ರಿಫೈನರಿಯ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ವದಂತಿಗೆ ಬ್ರೇಕ್ ಹಾಕಿದ ಎಮ್​ಆರ್​ಪಿಎಲ್!

ರಿಫೈನರಿಯ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ವದಂತಿಗೆ ಬ್ರೇಕ್ ಹಾಕಿದ ಎಮ್​ಆರ್​ಪಿಎಲ್!


ರಿಫೈನರಿಯ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ವದಂತಿಗೆ ಬ್ರೇಕ್ ಹಾಕಿದ ಎಂಆರ್ಪಿಎಲ್!

ಮಂಗಳೂರು, ಮಾರ್ಚ್ 07: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ತನ್ನ ರಿಫೈನರಿಯ ಕೆಲವು ಘಟಕಗಳನ್ನು ಕಚ್ಚಾ ತೈಲದ ಕೊರತೆಯಿಂದ ಸ್ಥಗಿತಗೊಳಿಸಲಾಗಿದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದೆ. ಕಂಪನಿಯ ಕಾರ್ಯಾಚರಣೆಗಳು ಸಾಮಾನ್ಯವಾಗಿ ನಡೆಯುತ್ತಿವೆ ಎಂದು ಸ್ಪಷ್ಟಪಡಿಸಿದೆ.

ಸೋಶಿಯಲ್ ಮೀಡಿಯಾ ವದಂತಿ ಸುಳ್ಳು ಎಂದ ರಿಫೈನರಿ

ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ OilPrice.com ಪ್ರಕಟಿಸಿದ ಪೋಸ್ಟ್‌ನಲ್ಲಿ ಪರ್ಷಿಯನ್ ಗಲ್ಪ್ ಪ್ರದೇಶದ ಉದ್ವಿಗ್ನತೆಯಿಂದ ಕಚ್ಚಾ ತೈಲ ಸಾಗಣೆ ವಿಳಂಬವಾಗಿದೆ, ಮಂಗಳೂರು 3 ಲಕ್ಷ ಬ್ಯಾರೆಲ್ ಸಾಮರ್ಥ್ಯದ ರಿಫೈನರಿಯ ಕೆಲವು ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಈ ಮಾಹಿತಿ ತಪ್ಪಾಗಿದೆ ಎಂದು MRPL ಸ್ಪಷ್ಟಪಡಿಸಿದೆ. ಈ ರೀತಿಯ ವದಂತಿಗಳು ವಾಸ್ತವಕ್ಕೆ ದೂರವಾಗಿದ್ದು, MRPL ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ರಿಫೈನರಿ ಕಾರ್ಯಾಚರಣೆ ಮುಂದುವರಿಸಲು ಬೇಕಾದಷ್ಟು ಕಚ್ಚಾ ತೈಲವನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿದೆ.

ಈ ರಿಫೈನರಿಯಲ್ಲಿ ಯಾವುದೇ ಘಟಕವನ್ನು ಸ್ಥಗಿತಗೊಳಿಸಲಾಗಿಲ್ಲ ಹಾಗೂ ಸಾಮಾನ್ಯ ಸಾಮರ್ಥ್ಯದಲ್ಲೇ ಕಾರ್ಯನಿರ್ವಹಣೆ ಮುಂದುವರಿದಿದೆ ಎಂದು MRPL ಹೇಳಿದೆ. ತಪ್ಪು ಮಾಹಿತಿಗಳು ಹರಡದಂತೆ ಸಾರ್ವಜನಿಕರು ಈ ಸ್ಪಷ್ಟೀಕರಣವನ್ನು ಗಮನಿಸಬೇಕು ಎಂದು ಕಂಪನಿ ಮನವಿ ಮಾಡಿದೆ. ಇದರ ನಡುವೆ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕೂಡ ತಳ್ಳಿ ಹಾಕಿದೆ.

ಇದನ್ನೂ ಓದಿ ಅಡಿಕೆ ಬೆಳೆಗಾರರಿಗೆ ಬಜೆಟ್‌ನಲ್ಲಿ ಶುಭ ಸುದ್ದಿ: ಚುಕ್ಕಿ, ಹಳದಿ ಎಲೆ ರೋಗ ನಿಯಂತ್ರಣಕ್ಕೆ 10 ಕೋಟಿ ರೂ.

ದೇಶದಲ್ಲಿ ಸಾಕಷ್ಟು ಇಂಧನ ಸಂಗ್ರಹವಿದ್ದು, ಪೂರೈಕೆ ಮತ್ತು ವಿತರಣೆ ವ್ಯವಸ್ಥೆ ಸಾಮಾನ್ಯವಾಗಿ ನಡೆಯುತ್ತಿದೆ ಎಂದು ಕಂಪನಿ. ಇದೇ ವೇಳೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಕೂಡ ಜಾಗತಿಕ ಭೌಗೋಳಿಕ ರಾಜಕೀಯ ಸವಾಲುಗಳ ನಡುವೆಯೂ ಇಂಧನ ಸರಬರಾಜಿನಲ್ಲಿ ಯಾವುದೇ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *