
ಈ ಫೋಟೋ ಹಾಕಿರುವ ಹಿಂದೆ ಅವರ ಉದ್ದೇಶ ಏನಿದ್ಯೋ ಗೊತ್ತಿಲ್ಲ. ಆದರೆ ಅಭಿಮಾನಿಗಳಂತೂ ಥಹರೇವಾರಿ ಕಮೆಂಟ್ಸ್ ಹಾಕುತ್ತಿದ್ದಾರೆ. ತಮ್ಮದೇ ಯೋಚನಾ ಲಹರಿ ಹರಿದು ಬಿಡುತ್ತಿದ್ದಾರೆ. ನಾಯಿಗೆ ಇರುವ ನಿಯತ್ತು, ಮನುಷ್ಯರಿಗೆ ಇಲ್ಲಾ ಸರ್, ನೀವು ಹೇಳ್ತಿರೋದು ನಿಜ ಎಂದು ಹಲವರು ಇದನ್ನು ಅರ್ಥೈಸಿಕೊಂಡಿದ್ದು, ಇದನ್ನು ಮುರಿದು ಹೋದ ಮದುವೆಗೆ ಲಿಂಕ್ ಮಾಡುತ್ತಿದ್ದಾರೆ. ಮತ್ತೆ ಕೆಲವರು, ನಿಮ್ಮ ಉದ್ದೇಶ ಏನು ಎಂದು ಅರ್ಥವಾಯಿತು ಎನ್ನುತ್ತಿದ್ದಾರೆ.