
ಸುಬ್ರಹ್ಮಣ್ಯ ಸ್ವಾಮಿಯ ಪ್ರಾರ್ಥನೆ ಮಾಡಿ. ದೇವಸ್ಥಾನಕ್ಕೆ ತೆರಳಿ ದರ್ಶನವನ್ನು ಮಾಡಿ. ಈ ದಿನ ಸಾಧ್ಯವಾದರೆ ಕೆಂಪು ಬಣ್ಣದ ಬಟ್ಟೆ ಧರಿಸಬೇಡಿ ಮತ್ತು ಮೌನವಾಗಿರಲು ಪ್ರಯತ್ನಿಸಿ.
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಸಂಗಾತಿಯ ಅನಾರೋಗ್ಯ ಸಮಸ್ಯೆಗಳು ಆತಂಕಕ್ಕೆ ಕಾರಣವಾಗುತ್ತವೆ. ಒಂದು ವೇಳೆ ವೈದ್ಯರ ಬಳಿ ತೋರಿಸಿಕೊಂಡರೂ ಸಮಸ್ಯೆ ಉಲ್ಬಣಗೊಂಡಿದೆ, ಆತಂಕ ಸೃಷ್ಟಿಯಾಗಬಹುದು. ನಿರಾಂತಕವಾಗಿ ಆಗಬಹುದು ಎಂದುಕೊಂಡಿದ್ದ ಕೆಲವು ಕೆಲಸಗಳಿಗೆ ಅಡೆತಡೆಗಳು ಕಾಣಿಸಿಕೊಳ್ಳಬಹುದು. ಇಷ್ಟು ಸಮಯ ನಿಮ್ಮ ಜತೆಗೂಡಿ ವ್ಯವಹಾರ ಮಾಡುವುದಾಗಿ ಭರವಸೆ ನೀಡಿದ್ದ ತನ್ನ ತೀರ್ಮಾನವನ್ನು ಬದಲಿಸಿಕೊಂಡಿದೆ ಎಂದು ಹೇಳಬಹುದು.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ನಿಮ್ಮ ಆಪ್ತರ ಜೊತೆಗೆ ಕೆಲವು ದಿನಗಳ ಮಟ್ಟಿಗೆ ಮಾತನ್ನೇ ಬಿಡುವ ಹಂತಕ್ಕೆ ಹೋಗಬಹುದು. ಸಲೂನ್ ಹೊಸದಾಗಿ ಶುರು ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಹಣಕಾಸಿನ ಅನುಕೂಲಗಳು ಒದಗಿ ಬರಲಿವೆ. ಮನೆಯ ಮಟ್ಟಿಗೆ ಮಾಡಬೇಕು ಎಂದುಕೊಂಡಿದ್ದ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಮಾಡುವ ಸನ್ನಿವೇಶ ಸೃಷ್ಟಿ ಆಗಲಿದೆ. ಉದ್ಯೋಗ ಬದಲಾವಣೆಗೆ ಕೆಲವು ಅವಕಾಶಗಳು ಇವೆ ಎಂಬ ಬಗ್ಗೆ ಸ್ನೇಹಿತರು ಗಮನಕ್ಕೆ ತರಲಿದ್ದಾರೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿಗಳು ವಿಪರೀತ ಭಾರವಾಗಿ ಕಾಡುವುದಕ್ಕೆ ಆರಂಭಿಸುತ್ತದೆ. ಇಷ್ಟು ಸಮಯದಲ್ಲಿ ಹಣ ನೀಡುತ್ತೇನೆ ಎಂದು ನೀವು ಯಾರಿಗಾದರೂ ಮಾತು ನೀಡಿದ್ದಲ್ಲಿ ಅದು ನೀಡಲು ಸಾಧ್ಯವಾಗಿಲ್ಲ ಅವರಿಂದ ನಿಂದೆ- ಆರೋಪಗಳನ್ನು ಕೇಳಿಸಿಕೊಳ್ಳಬೇಕಾಗಲಿದೆ. ಇನ್ನು ನಿಮ್ಮಲ್ಲಿ ಕೆಲವರಿಗೆ ನಿದ್ದೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು. ಕೆಟ್ಟ ಕನಸುಗಳು ಬೀಳಬಹುದು ಅಥವಾ ಪದೇ ಪದೇ ಎಚ್ಚರವಾಗಿ, ಪೂರ್ಣ ಪ್ರಮಾಣದಲ್ಲಿ ನಿದ್ದೆ ಮಾಡಲು ಸಾಧ್ಯವಾಗದಿರಬಹುದು.
ಲೇಖನ- ಸ್ವಾತಿ ಎನ್.ಕೆ.