
ಮೇಷ ರಾಶಿ:
ಅಧಿಕ ವಿಶ್ವಾಸದಿಂದ ಕಾರ್ಯದ ಹಾನಿಯಾಗಬಹುದು. ಆಪ್ತರನ್ನು ಅಸೂಯೆಯಿಂದ ಕಾಣುವುದು ನಿಮಗೆ ಶೋಭೆ ತರದು. ಕರ್ತವ್ಯಕ್ಕೆ ನಿಮ್ಮ ಮನಸ್ಸನ್ನು ಕೊಟ್ಟುಕೊಳ್ಳುವಿರಿ. ಸಂಗಾತಿಯ ಬಗ್ಗೆ ಸಂಶಯವನ್ನು ಅನ್ಯರ ಬಳಿ ವ್ಯಕ್ತಪಡಿಸಬಹುದು. ಆಲಸ್ಯದ ಪಟ್ಟದಿಂದ ಕೆಳಗಿಳಿಯುವುದು ಅಸಾಧ್ಯ. ಮಕ್ಕಳಿಂದ ನಿಮಗೆ ಧನಪ್ರಾಪ್ತಿಯ ಸಂಭವವಿದೆ. ನಿಮಗೆ ಗೊತ್ತಿರುವುದಷ್ಟೇ ಸತ್ಯವಾಗಿ ಇರದು. ಎಲ್ಲವನ್ನೂ ತಿಳಿದು ಸುಮ್ಮನಿರುವುದೇ ಲೇಸು ಎಂದೆನಿಸುವುದು.
ವೃಷಭ ರಾಶಿ:
ಉದ್ಯೋಗದ ಕಾರಣಕ್ಕೆ ಇಂದು ನೀವು ಪ್ರಯಾಣವನ್ನು ಮಾಡಬೇಕಾಗುವುದು. ಮಕ್ಕಳಿಂದ ಇಂದು ಹೆಚ್ಚು ನಿರೀಕ್ಷಿಸುವಿರಿ. ವೃತ್ತಿಯಲ್ಲಿ ಕಿರಿಕಿರಿ ಉಂಟಾಗಬಹುದು. ಮೆಚ್ಚುಗೆಯ ಮಾತುಗಳಿಂದ ದೂರವಾದ ಸಂಬಂಧವು ಹತ್ತಿರವಾಗಬಹುದು. ನಿಮ್ಮ’ ಚಿಂತನೆಯು ಸಫಲವಾಗಲು ಅಧಿಕ ಸಮಯವು ಬೇಕಾದೀತು.’ ಬದುಕು’ ಬಂಧನದಂತೆ ಅನ್ನಬಹುದು. ಮನಸ್ಸೂ ಸಂಕುಚಿತವಾಗಬಹುದು.
ಮಿಥುನ ರಾಶಿ:
ಎಲ್ಲ ಜವಾಬ್ದಾರಿಯನ್ನೂ ಮಕ್ಕಳಿಗೆ ವಹಿಸಿ ನೀವು ನಿಶ್ಚಿಂತರಾಗುವಿರಿ. ಮಿತವಾದ ಮಾತಿನಿಂದ ನಿಮಗೇ ಒಳ್ಳೆಯದು. ಉದ್ಯೋಗವನ್ನು ಬದಲಿಸಿದ ಕಾರಣ ಸಮಯವು ಓಡಾಟದಲ್ಲಿ ವ್ಯರ್ಥವಾಗುತ್ತದೆ. ಸಾಮಾಜಿಕ ಕಾರ್ಯಕ್ಕೆ ನಿಮಗೆ ಪ್ರಶಂಸೆಯು ಸಿಗುವುದು. ಇಂದು ನಿಮಗೆ ಅವ್ಯಕ್ತ ಭಯವು ಇರಲಿದೆ. ಸಹೋದರರು ನಿಮಗೆ ಧನ ಸಹಾಯವನ್ನು ಕೇಳಿದರೆ ಮಾಡಬಹುದು. ವಿಚಾರಗಳನ್ನು ಅತಿಯಾಗಿ ಆಲೋಚಿಸಿ ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ.
