5 ನಿಮಿಷ ಸಮಯ ಕೇಳಿದ ನಟಿ ಪ್ರಿಯಾಮಣಿ ಬಳಿಕ ಆ ಡ್ರೆಸ್ ಹಾಕೊಂಡ್ರ.. ಅಷ್ಟಕ್ಕೂ ಆಗಿದ್ದೇನು?

5 ನಿಮಿಷ ಸಮಯ ಕೇಳಿದ ನಟಿ ಪ್ರಿಯಾಮಣಿ ಬಳಿಕ ಆ ಡ್ರೆಸ್ ಹಾಕೊಂಡ್ರ.. ಅಷ್ಟಕ್ಕೂ ಆಗಿದ್ದೇನು?

5 ನಿಮಿಷ ಸಮಯ ಕೇಳಿದ ನಟಿ ಪ್ರಿಯಾಮಣಿ ಬಳಿಕ ಆ ಡ್ರೆಸ್ ಹಾಕೊಂಡ್ರ.. ಅಷ್ಟಕ್ಕೂ ಆಗಿದ್ದೇನು?

ಶೂಟಿಂಗ್ ಶುರುವಾದ ಮೇಲೆ ಸ್ಟಾರ್ ನಟಿಯೊಬ್ಬರಿಗೆ ನಿರ್ಮಾಪಕರು ಬಿಕಿನಿ ಧರಿಸುವಂತೆ ಹೇಳಿದ್ರಂತೆ. ಇದಕ್ಕೆ ಆ ನಟಿಯ ಪ್ರತಿಕ್ರಿಯೆ ಹೇಗಿತ್ತು? ಅಷ್ಟಕ್ಕೂ ಅದು ಯಾವ ಸಿನಿಮಾ? ಈ ಬಗ್ಗೆ ಇಲ್ಲಿದೆ ಮಾಹಿತಿ.

ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಯರ ಗ್ಲಾಮರ್ ಕೂಡಾ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಹಲವು ನಟಿಯರು ಬೆಳ್ಳಿತೆರೆಯಲ್ಲಿ ಬಿಕಿನಿ ಧರಿಸಿ ಮಿಂಚಿದ್ದಾರೆ. ಅವರಲ್ಲಿ ಕ್ರೇಜಿ ನಟಿ ಪ್ರಿಯಾಮಣಿ ಕೂಡ ಒಬ್ಬರು. ಪ್ರಿಯಾಮಣಿ ‘ದ್ರೋಣ’ ಎಂಬ ಸಿನಿಮಾದಲ್ಲಿ ಬಿಕಿನಿ ಧರಿಸಿದ್ದರು.

ನಿತಿನ್ ನಾಯಕರಾಗಿದ್ದ ‘ದ್ರೋಣ’ ಚಿತ್ರವನ್ನು ಕರುಣ ಕುಮಾರ್ ನಿರ್ದೇಶಿಸಿದ್ದರು. ಪ್ರಿಯಾಮಣಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾವನ್ನು ದೊಡ್ಡ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಆದರೂ, ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ನಿರಾಸೆ ಮೂಡಿಸಿತು. ಡಿ.ಎಸ್. ರಾವ್ ಈ ಚಿತ್ರದ ನಿರ್ಮಾಪಕರು. ಸಿನಿಮಾದ ಆ್ಯಕ್ಷನ್ ದೃಶ್ಯಗಳು ಮತ್ತು ಪ್ರಿಯಾಮಣಿ ಗ್ಲಾಮರ್ ಗಮನ ಸೆಳೆದಿದ್ದವು.

