Headlines

ಭಾರತದ ಪೋಸ್ಟ್‌ ಆಫೀಸ್‌ನ 38 ಕೋಟಿ ಖಾತೆಯಲ್ಲಿದೆ ಕರ್ನಾಟಕ ಬಜೆಟ್‌ನ ಐದು ಪಟ್ಟು ಹಣ!

ಭಾರತದ ಪೋಸ್ಟ್‌ ಆಫೀಸ್‌ನ 38 ಕೋಟಿ ಖಾತೆಯಲ್ಲಿದೆ ಕರ್ನಾಟಕ ಬಜೆಟ್‌ನ ಐದು ಪಟ್ಟು ಹಣ!

ಭಾರತದ ಪೋಸ್ಟ್‌ ಆಫೀಸ್‌ನ 38 ಕೋಟಿ ಖಾತೆಯಲ್ಲಿದೆ ಕರ್ನಾಟಕ ಬಜೆಟ್‌ನ ಐದು ಪಟ್ಟು ಹಣ!

ಭಾರತೀಯ ಅಂಚೆ ಇಲಾಖೆಯು 38 ಕೋಟಿ ಉಳಿತಾಯ ಖಾತೆಗಳಲ್ಲಿ ₹22 ಲಕ್ಷ ಕೋಟಿ ಸಂಗ್ರಹಿಸಿ ದೇಶದ ಪ್ರಮುಖ ಆರ್ಥಿಕ ಕೇಂದ್ರವಾಗಿ ಹೊರಹೊಮ್ಮಿದೆ. ಸುಕನ್ಯಾ ಸಮೃದ್ಧಿ ಯೋಜನೆಯು 3.8 ಕೋಟಿ ಖಾತೆಗಳೊಂದಿಗೆ ಯಶಸ್ವಿಯಾಗಿದ್ದು, ಇಲಾಖೆಯು ಡ್ರೋನ್‌ ಮತ್ತು RFID ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ.

ಭಾರತೀಯ ಅಂಚೆ ಇಲಾಖೆಯು ದೇಶದ ಜನಸಾಮಾನ್ಯರ ಆರ್ಥಿಕ ಭದ್ರತೆಯ ಅತಿ ದೊಡ್ಡ ಕೇಂದ್ರವಾಗಿ ಹೊರಹೊಮ್ಮಿದೆ. ಪ್ರಸ್ತುತ ಅಂಚೆ ಇಲಾಖೆಯಲ್ಲಿ ಸುಮಾರು 38 ಕೋಟಿ ಉಳಿತಾಯ ಖಾತೆಗಳಿದ್ದು, ಅವುಗಳಲ್ಲಿ ₹22 ಲಕ್ಷ ಕೋಟಿ ಹಣ ಸಂಗ್ರಹವಾಗಿದೆ ಎಂದು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದರು.

ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ರೂಪಿಸಲಾದ ‘ಸುಕನ್ಯಾ ಸಮೃದ್ಧಿ ಯೋಜನೆ’ಗೆ (SSY) ದೇಶಾದ್ಯಂತ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಇದರಲ್ಲಿ ಒಟ್ಟು ಖಾತೆಗಳ ಸಂಖ್ಯೆ 3.8 ಕೋಟಿ ದಾಟಿದ್ದು, ಒಟ್ಟು ಠೇವಣಿ ಮೊತ್ತ ₹2.27 ಲಕ್ಷ ಕೋಟಿ ರೂಪಾಯಿ ಆಗಿದೆ ಎಂದು ಸಿಂಧಿಯಾ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಶುಕ್ರವಾರ ಕರ್ನಾಟಕ ಬಜೆಟ್‌ ಮಂಡನೆ ಮಾಡಿದರು. ಬರೋಬ್ಬರಿ 4.48 ಲಕ್ಷ ಕೋಟಿಯ ಬಜೆಟ್‌ ಗಾತ್ರ ಇದಾಗಿತ್ತು. ಇದರ ನಡುವೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಇತ್ತೀಚೆಗೆ ಮಾಹಿತಿ ನೀಡಿದ್ದು, ದೇಶದ ಪೋಸ್ಟ್‌ ಆಫೀಸ್‌ನಲ್ಲಿ ಒಟ್ಟು 38 ಕೋಟಿ ಉಳಿತಾಯ ಖಾತೆಗಳಿದ್ದು, ಇದರಲ್ಲಿ ಬರೋಬ್ಬರಿ 22 ಲಕ್ಷ ಕೋಟಿ ಮೊತ್ತವಿದೆ ಎಂದಿದ್ದಾರೆ. ಇದು ಕರ್ನಾಟಕ ಬಜೆಟ್‌ನ ಐದು ಪಟ್ಟು ಹೆಚ್ಚಿನ ಹಣ ಎನಿಸಿದೆ.

ಅಂಚೆ ಸೇವೆಯನ್ನು ಮತ್ತಷ್ಟು ವೇಗಗೊಳಿಸಲು ಇಲಾಖೆಯು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಸಿಂಧಿಯಾ ಹೇಳಿದ್ದಾರೆ.ಕನ್ವೇಯರ್ ಸಿಸ್ಟಮ್‌ಗಳು, ಸೈಂಟಿಫಿಕ್ ಸಾರ್ಟಿಂಗ್, ಆರ್‌ಎಫ್‌ಐಡಿ (RFID), ಬಾರ್‌ಕೋಡ್‌ಗಳು ಮತ್ತು ಕ್ಯೂಆರ್ (QR) ಕೋಡ್‌ಗಳ ಬಳಕೆಯ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ.

ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಅಂಚೆ ಪಾರ್ಸೆಲ್‌ಗಳನ್ನು ತಲುಪಿಸಲು ಇನ್ಮುಂದೆ ಡ್ರೋನ್‌ಗಳನ್ನು ಬಳಸಲಾಗುವುದು ಎಂದು ಸಿಂಧಿಯಾ ಹೇಳಿದ್ದಾರೆ. ಪ್ರಧಾನಿ ಮೋದಿ ಅವರ "ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆ" (Reform, Perform and Transform) ಮಂತ್ರದೊಂದಿಗೆ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

ದೇಶಾದ್ಯಂತ 1.65 ಲಕ್ಷ ಅಂಚೆ ಕಚೇರಿಗಳಿದ್ದು, 4.5 ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಹಿಂದೆ ಸುಮಾರು 1 ಲಕ್ಷ ಅಂಚೆ ಕಚೇರಿಗಳಲ್ಲಿ ಯಾವುದೇ ವ್ಯವಹಾರಗಳು (Nil transactions) ನಡೆಯುತ್ತಿರಲಿಲ್ಲ. ಆದರೆ, ನಿರಂತರ ಮೇಲ್ವಿಚಾರಣೆಯಿಂದಾಗಿ ಅಂತಹ ಕಚೇರಿಗಳ ಸಂಖ್ಯೆ ಈಗ ಕೇವಲ 1,500ಕ್ಕೆ ಇಳಿಕೆಯಾಗಿದೆ.

Source link

Leave a Reply

Your email address will not be published. Required fields are marked *