕೆಯೂ ಜನರಲ್ಲಿದೆ.

ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಮನೆಯಲ್ಲಿದ್ದರೆ ಸಾಲದು, ಅದನ್ನು ಸರಿಯಾದ ರೀತಿಯಲ್ಲಿ ಬೆಳೆಸುವುದು ಮುಖ್ಯದಿಕ್ಕು: ಮನಿ ಪ್ಲಾಂಟ್ ಅನ್ನು ಯಾವಾಗಲೂ ಮನೆಯ ಆಗ್ನೇಯ (South-East) ದಿಕ್ಕಿನಲ್ಲಿ ಇಡಬೇಕು. ಇದನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ.ಎಲೆಗಳ ಬೆಳವಣಿಗೆ: ಮನಿ ಪ್ಲಾಂಟ್‌ನ ಬಳ್ಳಿ ಅಥವಾ ಎಲೆಗಳು ಎಂದಿಗೂ ನೆಲವನ್ನು ಮುಟ್ಟಬಾರದು. ಅವು ಯಾವಾಗಲೂ ಮೇಲ್ಮುಖವಾಗಿ ಬೆಳೆಯುವಂತೆ ನೋಡಿಕೊಳ್ಳಬೇಕು.ಸ್ವಚ್ಛತೆ: ಈ ಗಿಡವನ್ನು ಸದಾ ಸ್ವಚ್ಛವಾದ ಜಾಗದಲ್ಲಿ ಇಡಬೇಕು. ಗಿಡದ ಎಲೆಗಳು ಒಣಗಿದ್ದರೆ ಅವುಗಳನ್ನು ತಕ್ಷಣ ತೆಗೆದುಹಾಕಬೇಕು. ಇದು ಮನೆಗೆ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

Source link

Leave a Reply

Your email address will not be published. Required fields are marked *