ಒಂದು ಹಾಡಿನಲ್ಲಿ ಪ್ರಿಯಾಮಣಿ ಸ್ವಿಮ್‌ಸೂಟ್ ಧರಿಸಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು. ಆದರೆ, ಮೊದಲು ಕಥೆ ಹೇಳುವಾಗ ಅವರಿಗೆ ಬಿಕಿನಿ ಬಗ್ಗೆ ಹೇಳಿರಲಿಲ್ಲವಂತೆ. ಶೂಟಿಂಗ್ ಶುರುವಾದ ನಂತರವೇ ಬಿಕಿನಿ ಹಾಡಿನ ಬಗ್ಗೆ ಹೇಳಲಾಯ್ತು. ಈ ವಿಚಾರವನ್ನು ನಿರ್ಮಾಪಕ ಡಿ.ಎಸ್. ರಾವ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಶೂಟಿಂಗ್ ಶುರುವಾದ ಮೇಲೆ ಪ್ರಿಯಾಮಣಿಗೆ ಬಿಕಿನಿ ಬಗ್ಗೆ ಕೇಳಿದೆವು. ಅವರು ಶಾಂತವಾಗಿಯೇ ಪ್ರತಿಕ್ರಿಯಿಸಿದರು. ನಿರ್ದೇಶಕರು, ‘ಈ ಹಾಡಿನಲ್ಲಿ ನೀವು ಬಿಕಿನಿ ಧರಿಸಿದರೆ ಚೆನ್ನಾಗಿರುತ್ತೆ’ ಅಂದರು. ಆಗ ಪ್ರಿಯಾಮಣಿ, ‘5 ನಿಮಿಷ ಸಮಯ ಕೊಡಿ, ಅಮ್ಮನನ್ನ ಕೇಳಿ ಬರ್ತೀನಿ’ ಎಂದು ಕ್ಯಾರವಾನ್‌ಗೆ ಹೋದರು.

ತಾಯಿಯೊಂದಿಗೆ ಚರ್ಚಿಸಿ, ತಕ್ಷಣವೇ ‘ನಾನು ರೆಡಿ’ ಎಂದು ಹೇಳಿದರು. ಆ ಸಮಯದಲ್ಲಿ ಪ್ರಿಯಾಮಣಿ ಒಳ್ಳೆಯ ಕ್ರೇಜ್‌ನಲ್ಲಿದ್ದ ನಟಿ. ಅವರು ಬೇಡ ಎಂದಿದ್ದರೆ ನಾವು ಏನೂ ಹೇಳುತ್ತಿರಲಿಲ್ಲ. ಆದರೂ ಪ್ರಿಯಾಮಣಿ ಚಿತ್ರಕ್ಕಾಗಿ ಒಪ್ಪಿಕೊಂಡರು. ಆಗ, ‘ಬಿಕಿನಿ ಧರಿಸಲು ಪ್ರಿಯಾಮಣಿ ಹೆಚ್ಚು ಹಣ ಕೇಳಿದರು’ ಎಂದು ಸಾಕಷ್ಟು ವದಂತಿಗಳು ಹಬ್ಬಿದ್ದವು. ಆದರೆ ಪ್ರಿಯಾಮಣಿ ಹಾಗೆ ಮಾಡಲಿಲ್ಲ. ಆ ಹಾಡಿನಲ್ಲಿ ಅವರು ಬಿಕಿನಿ ಧರಿಸಿದ್ದು ಚಿತ್ರಕ್ಕೆ ಪ್ಲಸ್ ಆಯಿತು ಎಂದು ನಿರ್ಮಾಪಕ ಡಿ.ಎಸ್. ರಾವ್ ಹೇಳಿದ್ದಾರೆ. ‘ಸ್ವಿಮ್ಮಿಂಗ್ ಪೂಲ್ ಹಾಡಿಗೆ ಸ್ವಿಮ್‌ಸೂಟ್ ಧರಿಸಲೇಬೇಕು, ಅದಕ್ಕೇ ನಾನು ಒಪ್ಪಿಕೊಂಡೆ’ ಎಂದು ಪ್ರಿಯಾಮಣಿ ಕೂಡ ಸಂದರ್ಶನವೊಂದರಲ್ಲಿ ಹೇಳಿದ್ದರು.

Source link

Leave a Reply

Your email address will not be published. Required fields are marked *