'ನಂಬರ್ 1 ಬ್ಯಾಟರ್ ಅಲ್ಲ, ನಂಬರ್ 1 ಫ್ರಾಡ್'! ಸೆಮಿಫೈನಲ್‌ನಲ್ಲೂ ಫ್ಲಾಪ್ ಆದ ಅಭಿಷೇಕ್‌ ಶರ್ಮಾ ಮೇಲೆ ಫ್ಯಾನ್ಸ್ ಫುಲ್ ಗರಂ!

'ನಂಬರ್ 1 ಬ್ಯಾಟರ್ ಅಲ್ಲ, ನಂಬರ್ 1 ಫ್ರಾಡ್'! ಸೆಮಿಫೈನಲ್‌ನಲ್ಲೂ ಫ್ಲಾಪ್ ಆದ ಅಭಿಷೇಕ್‌ ಶರ್ಮಾ ಮೇಲೆ ಫ್ಯಾನ್ಸ್ ಫುಲ್ ಗರಂ!

'ನಂಬರ್ 1 ಬ್ಯಾಟರ್ ಅಲ್ಲ, ನಂಬರ್ 1 ಫ್ರಾಡ್'! ಸೆಮಿಫೈನಲ್‌ನಲ್ಲೂ ಫ್ಲಾಪ್ ಆದ ಅಭಿಷೇಕ್‌ ಶರ್ಮಾ ಮೇಲೆ ಫ್ಯಾನ್ಸ್ ಫುಲ್ ಗರಂ!

ಮುಂಬೈ: ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕಳಪೆ ಪ್ರದರ್ಶನ ನೀಡಿದ ಟೀಂ ಇಂಡಿಯಾ ಓಪನರ್ ಅಭಿಷೇಕ್ ಶರ್ಮಾ ಅವರನ್ನು ಅಭಿಮಾನಿಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಮಹತ್ವದ ಪಂದ್ಯದಲ್ಲಿ ಅಭಿಷೇಕ್ ಕೇವಲ 7 ಎಸೆತಗಳಲ್ಲಿ 9 ರನ್ ಗಳಿಸಿ ಔಟಾದರು. ಈ ಮೂಲಕ ಟೂರ್ನಿಯಲ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದರು.

ಈ ವಿಶ್ವಕಪ್‌ನಲ್ಲಿ ಅಭಿಷೇಕ್ ಆಡಿದ 7 ಪಂದ್ಯಗಳಿಂದ ಗಳಿಸಿದ್ದು ಕೇವಲ 89 ರನ್ ಮಾತ್ರ. ಇದರಲ್ಲಿ ಜಿಂಬಾಬ್ವೆ ಎದುರು 55 ರನ್‌ಗಳನ್ನು ಗಳಿಸಿದ್ದು ಬಿಟ್ಟರೇ ಉಳಿದ 6 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ಅವರು 20 ರನ್‌ಗಳ ಗಡಿ ದಾಟಲು ಸಾಧ್ಯವಾಗಿಲ್ಲ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಎರಡನೇ ಓವರ್‌ನಲ್ಲೇ ಮೊದಲ ಆಘಾತ ಎದುರಾಯ್ತು. ಇಂಗ್ಲೆಂಡ್‌ನ ಪಾರ್ಟ್-ಟೈಮ್ ಆಫ್ ಸ್ಪಿನ್ನರ್ ವಿಲ್ ಜಾಕ್ಸ್, ಅಭಿಷೇಕ್ ವಿಕೆಟ್ ಪಡೆದರು. ಓವರ್‌ನ ಐದನೇ ಎಸೆತದಲ್ಲಿ ಮಿಡ್-ಆಫ್‌ನ ಮೇಲೆ ಬೌಂಡರಿ ಬಾರಿಸಿದ್ದ ಅಭಿಷೇಕ್, ಮುಂದಿನ ಎಸೆತದಲ್ಲೂ ದೊಡ್ಡ ಹೊಡೆತಕ್ಕೆ ಕೈಹಾಕಿದರು. ಆದರೆ, ಜಾಕ್ಸ್ ಚೆಂಡಿನ ವೇಗವನ್ನು ಕಡಿಮೆ ಮಾಡಿ ಹಾಕಿದ ತಂತ್ರಕ್ಕೆ ಅಭಿಷೇಕ್ ಬಲಿಯಾದರು. ಲಾಂಗ್ ಆನ್‌ನಲ್ಲಿದ್ದ ಫಿಲ್ ಸಾಲ್ಟ್‌ಗೆ ಸುಲಭ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ಆಗ ಅವರ ಖಾತೆಯಲ್ಲಿದ್ದುದು 7 ಎಸೆತಗಳಲ್ಲಿ 9 ರನ್ ಮಾತ್ರ.

