Headlines

ದೋಸೆ ತಿನ್ನುವಾಗ ಕಾಲು ತಾಗಿದ್ದಕ್ಕೆ ಕೊಲೆಗೆದು ಪರಾರಿಯಾಗಿದ್ದ ಸಹೋದರರು ಅರೆಸ್ಟ್ | Bengaluru Crime | Bengaluru Hotel Murder Man Killed Loan Recovery Agent Hanamantanagar

ಬೆಂಗಳೂರಿನ ಬಸವೇಶ್ವರನಗರದ ಹೋಟೆಲ್‌ನಲ್ಲಿ ದೋಸೆ ತಿನ್ನುವಾಗ ಆಕಸ್ಮಿಕವಾಗಿ ಕಾಲು ತುಳಿದಿದ್ದಕ್ಕೆ ಸಾಲವಸೂಲಾತಿ ಏಜೆಂಟ್ ಶಶಿಕುಮಾರ್ ಅವರನ್ನು ಹತ್ಯೆ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಭಾಗ್ಯರಾಜ್ ಮತ್ತು ಮಂಜುನಾಥ್ ಎಂಬ ಸೋದರರನ್ನು ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು (ಮಾ.7): ಮೂರು ದಿನಗಳ ಹಿಂದೆ ಹೋಟೆಲ್‌ನಲ್ಲಿ ದೋಸೆ ತಿನ್ನುವ ವೇಳೆ ಆಕಸ್ಮಿಕವಾಗಿ ಕಾಲ್ತುಳಿದ ಕಾರಣಕ್ಕೆ ಸಾಲವಸೂಲಾತಿ ಏಜೆಂಟ್‌ ಶಶಿಕುಮಾರ್ (31) ಹತ್ಯೆ ಮಾಡಿದ್ದ ಸೋದರರನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಂಜುನಾಥ ನಗರದ ಭಾಗ್ಯರಾಜ್ ಹಾಗೂ ಆತನ ಸೋದರ ಮಂಜುನಾಥ್ ಬಂಧಿತರಾಗಿದ್ದು, ಮೂರು ದಿನಗಳ ಹಿಂದೆ

ಬಸವೇಶ್ವರನಗರದ ಗುರು ರಾಘವೇಂದ್ರ ಹೋಟೆಲ್‌ ನಲ್ಲಿ ಶಶಿಕುಮಾರ್ ದೋಸೆ ತಿನ್ನುವ ಈ ಕೃತ್ಯ ನಡೆದಿತ್ತು. ಹತ್ಯೆ ಬಳಿಕ ತಲೆಮರೆಸಿಕೊಂಡಿದ್ದ ಸೋದರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಖಾಸಗಿ ಸಾಲ ವಸೂಲಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಶಶಿ, ತನ್ನ ಕುಟುಂಬದ ಜತೆ ಮಂಜುನಾಥ ನಗರದಲ್ಲಿ ನೆಲೆಸಿದ್ದರು. ಮನೆ ಸಮೀಪದ ಹೋಟೆಲ್‌ಗೆ ಸೋಮವಾರ ರಾತ್ರಿ ದೋಸೆ ತಿನ್ನಲು ಅವರು ಹೋಗಿದ್ದರು. ಅದೇ ವೇಳೆ ಮಂಜುನಾಥ ಸಹ ಹೋಟೆಲ್‌ಗೆ ಹೋಗಿದ್ದ. ಆಗ ದೋಸೆ ತಿನ್ನುವಾಗ ಆಕಸ್ಮಿಕವಾಗಿ ಮಂಜುನಾಥ್ ಕಾಲನ್ನು ಶಶಿ ತುಳಿದಿದ್ದಾನೆ. ಈ ವಿಚಾರಕ್ಕೆ ಜಗಳವಾಗಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಕೊನೆಗೆ ಈ ಜಗಳವು ಕೊಲೆಯಲ್ಲಿ ಅಂತ್ಯವಾಗಿತ್ತು.

Source link

Leave a Reply

Your email address will not be published. Required fields are marked *