Headlines

ಕರ್ನಾಟಕ ಬಜೆಟ್ 2026-27 ವಿಶ್ಲೇಷಣೆ: ಉದ್ಯಮ ವಲಯದಿಂದ ‘ಉತ್ತಮ’ ಸರ್ಟಿಫಿಕೇಟ್; ಒಪ್ಪಿಕೊಳ್ಳದ ವಿರೋಧ ಪಕ್ಷ! | Karnataka Budget 2026 Analysis Industry Praise Vs Opposition Criticism Sat

ಕರ್ನಾಟಕ ಬಜೆಟ್ 2026-27 ವಿಶ್ಲೇಷಣೆ: ಉದ್ಯಮ ವಲಯದಿಂದ ‘ಉತ್ತಮ’ ಸರ್ಟಿಫಿಕೇಟ್; ಒಪ್ಪಿಕೊಳ್ಳದ ವಿರೋಧ ಪಕ್ಷ! | Karnataka Budget 2026 Analysis Industry Praise Vs Opposition Criticism Sat



ಕರ್ನಾಟಕ ಬಜೆಟ್ 2026-27 ವಿಶ್ಲೇಷಣೆ: ಉದ್ಯಮ ವಲಯದಿಂದ ‘ಉತ್ತಮ’ ಸರ್ಟಿಫಿಕೇಟ್; ಒಪ್ಪಿಕೊಳ್ಳದ ವಿರೋಧ ಪಕ್ಷ! | Karnataka Budget 2026 Analysis Industry Praise Vs Opposition Criticism Sat

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಕರ್ನಾಟಕ ಬಜೆಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉದ್ಯಮ ವಲಯವು ಕೈಗಾರಿಕಾ ಕ್ಲಸ್ಟರ್‌ಗಳ ಸ್ಥಾಪನೆಯನ್ನು ಸ್ವಾಗತಿಸಿದರೆ, ಸರ್ಕಾರದ ಬೃಹತ್ ಸಾಲ ಮತ್ತು ವಿತ್ತೀಯ ಶಿಸ್ತಿನ ಬಗ್ಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಬೆಂಗಳೂರು (ಮಾ.06): ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026-27ನೇ ಸಾಲಿನ ಕರ್ನಾಟಕ ಬಜೆಟ್ ರಾಜ್ಯದಾದ್ಯಂತ ಮಿಶ್ರ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ. ಉದ್ಯಮ ವಲಯವು ಈ ಬಜೆಟ್ ಅನ್ನು ಆರ್ಥಿಕ ಬೆಳವಣಿಗೆಗೆ ಪೂರಕ ಎನ್ನುತ್ತಿದ್ದರೆ, ವಿರೋಧ ಪಕ್ಷಗಳು ಸರ್ಕಾರದ ವಿತ್ತೀಯ ಶಿಸ್ತಿನ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಉದ್ಯಮ ವಲಯದ ಆಶಾವಾದ

ಬಜೆಟ್‌ನಲ್ಲಿ ಘೋಷಿಸಲಾದ 10 ಕೈಗಾರಿಕಾ ಕ್ಲಸ್ಟರ್‌ಗಳ ಸ್ಥಾಪನೆ ಮತ್ತು ಎಂಎಸ್‌ಎಂಇ (MSME) ವಲಯಕ್ಕೆ ನೀಡಿದ ಒತ್ತು ಉದ್ಯಮ ರಂಗದಲ್ಲಿ ಹೊಸ ಭರವಸೆ ಮೂಡಿಸಿದೆ. ಈ ಕುರಿತು ಪ್ರಮುಖ ಸಹೋದ್ಯೋಗಿ ಸ್ಥಳ ಸಂಸ್ಥೆಯಾದ ‘315 ವರ್ಕ್ ಅವೆನ್ಯೂ’ (315Work Avenue) ಸ್ಥಾಪಕ ಮಾನಸ್ ಮೆಹ್ರೋತ್ರಾ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಜ್ಯ ಬಜೆಟ್‌ನಲ್ಲಿ ಎಂಎಸ್‌ಎಂಇ ಮತ್ತು ಕೈಗಾರಿಕಾ ಅಭಿವೃದ್ಧಿಗೆ ನೀಡಿರುವ ಆದ್ಯತೆಯು ಕರ್ನಾಟಕದ ಆರ್ಥಿಕ ಪರಿಸರವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ರಾಜ್ಯಾದ್ಯಂತ 10 ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸುವ ಪ್ರಸ್ತಾವನೆಯು ಹೊಸ ಉದ್ಯಮ ಕೇಂದ್ರಗಳನ್ನು ಸೃಷ್ಟಿಸಲಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ವಿಸ್ತರಣೆಯಾದಂತೆ, ವೃತ್ತಿಪರವಾಗಿ ನಿರ್ವಹಿಸಲ್ಪಡುವ ಮತ್ತು ಹೊಂದಿಕೊಳ್ಳುವ ಸಹೋದ್ಯೋಗಿ ಸ್ಥಳಗಳ (Coworking Spaces) ಬೇಡಿಕೆ ಹೆಚ್ಚಾಗಲಿದೆ. ಮೂಲಸೌಕರ್ಯ ಮತ್ತು ಸಂಪರ್ಕದ ಮೇಲೆ ಸರ್ಕಾರ ನಿರಂತರವಾಗಿ ಮಾಡುತ್ತಿರುವ ಹೂಡಿಕೆಯು ಬೆಂಗಳೂರು ಮಾತ್ರವಲ್ಲದೆ ಇತರ ಉದಯೋನ್ಮುಖ ವಾಣಿಜ್ಯ ಕೇಂದ್ರಗಳ ಬೆಳವಣಿಗೆಗೆ ಪೂರಕವಾಗಲಿದೆ’ ಎಂದು ಮಾನಸ್ ಮೆಹ್ರೋತ್ರಾ ಅಭಿಪ್ರಾಯಪಟ್ಟಿದ್ದಾರೆ.

