Headlines

ಬಿಗ್ ಬಾಸ್ ಸ್ಪರ್ಧಿ ಡಾಗ್ ಸತೀಶ್ ಕೆಣಕಿ 3ನೇ ಕೇಸ್ ಹಾಕಿಸಿಕೊಂಡ ರಜತ್ ಕಿಶನ್; ಪೊಲೀಸರಿಂದ ನೊಟೀಸ್ ಜಾರಿ | Bigg Boss Ex Contestant Rajath Kishan Fir Dog Satish Friend Threat Case Sat

ಬಿಗ್ ಬಾಸ್ ಸ್ಪರ್ಧಿ ಡಾಗ್ ಸತೀಶ್ ಕೆಣಕಿ 3ನೇ ಕೇಸ್ ಹಾಕಿಸಿಕೊಂಡ ರಜತ್ ಕಿಶನ್; ಪೊಲೀಸರಿಂದ ನೊಟೀಸ್ ಜಾರಿ | Bigg Boss Ex Contestant Rajath Kishan Fir Dog Satish Friend Threat Case Sat



ಬಿಗ್ ಬಾಸ್ ಸ್ಪರ್ಧಿ ಡಾಗ್ ಸತೀಶ್ ಕೆಣಕಿ 3ನೇ ಕೇಸ್ ಹಾಕಿಸಿಕೊಂಡ ರಜತ್ ಕಿಶನ್; ಪೊಲೀಸರಿಂದ ನೊಟೀಸ್ ಜಾರಿ | Bigg Boss Ex Contestant Rajath Kishan Fir Dog Satish Friend Threat Case Sat

ಬಿಗ್ ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಅಲಿಯಾಸ್ ಬುಜ್ಜಿ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ‘ಡಾಗ್ ಸತೀಶ್’ ಅವರ ಸ್ನೇಹವನ್ನು ಬಿಡುವಂತೆ ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಅವರಿಗೆ ಫೋನ್ ಕರೆ ಹಾಗೂ ವಾಟ್ಸಾಪ್ ಮೂಲಕ ಪ್ರಾಣ ಬೆದರಿಕೆ ಹಾಕಿದ ಆರೋಪ ಅವರ ಮೇಲಿದೆ.

ಬೆಂಗಳೂರು (ಮಾ.07): ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ರಜತ್ ಕಿಶನ್ ಅಲಿಯಾಸ್ ಬುಜ್ಜಿ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಇದು ಯಾವುದೇ ಸಿನಿಮಾದ ವಿಚಾರಕ್ಕಲ್ಲ, ಬದಲಾಗಿ ಪೊಲೀಸರ ನೋಟಿಸ್ ವಿಚಾರಕ್ಕಾಗಿ! ಬಿಗ್ ಬಾಸ್ ಮನೆಯ ಮತ್ತೊಬ್ಬ ಸ್ಪರ್ಧಿ ‘ಡಾಗ್ ಸತೀಶ್’ ಅವರ ಸ್ನೇಹವನ್ನು ಬಿಡುವಂತೆ ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ರಜತ್ ವಿರುದ್ಧ ಈಗ ಎಫ್‌ಐಆರ್ ದಾಖಲಾಗಿದೆ. ಇದೀಗ ಡಾಗ್ ಸತೀಶ್ ಸ್ನೇಹಿತ ಗಿರೀಶ್‌ ಕುಮಾರ್‌ಗೆ ನೊಟೀಸ್ ನೀಡಿದ್ದು, ಅವರು ಸಾಕ್ಷಿ ಕೊಟ್ಟ ನಂತರ ರಜತ್‌ಗೆ ನೊಟೀಸ್ ಜಾರಿ ಮಾಡಲಾಗುತ್ತದೆ.

ಏನಿದು ಘಟನೆ?

