Headlines

ಮೊದಲು ಹಿಂದೇಟು, ನಂತ್ರ ಒಪ್ಪಿಗೆ: ಕಾಂಗ್ರೆಸ್‌ಗೆ ಗುಡ್‌ನ್ಯೂಸ್ ನೀಡಿದ ಮಮತಾ ಬ್ಯಾನರ್ಜಿ

ಮೊದಲು ಹಿಂದೇಟು, ನಂತ್ರ  ಒಪ್ಪಿಗೆ: ಕಾಂಗ್ರೆಸ್‌ಗೆ ಗುಡ್‌ನ್ಯೂಸ್ ನೀಡಿದ ಮಮತಾ ಬ್ಯಾನರ್ಜಿ

ಮೊದಲು ಹಿಂದೇಟು, ನಂತ್ರ  ಒಪ್ಪಿಗೆ: ಕಾಂಗ್ರೆಸ್‌ಗೆ ಗುಡ್‌ನ್ಯೂಸ್ ನೀಡಿದ ಮಮತಾ ಬ್ಯಾನರ್ಜಿ

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ವಿರುದ್ಧ ವಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದು, ಕಾಂಗ್ರೆಸ್‌ ತನ್ನ ಸಂಸದರಿಗೆ ವಿಪ್ ಜಾರಿಗೊಳಿಸಿದೆ. ಆರಂಭದಲ್ಲಿ ಹಿಂದೇಟು ಹಾಕಿದ್ದ ಟಿಎಂಸಿ ಕೂಡಾ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದೆ.

ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ವಿರುದ್ಧ ವಿಪಕ್ಷಗಳ ಅವಿಶ್ವಾಸ ಗೊತ್ತುವಳಿ ಮಾ.9ರಿಂದ ಮಂಡನೆಯಾಗುವ ಸಾಧ್ಯತೆ ಹಿನ್ನೆಲೆ ಮಾ. 9-11ರ ತನಕ ಸಂಸತ್‌ ಅಧಿವೇಶನದಲ್ಲಿ ಕಡ್ಡಾಯ ಹಾಜರಿರುವಂತೆ ತನ್ನ ಸಂಸದರಿಗೆ ಕಾಂಗ್ರೆಸ್‌ ವಿಪ್‌ ಜಾರಿಗೊಳಿಸಿದೆ. ಈ ನಡುವೆ ಕಾಂಗ್ರೆಸ್‌ಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಗುಡ್‌ನ್ಯೂಸ್ ನೀಡಿದ್ದಾರೆ ಎಂದು ವರದಿಯಾಗಿದೆ.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯದಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಸದಸ್ಯರು ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್‌ಗೆ ಟಿಎಂಸಿ ಬೆಂಬಲ ಸಿಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಮೊದಲು ಟಿಎಂಸಿ ಸಂಸದರು ಅವಿಶ್ವಾಸ ನಿರ್ಣಯ ಸೂಚನೆಗೆ ಸಹಿ ಹಾಕಿರಲಿಲ್ಲ. ಆರಂಭದಲ್ಲಿ ಟಿಎಂಸಿ ನೇರವಾಗಿ ಅವಿಶ್ವಾಸ ನಿರ್ಣಯವನ್ನು ಮಂಡಿಸುವ ಬದಲು, ಮೊದಲು ಸ್ಪೀಕರ್‌ಗೆ ಪತ್ರ ಬರೆದು ಮೂರು ದಿನಗಳ ಕಾಲಾವಕಾಶ ನೀಡಬೇಕು ಎಂದು ವಾದಿಸಿತ್ತು. ಇದೀಗ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದೆ.

