ನಟ ದಳಪತಿ ವಿಜಯ್ ಅವರಿಂದ ವಿಚ್ಛೇದನ ಕೋರಿರುವ ಪತ್ನಿ ಸಂಗೀತಾ, ಇದೀಗ ವಾಸಕ್ಕೆ ಮನೆ ನೀಡುವಂತೆ ನ್ಯಾಯಾಲಯಕ್ಕೆ ಹೊಸ ಅರ್ಜಿ ಸಲ್ಲಿಸಿದ್ದಾರೆ. ಚೆನ್ನೈನ ನೀಲಾಂಕರೈ ಮನೆಯಲ್ಲಿರಲು ವಿಜಯ್ ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ತಮಿಳು ನಟ ಹಾಗೂ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷದ ಅಧ್ಯಕ್ಷ ದಳಪತಿ ವಿಜಯ್ ಅವರ ಪತ್ನಿ ಸಂಗೀತಾ, ವಿಚ್ಛೇದನ ಅರ್ಜಿಯ ಬೆನ್ನಲ್ಲೇ ಈಗ ಮತ್ತೊಂದು ಹೊಸ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ವಾಸಕ್ಕೆ ಮನೆ ಕೇಳಿದ್ದಾರೆ ಎಂದು ವರದಿಯಾಗಿದೆ.

ಕೇಸ್ ಇತ್ಯರ್ಥವಾಗುವವರೆಗೂ ಚೆನ್ನೈನ ನೀಲಾಂಕರೈನಲ್ಲಿರುವ ಮನೆಯಲ್ಲಿ ತಾನು ವಾಸಿಸಲು ಅನುಮತಿ ನೀಡಬೇಕು ಎಂದು ಸಂಗೀತಾ ತಮ್ಮ ಹೊಸ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. "ನಾನು ಯುಕೆಯಲ್ಲಿ ವಾಸಿಸುತ್ತಿದ್ದೆ, ಹಾಗಾಗಿ ಚೆನ್ನೈನಲ್ಲಿ ನನಗೆ ಬೇರೆ ಮನೆ ಇಲ್ಲ. ಒಬ್ಬ ಪತ್ನಿಯಾಗಿ, ತಾಯಿಯಾಗಿ ನನ್ನ ಎಲ್ಲಾ ಜವಾಬ್ದಾರಿಗಳನ್ನು ನಾನು ಪೂರೈಸಿದ್ದೇನೆ. ಆದರೆ ಈಗ ವಿಜಯ್ ನನ್ನನ್ನು ಮನೆಯಲ್ಲಿರಲು ಬಿಡುತ್ತಿಲ್ಲ" ಎಂದು ಸಂಗೀತಾ ಅರ್ಜಿಯಲ್ಲಿ ದೂರಿದ್ದಾರೆ.

ಒಂದು ವೇಳೆ ಆ ಮನೆಯಲ್ಲಿ ಇರಲು ಸಾಧ್ಯವಾಗದಿದ್ದರೆ, ವಿಜಯ್ ಅವರ ಸ್ಥಾನಮಾನಕ್ಕೆ ತಕ್ಕಂತೆ ತನಗೆ ಬೇರೊಂದು ಮನೆಯ ವ್ಯವಸ್ಥೆ ಮಾಡಿಕೊಡಬೇಕು ಎಂದೂ ಅವರು ಕೇಳಿದ್ದಾರೆ. "ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿರುವ ವಿಜಯ್, ತನಗೂ ಮತ್ತು ಮಕ್ಕಳಿಗೂ ನ್ಯಾಯಯುತವಾಗಿ ಸಿಗಬೇಕಾದದ್ದನ್ನು ನೀಡಬೇಕು" ಎಂದೂ ಸಂಗೀತಾ ತಮ್ಮ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.

ವಿಜಯ್, ಶುಕ್ರವಾರ ನಟಿ ತ್ರಿಶಾ ಕೃಷ್ಣನ್ ಅವರೊಂದಿಗೆ ಒಂದೇ ಕಾರಿನಲ್ಲಿ ಬಂದಿಳಿದು, ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ವಿಜಯ್‌ರ ಪತ್ನಿ ಸಂಗೀತ ಇತ್ತೀಚೆಗಷ್ಟೇ, ತಮ್ಮ ಪತಿ ಇನ್ನೊಬ್ಬಾಕೆಯೊಂದಿಗೆ ಸಂಬಂಧ ಹೊಂದಿದ್ದಾರೆಂದು ದೂರಿ, ವಿಚ್ಛೇದನಕ್ಕೆ ಕೋರಿ ಕೋರ್ಟ್‌ಗೆ ಹೋಗಿದ್ದರು. ಇದರ ಬೆನ್ನಲ್ಲೇ ವಿಜಯ್ ಮತ್ತು ತ್ರಿಶಾ ಮ್ಯಾಚಿಂಗ್ ಉಡುಗೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಣ್ಣಾಮಲೈ ‘ಕಿಂಗ್ ಮೇಕರ್’ ಗೇಮ್‌ಪ್ಲ್ಯಾನ್; AIDMK ಪಾಳಯದಲ್ಲಿ ನಡುಕ! BJP ಹೇಳಿದ್ದೇನು?

27 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಲು ಮುಂದಾಗಿರುವ ವಿಜಯ್ ಮತ್ತು ಸಂಗೀತಾ ಡಿವೋರ್ಸ್ ನ್ಯೂಸ್ ತಮಿಳುನಾಡು ಸಿನಿ ಮತ್ತು ರಾಜಕೀಯ ಅಂಗಳದಲ್ಲಿ ಹೆಚ್ಚು ಸದ್ದು ಮಾಡ್ತಿದೆ. ಕೆಲ ವರದಿಗಳ ಪ್ರಕಾರ, ವಿಜಯ್ ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿಕೊಳ್ಳಲು ಯೋಚಿಸುತ್ತಿದ್ದಾರೆ ಮತ್ತು ಅವರಿಗೆ 250 ಕೋಟಿ ರೂಪಾಯಿಗಳ ಜೀವನಾಂಶ ನೀಡುತ್ತಿದ್ದಾರೆ ಎನ್ನಲಾಗಿದೆ. ಈ ನಡುವೆ ಮನೆ ನೀಡುವಂತೆ ಸಂಗೀತಾ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಮೊದಲು ಹಿಂದೇಟು, ನಂತ್ರ ಒಪ್ಪಿಗೆ: ಕಾಂಗ್ರೆಸ್‌ಗೆ ಗುಡ್‌ನ್ಯೂಸ್ ನೀಡಿದ ಮಮತಾ ಬ್ಯಾನರ್ಜಿ

Source link
ದಳಪತಿ ವಿಜಯ್‌ಗೆ ಶಾಕ್: ಮನೆಯಲ್ಲಿರಲು ಬಿಡ್ತಿಲ್ಲ, ಗಂಡನಿಂದ ಸಂಗೀತಾ ಗಂಭೀರ ಆರೋಪ