
ಮೈಸೂರು ರೇಷ್ಮೆಯಲ್ಲಿ ಮಿಂಚಿದ ತೆಲಂಗಾಣದ ಸೊಸೆ:
ಮಾರ್ಚ್ 4ರಂದು ನಡೆದ ಅದ್ದೂರಿ ಆರತಕ್ಷತೆ ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ ಅವರ ಉಡುಪಿನ ಆಯ್ಕೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ರಶ್ಮಿಕಾ ತೆಲಂಗಾಣದ ಮನೆಗೆ ಸೊಸೆಯಾಗಿ ಹೋಗಿದ್ದರೂ, ತಮ್ಮ ಮೂಲವನ್ನು ಮಾತ್ರ ಮರೆತಿಲ್ಲ. ಈ ವಿಶೇಷ ದಿನದಂದು ಅವರು ಕರ್ನಾಟಕದ ಹೆಮ್ಮೆಯ ‘ಮೈಸೂರು ಸಿಲ್ಕ್’ ಸೀರೆಯನ್ನು ಉಟ್ಟು ಕಂಗೊಳಿಸಿದರು. ಅಷ್ಟೇ ಅಲ್ಲದೆ, ಆ ಸೀರೆಯ ಮೇಲೆ ಕರ್ನಾಟಕ ಸರ್ಕಾರದ ಲಾಂಛನವಾದ ‘ಗಂಡಭೇರುಂಡ’ ಚಿತ್ರದ ಎಂಬ್ರಾಯ್ಡರಿ ಇದ್ದದ್ದು ಕನ್ನಡಿಗರ ಅಭಿಮಾನವನ್ನು ಇಮ್ಮಡಿಗೊಳಿಸಿದೆ.