ಅಭಿಷೇಕ್ ಶರ್ಮಾ ಮೇಲೆ ಫ್ಯಾನ್ಸ್ ಗರಂ

ಟೂರ್ನಿಯುದ್ದಕ್ಕೂ ಕಳಪೆ ಫಾರ್ಮ್ ಮುಂದುವರಿಸಿದ್ದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ‘ಅಭಿಷೇಕ್ ದುರ್ಬಲ ತಂಡಗಳ ವಿರುದ್ಧ ಮಾತ್ರ ರನ್ ಗಳಿಸುವ ಆಟಗಾರ’ ಎಂದು ಅಭಿಮಾನಿಗಳು ಆರೋಪಿಸುತ್ತಿದ್ದಾರೆ. ‘ಸೆಮಿಫೈನಲ್‌ನಂತಹ ದೊಡ್ಡ ವೇದಿಕೆಯಲ್ಲಿ ವಿಶ್ವದ ನಂಬರ್ 1 ಬ್ಯಾಟರ್ ಆಡುವುದು ಹೀಗಾ?’ ಎಂದು ಮತ್ತೊಬ್ಬ ಅಭಿಮಾನಿ ಪ್ರಶ್ನಿಸಿದ್ದಾರೆ.

Overhyped Abhishek Sharma and Varun Chakravarthy Both disappointed at big stage

— desi mojito (@desimojito) March 5, 2026

- 3 Ducks- 55 vs Zimbabwe- 15 RSA- 10 vs WI (Do or die)- 9 vs ENG (Semi Final)Academy senior officials gave a red carpet welcome to Abhishek Sharma for his generational performance in the 2026 T20 World Cup pic.twitter.com/8twVblHC6l

— TukTuk Academy (@TukTuk_Academy) March 5, 2026

Abhishek Sharma is the Biggest Choker of team India What would he do by Hitting sixes in bilateral series if he can’t perform where it actually matters the Most

— TheRedliner7.football⚽ .ink base.eth (@iMSahil_7) March 6, 2026

Abhishek Sharma is a big flop in this world cup except in one match… Only advantage he provides is settled the opening pair with Sanju Samson #T20WorldCup #INDvsENG #ENGvsIND #INDvENG #ENGvIND #SuryakumarYadav #SanjuSamson #AbhishekSharma pic.twitter.com/i70Ejv1diN

— Cric_Lover (@ankit_bhattar) March 6, 2026

ಒಂದು ಕಡೆ ಸಂಜು ಸ್ಯಾಮ್ಸನ್ ಅಬ್ಬರಿಸುತ್ತಿದ್ದರೆ, ಅವರಿಗೆ ಸ್ಟ್ರೈಕ್ ನೀಡದೆ ಅನಗತ್ಯ ಹೊಡೆತಕ್ಕೆ ಯತ್ನಿಸಿ ವಿಕೆಟ್ ಒಪ್ಪಿಸಿದ್ದು ಅಭಿಮಾನಿಗಳನ್ನು ಮತ್ತಷ್ಟು ಕೆರಳಿಸಿದೆ. ಈ ಪ್ರದರ್ಶನದಿಂದಾಗಿ, ಮುಂಬರುವ ಪಂದ್ಯಗಳಲ್ಲಿ ತಂಡದಲ್ಲಿ ಅವರ ಸ್ಥಾನದ ಬಗ್ಗೆಯೂ ಪ್ರಶ್ನೆಗಳು ಏಳುವಂತೆ ಮಾಡಿದೆ.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಅಭಿಷೇಕ್ ಶರ್ಮಾ ಪ್ರದರ್ಶನ

ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ತಾನಾಡಿದ ಮೊದಲ ಮೂರು ಪಂದ್ಯಗಳಲ್ಲಿ ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸುವ ಮೂಲಕ ಪೆವಿಲಿಯನ್ ಪೆರೇಡ್ ನಡೆಸಿದ್ದರು. ಇದಾದ ಬಳಿಕ ಸೂಪರ್-8 ಹಂತದ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ 15 ರನ್ ಬಾರಿಸಿದ್ದರು. ಇನ್ನು ದುರ್ಬಲ ಜಿಂಬಾಬ್ವೆ ಎದುರು 55 ರನ್ ಬಾರಿಸಿದ್ದ ಅ‍ಭಿಷೇಕ್ ಶರ್ಮಾ, ವೆಸ್ಟ್ ಇಂಡೀಸ್ ಎದುರಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 10 ರನ್‌ಗೆ ವಿಕೆಟ್ ಒಪ್ಪಿಸಿದ್ದರು. ಇದೀಗ ಮಹತ್ವದ ಸೆಮೀಸ್‌ನಲ್ಲಿ ಒಂದಂಕಿ(9) ಮೊತ್ತಕ್ಕೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ.

Source link

Leave a Reply

Your email address will not be published. Required fields are marked *