
2026ರ ಮಾರ್ಚ್ 7ರ ಶನಿವಾರದ ದ್ವಾದಶ ರಾಶಿಗಳ ಫಲಫಲವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಇಲ್ಲಿ ಪ್ರಸ್ತುತಪಡಿಸಿದ್ದಾರೆ. ಈ ದಿನ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಕೃಷ್ಣ ಪಕ್ಷ, ಚಿತ್ತಾ ನಕ್ಷತ್ರ, ವೃದ್ಧಿ ಯೋಗ, ಬಾಲವ ಕರಣವನ್ನು ಒಳಗೊಂಡಿರುತ್ತದೆ. ರಾಹುಕಾಲವು ಬೆಳಿಗ್ಗೆ 9.30 ರಿಂದ 11.00 ರ ತನಕ ಇದ್ದರೆ, ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲ ಮಧ್ಯಾಹ್ನ 2.00 ರಿಂದ 3.29 ರ ತನಕ ಇದೆ. ಶನಿ ಭಗವಾನ್, ವೆಂಕಟೇಶ್ವರ ಮತ್ತು ಹನುಮನ ಲಹರಿಗಳಿಗೆ ಇದು ಪರ್ವ ದಿನವಾಗಿದೆ. ರವಿ ಕುಂಭ ರಾಶಿ ಮತ್ತು ಚಂದ್ರ ತುಲಾ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ.