‘ಟಟೀರೀ’ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ: ವಿವಾದಕ್ಕೆ ಸಿಲುಕಿದ ಗಾಯಕ ಬಾದ್​ಶಾ

‘ಟಟೀರೀ’ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ: ವಿವಾದಕ್ಕೆ ಸಿಲುಕಿದ ಗಾಯಕ ಬಾದ್​ಶಾ


'ಟಟೀರೀ' ಹಾಡಿನಲ್ಲಿ ಅಶ್ಲೀಲ ಸಾಹಿತ್ಯ: ವಿವಾದಕ್ಕೆ ಸಿಲುಕಿದ ಗಾಯಕ ಬಾದ್ಶಾ

ಖ್ಯಾತ ಗಾಯಕ ಬಾದ್ಶಾ (ಬಾದಶಾ) ಅವರು ಮತ್ತೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹರಿಯಾಣವಿ ಭಾಷೆಯಲ್ಲಿ ಅವರ ಹೊಸ ಹಾಡು ‘ಟಟೀರಿ’ (ತಟೀರಿ) ಇತ್ತೀಚೆಗೆ ಬಿಡುಗಡೆ ಆಯಿತು. ಈ ಹಾಡಿನಲ್ಲಿ ಮಹಿಳೆಯರನ್ನು ಅವಹೇಳನ ಮಾಡುವ ಮತ್ತು ಅಶ್ಲೀಲ ಸಾಹಿತ್ಯ ಬಳಸಲಾಗಿದೆ ಎಂಬ ಆರೋಪದ ಮೇಲೆ ಹರಿಯಾಣ ರಾಜ್ಯ ಮಹಿಳಾ ಆಯೋಗ (HSCW) ಸಮನ್ಸ್ ಜಾರಿ ಮಾಡಿದೆ. ಈ ಮೊದಲು ಕೂಡ ಬಾದ್ಶಾ ಅವರ ಹಾಡುಗಳ ಸಾಹಿತ್ಯದ ಅನೇಕರಿಂದ ತಕರಾರು ಕಾಣಿಸಿಕೊಂಡಿತ್ತು.

ಕೆಲವೇ ದಿನಗಳ ಹಿಂದಷ್ಟೇ ಬಿಡುಗಡೆಯಾದ ‘ಟಟೀರಿ’ ಹಾಡಿನಲ್ಲಿ ಕೆಲವು ಪದಗಳು ಅಸಭ್ಯತೆಯಿಂದ ಕೂಡಿವೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಕೆಡಿಸುವಂತಿವೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಆಯೋಗವು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿದೆ. ಈ ಹಾಡು ವಿಶೇಷವಾಗಿ ಮಹಿಳೆಯರು ಮತ್ತು ಅಪ್ರಾಪ್ತರ ಮೇಲೆ ಕೆಟ್ಟ ಪರಿಣಾಮ ಎಂದು ಆಯೋಗವು ಆತಂಕ ವ್ಯಕ್ತಪಡಿಸಿದೆ.

ವಿವಾದಿತ ‘ಟಟೀರಿ’ ಹಾಡು:

ಮಾರ್ಚ್ 6 ರಂದು ಆದೇಶ ಹೊರಡಿಸಿದ ಸಮನ್ಸ್ ಪ್ರಕಾರ, ಬಾದ್ಶಾ ಅವರು ಮಾರ್ಚ್ 13 ರಂದು ಬೆಳಿಗ್ಗೆ 11.30 ಗಂಟೆಗೆ ಪಾಣಿಪತ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ವಿಚಾರಣೆಗೆ ಹಾಜರಾಗಬೇಕು. ಈ ಸಂಬಂಧ ಪಾಣಿಪತ್ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆಯೋಗವು ಪತ್ರ ಬರೆದಿದ್ದು, ಸಂಬಂಧಪಟ್ಟವರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ‘ದುಡ್ಡುಕೊಟ್ರೆ ನಿಮಗಿಂತ ಚೆನ್ನಾಗಿ ಕನ್ನಡ ಮಾತಾಡ್ತೀನಿ’ ಎಂದ ಟೀಕೆ; ಖಡಕ್ ಉತ್ತರ ಕೊಟ್ಟ ಬಾದ್ಶಾ

ಈ ಕುರಿತು ಪ್ರತಿಕ್ರಿಯಿಸಿದ ಹರಿಯಾಣ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ, ‘ಇಂತಹ ಆಕ್ಷೇಪಾರ್ಹ ಸಾಹಿತ್ಯವುಳ್ಳ ಹಾಡುಗಳು ಹೇಗೆ ಪ್ರಕಟವಾಗುತ್ತವೆ? ಸೆನ್ಸಾರ್ ಮಂಡಳಿಯ ಕಣ್ಣಿನಿಂದ ಇವು ಹೇಗೆ ತಪ್ಪಿಸಿಕೊಳ್ಳುತ್ತವೆ ಎಂಬುದು ದೊಡ್ಡ ಪ್ರಶ್ನೆ’ ಎಂದು ಕಿಡಿಕಾರಿದ್ದಾರೆ. ಈ ಹಿಂದೆ ತಾವೂ ಕೂಡ ಸೆನ್ಸಾರ್ ಮಂಡಳಿಯ ಸದಸ್ಯೆಯಾಗಿ ಕೆಲಸ ಮಾಡಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ, ಅಂತಹ ವಿಷಯಗಳು ಸಮಾಜದ ನೈತಿಕತೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *