
‘ಧುರಂಧರ’ ಸಿನಿಮಾ ಸೂಪರ್ ಹಿಟ್ ಆಯಿತು. ಈಗ ಸೀಕ್ವೆಲ್ ‘ಧುರಂಧರ 2’ ರಿಲೀಸ್ ಗೆ ರೆಡಿ ಆಗುತ್ತಿದೆ. ಮಾರ್ಚ್ 19 ರಂದು ಸಿನಿಮಾ ವಿಶ್ವ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಈ ಟ್ರೇಲರ್ ಚಿತ್ರದ ಅಭಿಮಾನಿಗಳು ಕಾದಿದ್ದರು. ಇಂದು (ಮಾರ್ಚ್ 7) ಬೆಳಿಗ್ಗೆ 11.1ಕ್ಕೆ ಸಿನಿಮಾದ ಟ್ರೇಲರ್ ಬಿಡುಗಡೆ ಕಂಡಿದೆ. ಈ ಟ್ರೇಲರ್ ಬಳಿಕ ಸಿನಿಮಾ ನೋಡಿ ಯಾವ ರೀತಿಯಲ್ಲಿ ಇರಲಿದೆ ಎಂಬುದು ಸ್ಪಷ್ಟ ಚಿತ್ರಣ ಸಿಕ್ಕಿದೆ.
‘ಧುರಂಧರ’ ಚಿತ್ರವನ್ನು ಆದಿತ್ಯ ಧಾರ್ ನಿರ್ದೇಶನ ಮಾಡಿದ್ದಾರೆ. ಮೊದಲ ಚಿತ್ರ ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಈ ಸಿನಿಮಾ ಸೀಕ್ವೆಲ್ ಮೊದಲ ಭಾಗ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ‘ಧುರಂಧರ’ ಸಿನಿಮಾ ಕೆಲವ ಹಿಂದಿಯಲ್ಲಿ ಮಾತ್ರ ರಿಲೀಸ್ ಆಗುತ್ತಿದೆ. ಈಗ ‘ಧುರಂದರ್ 2’ ಸಿನಿಮಾ ಹಿಂದಿ ಜೊತೆಗೆ ಕನ್ನಡ ಮೊದಲಾದ ಭಾಷೆಗಳಲ್ಲಿ ರಿಲೀಸ್ ಆಗಲಿದೆ.
‘ಧುರಂಧರ’ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಪಾಕಿಸ್ತಾನಕ್ಕೆ ತೆರಳುತ್ತಾರೆ. ಅಲ್ಲಿ ಪಾಕಿಸ್ತಾನದವರಂತೆ ಇದ್ದು, ಸ್ಪೈ ಆಗಿ ಕೆಲಸ ಮಾಡುತ್ತಾರೆ. ಸಿನಿಮಾ ಭರ್ಜರಿ ಆ್ಯಕ್ಷನ್‌ಗಳನ್ನು ಒಳಗೊಂಡಿತ್ತು. ಕಂದಾಹಾರ್ ಹೈಜ್ಯಾಕ್, ಮುಂಬೈ ದಾಳಿ ಇತ್ಯಾದಿಗಳು ಒಳಗೊಂಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.