ಕರ್ಕಾಟಕ ರಾಶಿ:
ಸ್ವಾವಲಂಬನೆಯ ಕಾರಣಕ್ಕೆ ನಿಮ್ಮಲ್ಲೊಂದು ಹೊಸ ಆತ್ಮವಿಶ್ವಾಸ ಮೂಡಲಿದೆ. ಉದ್ಯೋಗದಾತರು ನಿಮ್ಮಿಂದ ನಿರೀಕ್ಷೆ ಮಾಡುವ ಬೆಂಬಲವನ್ನು ನೀಡಿದರೆ ಸಫಲರಾಗುತ್ತೀರಿ. ಇದರಿಂದ ಮೆಚ್ಚುಗೆಯ ಮಾತುಗಳು ಕೇಳಿಬರುತ್ತವೆ. ಉದ್ದೇಶಿತ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಬೇಕಾದೀತು. ಉತ್ತಮ ಸ್ನೇಹವನ್ನು ನೀವು ಕಳೆದುಕೊಳ್ಳುತ್ತೀರಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ಯೋಗ್ಯ ಚಿಕಿತ್ಸೆಯ ಅವಶ್ಯಕತೆ ಇದೆ.
ಸಿಂಹ ರಾಶಿ:
ನಿಮಗೆ ಗುರಿಯ ಕಡಗೆ ಮಾತ್ರ ನಿಮ್ಮ ಗಮನವಿರಲಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವುದು. ಕೂಡಿಟ್ಟ ಹಣವನ್ನು ಹಿಂಪಡೆಯುವ ನಿರ್ಧಾರಕ್ಕೆ ಬರಲಿದ್ದೀರಿ. ಗುರಿಯನ್ನು ಯಾರಾದರೂ ತಪದಪಿಸಬಹಿದಿ. ಇಷ್ಟ ಪಟ್ಟವರನ್ನು ಮದುವೆಯಾಗುವ ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವಿರಿ. ನಿಮ್ಮ ಹಿಂದಿನ ಆಸೆಗಳನ್ನು ಇಂದು ಪೂರೈಸಿಕೊಳ್ಳಿ. ಹಣವು ಸಿಗದೇ ನಿಮಗೆ ನಿರಾಸೆಯಾಗುವುದು. ಆರೋಗ್ಯವನ್ನು ಸುಧಾರಿಸಿಕೊಂಡು ಕೆಲಸದಲ್ಲಿ ಪ್ರವೃತ್ತರಾಗುವಿರಿ.
ಕನ್ಯಾ ರಾಶಿ:
ಹಣಕ್ಕಾಗಿ ಕಾದು ಸಮಯವೂ ಹಾಳು. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಯಾವುದೇ ಸ್ಪಷ್ಟನೆ ನೀಡಿದರೂ ಪ್ರಯೋಜನ ಆಗುವುದಿಲ್ಲ. ಸಹೋದ್ಯೋಗಿಗಳ ಜೊತೆಗೆ ಭಿನ್ನಾಭಿಪ್ರಾಯ ಸೃಷ್ಟಿಯಾಗುತ್ತದೆ. ನಿಮ್ಮ ವಿರುದ್ಧ ದೂರು ಹೇಳುವ ಸಾಧ್ಯತೆಯೂ ಇದೆ. ಕರ್ತವ್ಯಗಳನ್ನು ಮನಸ್ಸಿನಿಂದ ಮಾಡುವಿರಿ. ಒಡ ಹುಟ್ಟಿದವರ ಬಗ್ಗೆ ಅಸೂಯೆ ತೋರಿಸುವಿರಿ. ಇಂದು ನಿಮ್ಮ ಮನೋಬಲವು ದುರ್ಬಲವಾಗುತ್ತದೆ. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದೇ ಹೋದೀತು.
ತುಲಾ ರಾಶಿ:
ಕ್ರೀಡೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಿರಿ. ವೃತ್ತಿಗೆ ಸಂಬಂಧಿಸಿದ ಸಲಹೆಗಳನ್ನು ಪಡೆಯಿರಿ. ವಿದ್ಯುತ್ ಉಪಕರಣಗಳನ್ನು ಬಳಸುತ್ತಿರುವವರು ಇತರರಿಗೆ ಅದನ್ನು ನೀಡಬೇಕಾದೀತು. ನಿಮಗಿರುವ ಚಂಚಲ ಮನಸ್ಸಿನಿಂದ ನಕಾರಾತ್ಮಕ ಯೋಚನೆಗಳೇ ಕಾಣಿಸಬಹುದು. ಸಂಗಾತಿಯ ಆಯ್ಕೆಯನ್ನು ನಾನಾ ಕಾರಣದಿಂದ ಮುಂದೂಡುವುದು ಸರಿಯಾಗದು. ಸಂಗಾತಿಯ ಜೊತೆ ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸುವಿರಿ. ಆಸ್ತಿಯನ್ನು ಅನ್ಯರಿಗೆ ಕೊಡುವ ಚಿಂತನೆಯೂ ನಿಮ್ಮ ಮನಸ್ಸಿಗೆ ಬರಬಹುದು.
ವೃಶ್ಚಿಕ ರಾಶಿ:
ಸರಿಯಾದ ಸಮಯಕ್ಕೆ ಯೋಗ್ಯ ತೀರ್ಮಾನದಿಂದ ವ್ಯವಹಾರದಲ್ಲಿ ದೊಡ್ಡ ಪ್ರಮಾಣದ ನಷ್ಟವನ್ನು ತಪ್ಪಿಸಲು ಸಾಧ್ಯವಿಲ್ಲ. ಮಾತಿನ ಮೂಲಕ ಇತರರನ್ನು ಮೋದಿ ಮಾಡಲಿದ್ದೇನೆ. ದೈವಾನುಗ್ರಹ ನಿಮ್ಮ ಮೇಲಿರಲಿದೆ. ಆದರೂ ತೊಂದರೆಗೆ ಸಿಕ್ಕಿಕೊಳ್ಳಲು ನಿಮ್ಮ ಮೊಂಡುತನವೇ ಕಾರಣ. ನಿಮಗೆ ಪ್ರಶಂಸೆಯಿಂದ ಸಹೋದ್ಯೋಗಿಗಳು ತೊಂದರೆ ಕೊಡಬಹುದು. ಮಿತ್ರರು ನಿಮಗೆ ಬೇಕಾದ ಸಹಾಯ ಮಾಡಿದರೆ ಸ್ವಲ್ಪ ಆಲೋಚಿಸುತ್ತಾರೆ.’ ಮಕ್ಕಳ ವಿಚಾರದಲ್ಲಿ ನಿಷ್ಪಕ್ಷಪಾತಿಯಾಗುವುದು ಒಳ್ಳೆಯದು.
ಧನು ರಾಶಿ:
ಯೋಗ್ಯವಾಗಿ ದುಡಿಯುವ ನಿಮ್ಮ ಗುಣವು ಅಧಿಕಾರಿಗಳ ಗಮನಕ್ಕೆ ಬರಲಿದೆ ಎಂದು ಮೆಚ್ಚುಗೆಯ ನುಡಿಗಳು. ಬೇರೆಯವರಿಗೆ ನಿಮ್ಮ ಬಗ್ಗೆ ನಕಾರಾತ್ಮಕ ಭಾವವಿರಬಹುದು. ಗುರಿಯನ್ನು ಬದಲಿಸದೇ ಮುನ್ನುಗ್ಗಿ. ಮಕ್ಕಳಿಗೆ ಪ್ರೋತ್ಸಾಹವನ್ನು ಕೊಡುವಿರಿ. ಕುಟುಂಬದಲ್ಲಿ ಬಂದ ಭಿನ್ನಾಭಿಪ್ರಾಯವನ್ನು ನೀವು ಸರಿ ಮಾಡಲು ನೀವು ಸಮರ್ಥರಾಗುವಿರಿ. ಸಮೀಪದ ಬಂಧುಗಳ ವಿಯೋಗವೂ ಆಗಬಹುದು. ಸುಲಭಕ್ಕೆ ಸಿಗದ ವಸ್ತುಗಳನ್ನು ಬಲದಿಂದ ಪಡೆಯುವತ್ತ ಚಿಂತಿಸುವಿರಿ.
