ದುಬೈ: 2025-27ನೇ ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆವೃತ್ತಿಯಲ್ಲಿ ಲಾರ್ಡ್ಸ್ ಟೆಸ್ಟ್ ಗೆಲುವಿನ ಹೊರತಾಗಿಯೂ ಇಂಗ್ಲೆಂಡ್ ತಂಡವು ಮೂರನೇ ಸ್ಥಾನಕ್ಕೆ ಕುಸಿದಿದೆ. ಯಾಕೆ ಹೀಗೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಭಾರತ ವಿರುದ್ಧ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಗೆದ್ದ ಹೊರತಾಗಿಯೂ ಇಂಗ್ಲೆಂಡ್ ತಂಡದ 2 ಅಂಕ ಕಡಿತಗೊಂಡಿದೆ. ನಿಧಾನಗತಿ ಬೌಲಿಂಗ್ನಿಂದಾಗಿ ಅಂಕ ಕಡಿತಗೊಳಿಸಿದ್ದಲ್ಲದೇ, ತಂಡದ ಎಲ್ಲಾ ಆಟಗಾರರಿಗೂ ಶೇಕಡಾ 10ರಷ್ಟು ದಂಡ ವಿಧಿಸಲಾಗಿದೆ.

ಲಾರ್ಡ್ಸ್ ಟೆಸ್ಟ್ನಲ್ಲಿ ಇಂಗ್ಲೆಂಡ್ ನಿಗದಿತ ಸಮಯಕ್ಕಿಂತ ಎರಡು ಓವರ್ಗಳನ್ನು ಕಡಿಮೆ ಬೌಲ್ ಮಾಡಿತ್ತು. ಐಸಿಸಿ ನಿಯಮದ ಪ್ರಕಾರ, ಪ್ರತಿ ತಡವಾದ ಓವರ್ಗೆ ಪಂದ್ಯದ ಶುಲ್ಕದ 5% ದಂಡ ಮತ್ತು ಚಾಂಪಿಯನ್ಶಿಪ್ನಲ್ಲಿ ಒಂದು ಪಾಯಿಂಟ್ ಕಡಿತಗೊಳಿಸಲಾಗುತ್ತದೆ.

ಇದರೊಂದಿಗೆ 2025-27ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ 3ನೇ ಸ್ಥಾನಕ್ಕೆ ಕುಸಿದಿದೆ. ಶೇಕಡಾ 66.67 ಗೆಲುವಿನ ಪ್ರತಿಶತ ಹೊಂದಿರುವ ತಂಡದ ಬಳಿ ಈಗ 22 ಅಂಕಗಳಿವೆ.

ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ 36 ಅಂಕಗಳೊಂದಿಗೆ ಶೇ.100 ಗೆಲುವಿನ ಪ್ರತಿಶತದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಶ್ರೀಲಂಕಾ 16 ಅಂಕಗಳೊಂದಿಗೆ (ಶೇ.66.67) 2ನೇ ಸ್ಥಾನದಲ್ಲಿದೆ.

ಇನ್ನು ಆಡಿರುವ 3 ಪಂದ್ಯಗಳ ಪೈಕಿ 2ರಲ್ಲಿ ಸೋತಿರುವ ಭಾರತ ತಂಡ 12 ಅಂಕಗಳೊಂದಿಗೆ ಶೇಕಡಾ 33.33 ಗೆಲುವಿನ ಪ್ರತಿಶತದೊಂದಿಗೆ 4ನೇ ಸ್ಥಾನಕ್ಕೆ ಕುಸಿದಿದೆ.

ಭಾರತ ತಂಡವು ಪ್ರಸಕ್ತ ಆವೃತ್ತಿಯಲ್ಲಿ ಬರ್ಮಿಂಗ್ಹ್ಯಾಮ್ ಟೆಸ್ಟ್ ಪಂದ್ಯವನ್ನು ಮಾತ್ರ ಜಯಿಸಿದೆ. ಇನ್ನು ಲೀಡ್ಸ್ ಹಾಗೂ ಲಾರ್ಡ್ಸ್ ಟೆಸ್ಟ್ನಲ್ಲಿ ಇಂಗ್ಲೆಂಡ್ ಎದುರು ಭಾರತ ಮುಗ್ಗರಿಸಿದೆ.

ಬಾಂಗ್ಲಾದೇಶ ಐದನೇ ಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್ ಆರನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಇನ್ನೂ ಯಾವುದೇ ಪಂದ್ಯಗಳನ್ನು ಆಡಿಲ್ಲ.

Source link
WTC Point Table:ಲಾರ್ಡ್ಸ್ ಟೆಸ್ಟ್ ಗೆದ್ದರೂ ಮೂರನೇ ಸ್ಥಾನಕ್ಕೆ ಕುಸಿದ ಇಂಗ್ಲೆಂಡ್, ಭಾರತ ಎಷ್ಟನೇ ಸ್ಥಾನದಲ್ಲಿದೆ?