
ಬೆಂಗಳೂರು, (ಮಾರ್ಚ್ 06): ಕ್ಷುಲ್ಲಕ ವಿಚಾರಕ್ಕೆ ನಡೆದ ಮಾತಿನ ಚಕಮಕಿ, ನೋಡ-ನೋಡುತ್ತಿದ್ದ ಹಾಗೆ ಬಡಿದಾಡುವ ಹಂತಕ್ಕೆ ಹೋಗಿದೆ. ವ್ಯಾಯಾಮ ಮಾಡ್ತಿದ್ದ ಏಳೆಂಟು ಜನ ಹಿರಿಯ ನಾಗರೀಕರು(ಹಿರಿಯ ನಾಗರಿಕ) ಏಕಾಏಕಿ ನಾಯಿಯನ್ನು ವಾಕಿಂಗ್ ಮಾಡುತ್ತಿದ್ದ ವ್ಯಕ್ತಿ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಕೆಳಕ್ಕೆ ಉರುಳಿ ಬಿದ್ದರೂ ಸಹ ಬಿಡದೆ ಕಾಲಿನಿಂದ ಒದ್ದು ದೌರ್ಜನ್ಯ ಎದ್ದು. ಈ ಘಟನೆ ಬೆಂಗಳೂರು (ಬೆಂಗಳೂರು) ವರ್ತೂರಿನ ಬ್ರಿಗೇಡ್ ಈಥೋಪಿಯ ಈಸ್ಟ್ ಆಂಟೋಪಿಯ ಅಪಾರ್ಟ್ಮೆಂಟ್ ನಲ್ಲಿ ನಡೆದಿದ್ದು, ಗಲಾಟೆ ವೇಳೆ ಹಲ್ಲೆಗೊಳಗಾಗಿ ನೊಂದ ತರಣ್ ಎಂಬವರು ವರ್ತೂರು ಠಾಣೆಗೆ ದೂರು ನೀಡಿದ್ದಾರೆ.
ಹಿರಿಯರು ಗಲಾಟೆ ಮಾಡಿಕೊಂಡ್ಯಾಕೆ?
ವರ್ತೂರಿನ ಬ್ರಿಗೇಡ್ ಈಥೋಪಿಯ ಈಸ್ಟ್ ಆಂಟೊಪಿಯ ಅಪಾರ್ಟ್ಮೆಂಟ್ ಇಲ್ಲಿ ನೂರಾರು ಕುಟುಂಬಗಳು ವಾಸಮಾಡಿವೆ. ಮೊನ್ನೆ ತರುಣ್ ಆರೋರ ಎನ್ನುವವರು ತಮ್ಮ ಸಾಕು ನಾಯಿಯನ್ನು ವಾಕಿಂಗ್ ಮಾಡಲು ಹೊರಗೆ ಕರೆದುಕೊಂಡು ಬಂದಿದ್ದಾರೆ. ಇದೇ ಅಪಾರ್ಟ್ಮೆಂಟ್ ಜಾಗದಲ್ಲಿ ವಾಕಿಂಗ್, ಯೋಗ, ಮಾಡಲು ಜಾಗವನ್ನು ನಿಗದಿ ಮಾಡಿದ್ದಾರಂತೆ. ಇಲ್ಲಿಗೆ ನಾಯಿಯನ್ನು ಕರೆದುಕೊಂಡು ಬಂದು ಮೂತ್ರ ವಿಸರ್ಜನೆ ಮಾಡುತ್ತಿದ್ದರಂತೆ. ಆದರೆ, ತರುಣ್ ಬೇರೆ ಸ್ಥಳಕ್ಕೆ ಶ್ವಾನನನ್ನು ಕರೆದುಕೊಂಡು ಬಂದಿದ್ದಕ್ಕೆ ಕೆಲವರು ಗರಂ ಆಗಿದ್ದಾರೆ. ಇಲ್ಲಿಗೆ ಯಾಕೆ ನಾಯಿಯನ್ನು ಕರೆದುಕೊಂಡು ಬಂದ್ರಿ ಎಂದು ಕಿರಿಕ್ ಮಾಡಿ ಜಗಳಕ್ಕಿಳಿದಿದ್ದಾರೆ. ಬಳಿಕ ಮಾತಿಗೆ ಮಾತು ಬೆಳೆದು ಏಳೆಂಟು ಜನ ಸೀನಿಯರ್ ಸಿಟಿಜನ್ಸ್‌ಗೆ ಶ್ವಾನ ಮಾಲೀಕ ತರುಣ್ ಹಲ್ಲೆ ಮಾಡಿದ್ದಾರೆ. ಹೊಡೆದು, ಕಾಲಿನಿಂದ ಒದ್ದು ಕೆಳಗೆ ಬೀಳಿಸಿದ್ದಾರೆ. ಬಳಿಕ ಅವರಲ್ಲಿದ್ದ ಮಹಿಳೆ ಗಲಾಟೆಯನ್ನು ಬಿಡಿಸಿ ಕಳುಹಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ವಾಕಿಂಗ್ ಹೋದ ಮಹಿಳೆ 25 ಅಡಿ ಗುಂಡಿಗೆ ಬಿದ್ದು ಪರದಾಟ: ಪತ್ತೆ ಮಾಡಿ ರಕ್ಷಿಸಿದ್ದೇ ರೋಚಕ!
ದೂರು-ಪ್ರತಿದೂರು
ಗಲಾಟೆ ವೇಳೆ ಹಲ್ಲೆಗೊಳಗಾಗಿ ನೊಂದ ತರಣ್ ವರ್ತೂರು ಠಾಣೆಗೆ ದೂರು ನೀಡಿದ್ದಾರೆ. ಸಾಲದಕ್ಕೆ ಹಲ್ಲೆಗೊಳಗಾದ ತರುಣ್ ಅರೋರ್ ಈ ಪ್ಯಾಂಟ್ರಿ ರಸ್ತೆಯ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಹಲ್ಲೆ ಮಾಡಿದ ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಇದಾದ ಬಳಿ ಇತ್ತ ಮಹಿಳೆಯೊಬ್ಬರು ಇದಕ್ಕೆ ಪ್ರತಿದೂರು. ನಮ್ಮ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.ನಮ್ಮ ಮಕ್ಕಳು ವಿದೇಶದಲ್ಲಿ ನಾವಿಬ್ಬರೇ ಇದ್ದೇವೆ. ನನ್ನ ಕಡೆ ದೊಡ್ಡ ಗುಂಪಿದೆ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ ಎಂದು ಪ್ರತಿದೂರು ಹೇಳಿದೆ. ಸದ್ಯದ ಬಗ್ಗೆ ಎರಡು ಕಡೆಯವರಿಂದ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು,ಪ್ರತಿದೂರು ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಕರಣ ದಾಖಲಿಸಿದ್ದಾರೆ.
ಒಟ್ಟಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಶುರುವಾದ ಜಗಳ ಹಿರಿಯ ನಾಗರೀಕರ ಗಲಾಟೆ ಬಡಿದಾಟಕ್ಕೆ ಕಾರಣವಾಗಿದ್ದು,ಇದೀಗ ಠಾಣೆ ಮೆಟ್ಟಿಲೇರುವಂತೆ ಮಾಡಿದ್ದು ವಿಪರ್ಯಾಸವೇ ಸರಿ.