ವಿರೋಧ ಪಕ್ಷದ ವಾಗ್ದಾಳಿ: ‘ಇದು ಅಂಕಿ-ಅಂಶಗಳ ಜಾದೂ’

ಇನ್ನೊಂದೆಡೆ, ಸರ್ಕಾರದ ಬಜೆಟ್ ಅನ್ನು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ತೀವ್ರವಾಗಿ ಟೀಕಿಸಿದ್ದಾರೆ. ಸಿದ್ದರಾಮಯ್ಯ ಅವರು ಅಂಕಿ-ಅಂಶಗಳ ಮೂಲಕ ರಾಜ್ಯದ ಜನತೆಗೆ ವಂಚನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ‘ಸಿದ್ದರಾಮಯ್ಯ ಅವರು 17ನೇ ಬಜೆಟ್ ಮಂಡಿಸಿದ ಹೆಮ್ಮೆಯ ಪ್ರದರ್ಶನ ಮಾಡಿದ್ದಾರೆ. ಆದರೆ ವಾಸ್ತವದಲ್ಲಿ ತೆರಿಗೆ ಸಂಗ್ರಹಣೆಯಲ್ಲಿ ಶೇ. 7% ರಷ್ಟು ಕಡಿತವಾಗಿದೆ. ಅಂಕಿ-ಅಂಶಗಳ ಮೂಲಕ ತೆರಿಗೆ ಸಂಗ್ರಹ ಹೆಚ್ಚಳವಾಗಲಿದೆ ಎಂದು ನಾಟಕವಾಡುತ್ತಿದ್ದಾರೆ. ವಿತ್ತೀಯ ಶಿಸ್ತಿನ ನಿಯಮ ಪಾಲಿಸುತ್ತೇವೆ ಎಂದು ಅಂಕಿ-ಅಂಶಗಳನ್ನು ಬದಲಾಯಿಸುವ ಜಾದೂಗಾರ ಇವರು. ಸರ್ಕಾರ ಮಾಡಿರುವ ಬೃಹತ್ ಸಾಲಕ್ಕೆ ಬರೋಬ್ಬರಿ 45,600 ಕೋಟಿ ರೂಪಾಯಿ ಬಡ್ಡಿ ಕಟ್ಟುತ್ತಿದ್ದಾರೆ. ನಾವು ಮಾಡಿರುವ ಸಾಲಕ್ಕಿಂತ ನೀವು ಕಟ್ಟುತ್ತಿರುವ ಬಡ್ಡಿಯೇ ಹೆಚ್ಚಾಗಿದೆ. ಅಂಕಿ-ಅಂಶಗಳ ಜಾದೂ ಮಾಡಿ ಬಜೆಟ್‌ಗೆ ಇರುವ ಪಾವಿತ್ರ್ಯತೆಯನ್ನು ಹಾಳು ಮಾಡಿದ್ದೀರಿ,” ಎಂದು ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.

ವಿಶ್ಲೇಷಣೆ: ಅಭಿವೃದ್ಧಿ ಮತ್ತು ಸಾಲದ ನಡುವಿನ ಸಮತೋಲನವೆಲ್ಲಿ?

ಬಜೆಟ್‌ನ ಒಟ್ಟಾರೆ ವಿಶ್ಲೇಷಣೆ ನಡೆಸಿದಾಗ ಎರಡು ಭಿನ್ನ ಚಿತ್ರಣಗಳು ಗೋಚರಿಸುತ್ತವೆ:

ಅಭಿವೃದ್ಧಿಯ ದೃಷ್ಟಿಕೋನ: ಕೈಗಾರಿಕಾ ಕ್ಲಸ್ಟರ್‌ಗಳು, ಮೆಟ್ರೋ ವಿಸ್ತರಣೆ ಮತ್ತು ಶಿಕ್ಷಣಕ್ಕೆ ನೀಡಿದ ಅನುದಾನವು ರಾಜ್ಯದ ಭವಿಷ್ಯದ ದೃಷ್ಟಿಯಿಂದ ಸ್ವಾಗತಾರ್ಹ. ಇದು ಉದ್ಯಮ ರಂಗದ ವಿಶ್ವಾಸ ಹೆಚ್ಚಿಸಿರುವುದು ಸುಳ್ಳಲ್ಲ.

ಆರ್ಥಿಕ ಹೊರೆಯ ಸವಾಲು: ಪ್ರತಿಪಕ್ಷಗಳು ಎತ್ತಿ ತೋರಿಸಿರುವಂತೆ, ರಾಜ್ಯದ ಸಾಲದ ಮೇಲಿನ ಬಡ್ಡಿ ಪಾವತಿಯೇ 45,000 ಕೋಟಿ ರೂ. ದಾಟುತ್ತಿರುವುದು ಆತಂಕಕಾರಿ ವಿಷಯ. ಬಜೆಟ್‌ನ ಒಂದು ದೊಡ್ಡ ಪಾಲು ಬಡ್ಡಿ ಕಟ್ಟಲು ಮತ್ತು ಗ್ಯಾರಂಟಿ ಯೋಜನೆಗಳಿಗೆ ವ್ಯಯವಾಗುತ್ತಿರುವುದರಿಂದ, ನೈಜ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆಯಾಗುವ ಸಾಧ್ಯತೆ ಇದೆ.



Source link

Leave a Reply

Your email address will not be published. Required fields are marked *