ಸಾಮಾಜಿಕ ಕಾರ್ಯಕರ್ತ ಹಾಗೂ ‘ಡಾಗ್ ಸತೀಶ್’ ಅವರ ಆಪ್ತ ಸ್ನೇಹಿತರಾದ ಗಿರೀಶ್ ಕುಮಾರ್ ಎಂಬುವವರು ರಜತ್ ಕಿಶನ್ ವಿರುದ್ಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಜತ್ ಅವರು ತಮಗೆ ಫೋನ್ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮತ್ತು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಗಿರೀಶ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ನಾವೇ ಒಳಗೆ ಕಳಿಸಬೇಕಾ? – ಬೆದರಿಕೆ ಸಂದೇಶ:

ಗಿರೀಶ್ ಕುಮಾರ್ ಅವರ ಕಾರಿನ ಫೋಟೋವನ್ನು ತೆಗೆದು ಅವರಿಗೆ ವಾಟ್ಸಾಪ್ ಮೂಲಕ ಕಳುಹಿಸಿರುವ ರಜತ್, ‘Sir this is Rajat Buji, call maadtidini call back madthira… illa nave olage kalusbeka?’ (ಸರ್ ನಾನು ರಜತ್ ಬುಜ್ಜಿ ಮಾತಾಡ್ತಿರೋದು, ಕಾಲ್ ಬ್ಯಾಕ್ ಮಾಡ್ತೀರಾ ಅಥವಾ ನಾವೇ ಯಾರನ್ನಾದರೂ ಒಳಗೆ ಕಳಿಸಬೇಕಾ?) ಎಂದು ಸಂದೇಶ ಕಳುಹಿಸಿ ಬೆದರಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಕಾನ್ಫರೆನ್ಸ್ ಕಾಲ್‌ನಲ್ಲಿ ಮಾತನಾಡುವಾಗ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪೊಲೀಸ್ ತನಿಖೆ ಚುರುಕು:

ದೂರಿನ ಆಧಾರದ ಮೇಲೆ ಕೆ.ಆರ್.ಪುರಂ ಪೊಲೀಸರು ರಜತ್ ಕಿಶನ್ ಮತ್ತು ಕಿರಣ್ ಎಂಬುವವರ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 351(2) ಮತ್ತು 352 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಪೊಲೀಸರು ಈಗಾಗಲೇ ದೂರುದಾರ ಗಿರೀಶ್ ಕುಮಾರ್ ಅವರಿಗೆ ನೋಟಿಸ್ ನೀಡಿದ್ದಾರೆ. ಬೆದರಿಕೆ ಹಾಕಲಾದ ಆಡಿಯೋ ರೆಕಾರ್ಡಿಂಗ್, ವಾಟ್ಸಾಪ್ ಮೆಸೇಜ್‌ಗಳು ಮತ್ತು ಕಾರಿನ ಫೋಟೋಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಒದಗಿಸುವಂತೆ ಸೂಚಿಸಿದ್ದಾರೆ.

ಸಿಎಂ ಬಂದ್ರೂ ಡಿಲೀಟ್​ ಮಾಡಲ್ಲ, ಅವ್ರಾ- ನಾನಾ ನೋಡ್ತೇನೆ, ನಾನು ಮೀಟರ್​ ಇರೋನು ಎಂದ Dog Satish

ರಜತ್ ಕಿಶನ್‌ಗೆ ನೋಟಿಸ್ ಸಿದ್ಧತೆ:

ದೂರುದಾರರು ನೀಡುವ ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರ, ಕರೆಯಲ್ಲಿ ಮಾತನಾಡಿರುವ ಧ್ವನಿ ರಜತ್ ಅವರದ್ದೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಶೀಘ್ರದಲ್ಲೇ ರಜತ್ ಕಿಶನ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ಡಾಗ್ ಸತೀಶ್’ ಜೊತೆಗಿನ ಹಳೆ ದ್ವೇಷವೇ ಈ ಬೆದರಿಕೆಗೆ ಕಾರಣವೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.

ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕುತ್ತಿರುವ ರಜತ್ ಕಿಶನ್‌ಗೆ ಈ ಹೊಸ ಕೇಸ್ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಮಾಜದಲ್ಲಿ ಸ್ಟಾರ್ ಇಮೇಜ್ ಹೊಂದಿರುವವರು ಇಂತಹ ವರ್ತನೆ ತೋರುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.



Source link

Leave a Reply

Your email address will not be published. Required fields are marked *