ಚಿತ್ರದುರ್ಗ: ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ: ಜಾತ್ರೆಗೆ ಹೋಗಿ ಬರ್ತಿದ್ದ ಇಬ್ಬರು ತರುಣರು ಸಾವು | Chitradurga News Bus Collides With A Bike Two Youths Died In Neralagunte Challakere

ಚಿತ್ರದುರ್ಗ: ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಹದಿಹರೆಯದ ಹುಡುಗರು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ತಿಪ್ಪೇರುದ್ರಸ್ವಾಮಿಯ ಜಾತ್ರೆಗೆ ಭೇಟಿ ನೀಡಿ ವಾಪಸ್ ಬರುವ ವೇಳೆ ಈ ದುರಂತ ಸಂಭವಿಸಿದೆ.

ಬಸ್ ಡಿಕ್ಕಿ: ಬೈಕ್‌ನಲ್ಲಿದ್ದ ಇಬ್ಬರು ತರುಣರು ಸಾವು

ಚಿತ್ರದುರ್ಗ:ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಹದಿಹರೆಯ ಹುಡುಗರು ಸಾವನ್ನಪ್ಪಿದ ಆಘಾತಕಾರಿ ಘಟನೆ

ನೇರಲಗುಂಟೆ ಬಳಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನೇರಲಗುಂಟೆ ಗ್ರಾಮದಲ್ಲಿ ಬೈಕಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತರನ್ನು 22 ವರ್ಷದ ಪ್ರಜ್ವಲ್ ಹಾಗೂ 18 ವರ್ಷದ ಅಭಿಷೇಕ್ ಎಂದು ಗುರುತಿಸಲಾಗಿದೆ. ಮೃತ ಬೈಕ್ ಸವಾರರು ನಾಯಕನಹಟ್ಟಿಯಲ್ಲಿ ಜಾತ್ರೆಗೆ ತೆರಳಿ ವಾಪಸ್ ಬರುವ ವೇಳೆ ಈ ದುರಂತ ಸಂಭವಿಸಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಹಾಗೂ ಜಾತ್ರೆ ಇಂದು ನಡೆದಿದೆ. ಏಷ್ಯಾದಲ್ಲಿಯೇ ಎರಡನೇ ಅತಿದೊಡ್ಡ ರಥೋತ್ಸವ ಎಂಬ ಹೆಗ್ಗಳಿಗೆ ಹೊಂದಿರುವ ಈ ರಥೋತ್ಸವದಲ್ಲಿ ಸುತ್ತಮುತ್ತಲ ಊರಿನ ಹಾಗೂ ಜಿಲ್ಲೆಗಳ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಹಾಗೆಯೇ ಈ ಯುವಕರು ಕೂಡ ತಿಪ್ಪೇರುದ್ರಸ್ವಾಮಿಯ ಜಾತ್ರೆಗೆ ಭೇಟಿ ನೀಡಿ ವಾಪಸ್ ಬರುವ ವೇಳೆ ನೇರಲಗುಂಟೆ ಬಳಿ ಈ ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ಕೋಲಾರ: ಬಂಗಾರದ ಕಿವಿಯೋಲೆಗಾಗಿ ವೃದ್ಧೆಯ ಕಿವಿಯನ್ನೇ ಕತ್ತರಿಸಿದ ಪಾಪಿಗಳು

Source link

Leave a Reply

Your email address will not be published. Required fields are marked *