ಬಜೆಟ್ ಅಧಿವೇಶನದ ಮೊದಲ ಹಂತದ ಕೊನೆಯ ವಾರದಲ್ಲಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಓಂ ಬಿರ್ಲಾ ಅವರನ್ನು ಸ್ಪೀಕರ್ ಸ್ಥಾನದಿಂದ ತೆಗೆದುಹಾಕುವಂತೆ ಪ್ರಸ್ತಾವನೆಯ ನೋಟೀಸ್ ಸಲ್ಲಿಸಿದವು. ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತವು ಮಾರ್ಚ್ 9 ರಂದು ಪ್ರಾರಂಭವಾಗಲಿದ್ದು, ಆ ದಿನದಂದು ಈ ಪ್ರಸ್ತಾವನೆಯ ಬಗ್ಗೆ ಚರ್ಚಿಸುವ ಸಾಧ್ಯತೆಗಳಿವೆ

ಬಜೆಟ್‌ ಅಧಿವೇಶನದ ಎರಡನೇ ಅವಧಿಯು ಮಾ.9ರಿಂದ ಆರಂಭವಾಗಲಿದೆ. ಈ ಅವಧಿಯಲ್ಲಿ ಪಕ್ಷಪಾತಿಯಾಗಿ ವರ್ತಿಸಿದ್ದಾರೆ ಎಂಬ ಆರೋಪದ ಮೇಲೆ ವಿಪಕ್ಷಗಳು ಬಿರ್ಲಾ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಮಂಡನೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಕಾಂಗ್ರೆಸ್‌ ಮೊದಲ ಮೂರು ದಿನಗಳವರೆಗೆ ಎಲ್ಲಾ ಸಂಸದರು ಸಂಸತ್ತಿನ ಕೆಳಮನೆಯಲ್ಲಿ ಹಾಜರಿರಬೇಕು ಎಂದು ವಿಪ್‌ ನೀಡಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಓದಿದ ಹುಡುಗ, ಮಾಜಿ ಮೇಯರ್‌ ಬಾಲೆನ್‌ ಷಾ ನೇಪಾಳದ ಮುಂದಿನ ಪ್ರಧಾನಿ

541 ಸದಸ್ಯ ಬಲದ ಲೋಕಸಭೆಯಲ್ಲಿ ಆಡಳಿತಾರೂಢ ಎನ್‌ಡಿಎ 293 ಸಂಸದರನ್ನು ಹೊಂದಿದೆ. ಹಾಗಾಗಿ ವಿರೋಧ ಪಕ್ಷಗಳ ಅವಿಶ್ವಾಸ ಗೊತ್ತುವಳಿಗೆ ಸೋಲಾಗೋದು ಬಹುತೇಕ ಖಚಿತ. ಆದರೂ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಅವಿಶ್ವಾಸ ಗೊತ್ತುವಳಿ ಮಂಡಿಸಿವೆ. ಆರಂಭದಲ್ಲಿ ಕೆಲವು ವಿರೋಧ ಪಕ್ಷಗಳು ಸ್ಪೀಕರ್ ಅವರನ್ನು ಬೆಂಬಲಿಸಲು ನಿರಾಕರಿಸಿದ್ದವು. ವಿರೋಧ ಪಕ್ಷದ ಹೊರಗಿನಿಂದ ಸ್ಪೀಕರ್ ಅವರಿಗೆ ಬೆಂಬಲ ಸಿಗಬಹುದು ಎಂದು ಆಡಳಿತರೂಢ ಪಕ್ಷ ಭಾವಿಸಿತ್ತು. ಮೇಲ್ನೋಟಕ್ಕೆ ವಿಪಕ್ಷಗಳು ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾದಂತೆ ಕಾಣಿಸುತ್ತಿದೆ.

ಇದನ್ನೂ ಓದಿ: Karnataka Budget 2026: ಅಲ್ಪಸಂಖ್ಯಾತರಿಗೆ ಬಂಪರ್ ಗಿಫ್ಟ್, ಬಡಮಕ್ಕಳಿಗೆ ಲ್ಯಾಪ್‌ಟಾಪ್, ಶಿಕ್ಷಣ, ಉದ್ಯೋಗ, ಮಹಿಳೆಯರಿಗೆ ಹಲವು ಯೋಜನೆಗಳು!

Source link

Leave a Reply

Your email address will not be published. Required fields are marked *