ಮಕರ ರಾಶಿ:
ಸಣ್ಣ ವಿಷಯಗಳಿಗೆ ಎಲ್ಲರನ್ನೂ ದೂಷಿಸುತ್ತಾ ಇರುವುದು ಉತ್ತಮ ನಾಯಕನ ಲಕ್ಷಣ ಅಲ್ಲ. ಉದ್ಯೋಗ ಸ್ಥಳದಲ್ಲಿನ ದೌರ್ಬಲ್ಯಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಡಿ. ಸೂಕ್ತ ಪರಿಹಾರದ ಕಡೆ ಗಮನವಿರಲಿ. ನಿವೃತ್ತಿಯ ಅಂಚಿನಲ್ಲಿದ್ದು ನಡತೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ವಿನೋದಕ್ಕೆಂದು ಆಡಿದ ಮಾತು ಗಂಭೀರಸ್ವರೂಪವನ್ನು ಪಡೆದೀತು. ನಿಮ್ಮವರೇ ನಿಮ್ಮ ಯಶಸ್ಸನ್ನು ಸಹಿಸದೆ ತೊಂದರೆ ಕೊಡುವರು. ಸರಿಯಾಗಿ ಹಣವನ್ನು ಸಂಗ್ರಹಿಸಿ, ಕೂಡಿಡಿ. ಸಾಲದಿಂದ ನೀವು ಮುಕ್ತ ಬೇಗರಾಗುವಿರಿ.
ಕುಂಭ ರಾಶಿ:
ಬಂಧುಗಳ ಒಡನಾಟ ನಿಮಗೆ ಸಿಗಲಿದೆ. ನಿಮ್ಮ ಅತಿಯಾದ ಉತ್ಸಾಹದಿಂದ ಮಹತ್ತರ ಮಾಹಿತಿಗಳು ಅಪಾತ್ರರನ್ನು ತಲುಪಿ ಮಹತ್ತರ ಅಪಾಯವನ್ನು ಕೊಡಬಹುದು. ಸ್ನೇಹಿತರ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳುವಿರಿ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು. ಶ್ರಮದಿಂದ ನ್ಯಾಯಾಲಯದಲ್ಲಿ ಗೆಲುವನ್ನು ಸಾಧಿಸುವಿರಿ. ನಿಮ್ಮಲ್ಲಿ ಅನಾರೋಗ್ಯದ ಭಯವು ಇರುವುದು. ಹಿರಿಯರಿಂದ ನಿಮ್ಮ ಜೀವನಕ್ಕೆ ಮಾರ್ಗದರ್ಶನ ಸಿಗಲಿದೆ.
ಮೀನ ರಾಶಿ:
ಹೊಸ ಯೋಜನೆಯಲ್ಲಿ ಮತ್ತಷ್ಟು ವಿಘ್ನಗಳಿವೆ. ನಿಶ್ಚಿತ ಆದಾಯದಲ್ಲಿ ಗಣನೀಯ ಇಳಿಕೆಯಾಗಿ, ಚಿಂತೆಗೆ ಕಾರಣವಾಯಿತು. ದಾಂಪತ್ಯದ ವಾಗ್ವಾದವು ಅತಿರೇಕಕ್ಕೆ ಹೋಗಬಹುದು. ಮಿತ್ರರು ನಿಮ್ಮಆಸಕ್ತಿಯ ಕ್ಷೇತ್ರವನ್ನು ಬದಲಿಸಬಹುದು. ವಾಹನವನ್ನು ಚಲಾಯಿಸುವಾಗ ಸ್ವಲ್ಪ ಎಚ್ಚರವಿರಲಿ. ಹೊಸ ವ್ಯಾಪಾರದಲ್ಲಿಯೂ ನಿಮಗೆ ಮನಸ್ಸಾಗಬಹುದು. ಯಂತ್ರಗಳಿಂದ ತೊಂದರೆಯಾಗಬಹುದು.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಕಾರ್ಯಕ್ರಮ : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಕುಂಭ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಚಿತ್ರಾ, ಯೋಗ : ವೃದ್ಧಿ, ಕರಣ : ಬಾಲವ, 06 ಸೂರ್ಯೋದಯ – 8 – 06 ಸೂರ್ಯ3 – ಆಂ 6 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:37 – 11:06, ಯಮಗಂಡ ಕಾಲ 14:05 – 15:34, ಗುಳಿಕ ಕಾಲ 06:39 – 08:08
-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)