Amruthadhaare Serial Episode: ಸ್ಟಾಕ್ ಮಾರ್ಕೆಟ್‌ನಲ್ಲಿ ದೊಡ್ಡ ಯಶಸ್ಸು ಪಡೆದು, ಇಂದು 28000 ಸಾವಿರ ಕೋಟಿ ರೂಪಾಯಿ ಒಡೆಯ ಎನಿಸಿಕೊಂಡಿರೋ ನಿಖಿಲ್ ಕಾಮತ್, ನಿತಿನ್ ಕಾಮತ್ ಅವರು ಮೂಲತಃ ಶಿವಮೊಗ್ಗದವರು. ಈಗ ಅಮೃತಧಾರೆ ಧಾರಾವಾಹಿಯ ಗೌತಮ್ ದಿವಾನ್ ಕೂಡ ಇದೇ ದಾರಿ ಹಿಡಿದಿದ್ದಾನೆ.

ಇರೋ ಆಸ್ತಿಯೆಲ್ಲವನ್ನು ಮಲ ಸಹೋದರ ಜಯದೇವ್ ದಿವಾನ್‌ಗೆ ಬರೆದುಕೊಟ್ಟ ಬಂದ, ಗೌತಮ್ ಈಗ ಮತ್ತೆ ಬ್ಯುಸಿನೆಸ್ ಮಾಡಲು ರೆಡಿ ಆಗಿದ್ದಾನೆ. ಹೌದು, ಅವನು ಬ್ಯುಸಿನೆಸ್ ಮಾಡಿ ಸಾಮ್ರಾಜ್ಯ ಕಟ್ಟಬೇಕು ಎನ್ನೋದು ಅವನ ತಾಯಿ ಭಾಗ್ಯಳ ಕನಸು.

ಅತ್ತ ಗೌತಮ್ ದಿವಾನ್ ಎಲ್ಲ ತಯಾರಿ ಮಾಡಿಕೊಂಡಿದ್ದಾನೆ, ಆಫೀಸ್ ಕೂಡ ರೆಡಿಯಿದೆ, ಪ್ಲ್ಯಾನ್ ಕೂಡ ಆಗಿದೆ. ಅಂದಹಾಗೆ ತಾಯಿ, ಅಜ್ಜಿ ಬಳಿ ಅವನು ಹೊಸ ಆಫೀಸ್ ಉದ್ಘಾಟನೆ ಕೂಡ ಮಾಡಿದ್ದಾನೆ.

ಗೌತಮ್ ದಿವಾನ್ ಹೊಸ ಆಫೀಸ್ ಮಾಡಿರೋದು, ಬ್ಯುಸಿನೆಸ್ ಮಾಡುತ್ತಿರೋದು ವಿರೋಧಿಗಳಿಗೆ ಭಯ ಹುಟ್ಟಿಸಿದೆ. ಬ್ಯುಸಿನೆಸ್ ಮಾಡ್ತಿರೋದು, ಸ್ಟಾರ್ಟ್‌ಅಪ್ ಮಾಡ್ತಿರೋದು ಗೌತಮ್ ದಿವಾನ್ ಎಂದು ಜಯದೇವ್‌ನನ್ನು ಎಚ್ಚರಿಸ್ತಿದ್ದಾರೆ. ಅಂಥ ಸಾಮ್ರಾಜ್ಯ ಕಟ್ಟಿದ ಗೌತಮ್‌ಗೆ ಸ್ಟಾರ್ಟ್‌ಅಪ್ ಮಾಡಿ, ಬೆಳೆಸೋದು ದೊಡ್ಡ ವಿಚಾರವಲ್ಲ ಎಂದು ಎಚ್ಚರಿಸಿದ್ದಾರೆ.

ಗೌತಮ್ ದಿವಾನ್ ಹೊಸ ಹೆಜ್ಜೆ ಇಟ್ಟಿರೋದು ಜಯದೇವ್ ಹಾಗೂ ಅವನ ತಾಯಿಗೆ ಭಯ ಹುಟ್ಟಿಸಿದೆ, ಮುಂದೆ ಈ ಉದ್ಯಮವನ್ನು ಹಾಳು ಮಾಡಲು ಏನು ಮಾಡ್ತಾರೆ ಎಂದು ಕಾದು ನೋಡಬೇಕಿದೆ. ಬಹುಶಃ ಜಯದೇವ್ ಮಾಡಿದ ಮೋಸವನ್ನು ಬಯಲಿಗೆಳೆದು, ಗೌತಮ್ ಮತ್ತೆ ಸಾಮ್ರಾಜ್ಯ ಕಟ್ಟಬಹುದು.

Source link
Amruthadhaare Serial: ಬೆಂಗಳೂರಿನ 28000 ಕೋಟಿ ಉದ್ಯಮಿ ನಿಖಿಲ್ ಕಾಮತ್ ಹಾದಿ ಹಿಡಿದ ಗೌತಮ್