ಅಹಂಕಾರ ಬಿಟ್ಟು ಕೇಂದ್ರದ ಜೊತೆ ಕೆಲಸ ಮಾಡಿ: ಸಿಎಂ ಸಿದ್ದರಾಮಯ್ಯಗೆ ಸೋಮಣ್ಣ ಕಿವಿಮಾತು | V Somanna Criticism Siddaramaiah Budget Karnataka Gvd

ಅಹಂಕಾರ ಬಿಟ್ಟು ಕೇಂದ್ರದ ಜೊತೆ ಕೆಲಸ ಮಾಡಿ: ಸಿಎಂ ಸಿದ್ದರಾಮಯ್ಯಗೆ ಸೋಮಣ್ಣ ಕಿವಿಮಾತು | V Somanna Criticism Siddaramaiah Budget Karnataka Gvd



ಅಹಂಕಾರ ಬಿಟ್ಟು ಕೇಂದ್ರದ ಜೊತೆ ಕೆಲಸ ಮಾಡಿ: ಸಿಎಂ ಸಿದ್ದರಾಮಯ್ಯಗೆ ಸೋಮಣ್ಣ ಕಿವಿಮಾತು | V Somanna Criticism Siddaramaiah Budget Karnataka Gvd

ಅಹಂಕಾರ ಬಿಟ್ಟು ಕೇಂದ್ರ ಸರ್ಕಾರದ ಜೊತೆ ಕೈಜೋಡಿಸಿ ಎಂದು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದ್ದಾರೆ.

ಬೆಂಗಳೂರು (ಮಾ.07): ಅಹಂಕಾರ ಬಿಟ್ಟು ಕೇಂದ್ರ ಸರ್ಕಾರದ ಜೊತೆ ಕೈಜೋಡಿಸಿ ಎಂದು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಿವಿಮಾತು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಪಾರದರ್ಶಕ ಆಡಳಿತವನ್ನು ನೋಡಿ ಕಾಂಗ್ರೆಸ್ ಪಕ್ಷದ ಸರ್ಕಾರ ಕಲಿಯಬೇಕು. ಸಾಲದ ಪ್ರಮಾಣ ಏರಿಸುವ ಮೂಲಕ ರಾಜ್ಯವನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಇಂತಹ ಬಜೆಟ್ ನಿರೀಕ್ಷೆ ಮಾಡಿರಲಿಲ್ಲ ಎಂದರು.

ನಾಲ್ಕು ಸಾವಿರ ಕನ್ನಡ ಶಾಲೆಗಳನ್ನು ಮುಚ್ಚಿಸಿ ಅಲ್ಪಸಂಖ್ಯಾತ ವರ್ಗದವರಿಗೆ ನಾಲ್ಕು ಸಾವಿರ ಕೋಟಿ ರು. ಅನುದಾನ ನೀಡಿದ್ದಾರೆ. ಮೌಲ್ವಿಗಳಿಗೆ ಸಹಾಯಧನ ನೀಡಿದ್ದಾರೆ. ಮುಜಾರಾಯಿ ದೇವಸ್ಥಾನ ಅರ್ಚಕರಿಗೆ ತಸ್ಥಿಕ್ ಹಣ ಏರಿಕೆ ಮಾಡಿಲ್ಲ. ದೇವಸ್ಥಾನ ಅಭಿವೃದ್ದಿ ಹಣ ನೀಡಿಲ್ಲ. ಇದೊಂದು ಅಲ್ಪಸಂಖ್ಯಾತರ ಓಲೈಕೆ ಸರ್ಕಾರ ಎಂದು ಟೀಕಿಸಿದರು. ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಸರ್ಕಾರ ಮಾಡಿರುವ ಸಾಲದ ಶೇಕಡಾ 50 ರಷ್ಟು ಹಣ ಕೇವಲ ಬಡ್ಡಿ ಪಾವತಿಸಲು ಮತ್ತು ನೌಕರರ ವೇತನಕ್ಕೆ ವಿನಿಯೋಗವಾಗುತ್ತಿದೆ.

ಸಾಧನೆಗಳನ್ನು ಜನರ ಮುಂದೆ ಇಡಲಿ

ರಾಜ್ಯ ಹಣಕಾಸಿನ ಸ್ಥಿತಿ ಶೋಚನಿಯವಾಗಿದೆ. ರೈತರಿಗೆ, ಕೂಲಿ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಈ ಬಜೆಟ್‌ನಿಂದ ಯಾವುದೇ ಪ್ರಯೋಜನವಿಲ್ಲ ಎಂದು ಸೋಮಣ್ಣ ಹೇಳಿದರು. ಸಿದ್ದರಾಮಯ್ಯ ಅವರು 17 ಬಜೆಟ್‌ಗಳಲ್ಲಿ ಮಾಡಿರುವ ಸಾಧನೆಗಳನ್ನು ಜನರ ಮುಂದೆ ಇಡಲಿ. ನೂರಾರು ಯೋಜನೆಗಳನ್ನು ರೂಪಿಸುತ್ತಾರೆ ಅದು ಪುಸ್ತಕದಲ್ಲಿ ಯೋಜನೆಗಳು ಇರುತ್ತದೆ. ಧ್ವನಿ ಇಲ್ಲದ, ಆಸರೆ ಇಲ್ಲದೇ ಇರುವ ಜನರಿಗೆ ಆಸರೆಯಾಗಬೇಕು ವಿಕಸಿತ ಭಾರತದ ಕೇಂದ್ರ ಸರ್ಕಾರದ ಜೊತೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗದವರಿಗೆ, ಬಡವರಿಗೆ, ಮಧ್ಯಮ ವರ್ಗದವರಿಗೆ ಈ ಬಜೆಟ್ ಏನು ಉಪಯೋಗವಿಲ್ಲ. ಆಳವಾದ ಅನುಭವ ಇರುವ ಸಿದ್ದರಾಮಯ್ಯರವರು ಸೋತಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷ ಶೇಕಡ 90ರಷ್ಟು ಜನರ ವಿಶ್ವಾಸ ಕಳೆದುಕೊಂಡಿದೆ ಎಂದರು.



Source link

Leave a Reply

Your email address will not be published. Required fields are marked *